ಜಗಜ್ಯೋತಿ ಬಸವಣ್ಣನವರ ಜಯಂತಿ ಪ್ರಯುಕ್ತ ಈ ಲೇಖನ : ಬನ್ನಿ ಬಸವ ಬೆಳಕಿನಲ್ಲಿ ನಡೆಯೋಣ

ಶಹಾಪುರ : 12 ನೇ ಶತಮಾನದಲ್ಲಿ ವಚನಕಾರರಲ್ಲಿಯೇ ಅಗ್ರಗಣ್ಯ ಶ್ರೇಷ್ಠ ವಚನಕಾರ, ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಸಮಾನತನೆಯ, ರಾಜನೀತಿಯನ್ನು ರೂಪಿಸಿರುವ ಬಸವಣ್ಣನವರ ೮೯೨ ನೇ ಜಯಂತಿಯನ್ನು ನಾವು ಏ.೩೦ ರಂದು ಆಚರಣೆ ಮಾಡುತ್ತಿದ್ದೇವೆ.ಬಸವಣ್ಣವರು ಬುದ್ದನ ಉಪದೇಶಗಳ ತತ್ವಗಳ ಬುನಾದಿಯಲ್ಲಿ ಸಮಾಜದಲ್ಲಿರುವ ಮೂಡನಂಬಿಕೆ, ಅಸಮಾನಾತೆ, ಪ್ರಾಣಿ ಪಕ್ಷಿಗಳಿಗೂ ಕ್ಷೇಮವನ್ನು ಬಯಸುವುದು ಹಾಗೂ ಲೋಕದ ಡೊಂಕನ್ನು ತಿದ್ದಲು ಎನ್ನ ಅರಿವೇ ಗುರು ಎಂದು ಸಾರಿದರು. ಕೂಡಲಸಂಗನ ಒಲಿಯಲು ಇಚ್ಚಿಸುವ ಶರಣರನ್ನು ಶರಣು- ಶರಣಾರ್ಥಿಯೆಂದು ಅಪ್ಪಿಕೊಂಡರು.೧೨ ನೇ ಶತಮಾನದಲ್ಲಿ ವಚನಕಾರರ ಯುಗವೆಂದು ಕರೆದರೆ ತಪ್ಪಾಗಲಿಕ್ಕಿಲ್ಲ. ಅಂದು ಬಸವಣ್ಣನವರ ಕಾಲದಲ್ಲಿ ಕುಲ ಕಸಬಿನ ಮೇಲೆ ಜಾತಿಯ ವರ್ಣಗಳ ವ್ಯವಸ್ಥೆಯ ಮೇಲೆ ಜಾತಿಯನ್ನು ಗುರುತಿಸುತ್ತಿದ್ದರು. ಆ ಕುಲಕಸಬಿನಲ್ಲಿ ಮೇಲು- ಕೀಳು ಎಂದು ಅಳೆದಿರುವುದು ಇದೆ.ಆ ಎಲ್ಲಾ ಜಾತಿ,ವರ್ಗಗಳಿಂದ ಶರಣರನ್ನು ಒಂದಡೆ ಸೇರಿಸಿ ಶರಣರ ಆಚಾರ-ವಿಚಾರ ವಿನಿಮಯಕ್ಕಾಗಿ ಶರಣರ ಲೋಕದ ಹಿತವನ್ನು ಬಯಸುವ ಉದ್ದೇಶದಿಂದ ಶರಣರ ಸಂಸತ್ತು ಎಂದೇ ಕರೆಯುವ ಅನುಭವ ಮಂಟಪ ನಿರ್ಮಿಸಿದರು.

ಬಸವಣ್ಣನವರು ಸಮಾಜದ ಸುಧಾರಣೆಗಾಗಿ ವಚನಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಇಂದಿಗೂ ವ್ಯಕ್ತಿಯ ನಡವಳಿಕೆಗೆ ಮತ್ತು ಸಮಾಜದಲ್ಲಿನ ಘಾತಕ ಕೃತ್ಯಗಳಿಗೆ, ಅಜ್ಞಾನಕ್ಕಿರುವ ಕೇಡಿನ ಕುರಿತು ತಿಳಿದು ಕೊಂಡು ನಾವು ಬದಲಾಗಲು ನಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಲು ಇವರ ವಚನಗಳು ನಮಗೆ ಕೈಗನ್ನಡಿಯಾಗಿವೆ. ಇಂದು ಯಾವುದೇ ಕಾರ್ಯಕ್ರಮ ನಡೆದರೆ ರಾಜ್ಯಭಾರ ನಡೆಸುವವರಿಂದಿಡಿದು ಕಾರ್ಯಾಂಗದ ವ್ಯವಸ್ಥೆಯ ಅಧಿಕಾರಿಗಳ ಹಿನ್ನಲೆಯಲ್ಲಿಯೂ ನಾವು ಯಾವ ಸಮಾಜ, ಯಾವ ಧರ್ಮದವರು ಎಂದು ತಿಳಿದುಕೊಂಡು ಆಮೇಲೆ ಆ ಘಟನೆಯ ತೆಗೆದುಕೊಳ್ಳುವ ನಿರ್ಧಾರಗಳನ್ನು ನಾವು ಆ ಧರ್ಮ ಜಾತಿ ಹಿನ್ನಲೆಯಲ್ಲಿಯಿಂದ ಬಂದಿರುವ ವ್ಯಕ್ತಿಯನ್ನು ಪೂರ್ವಗ್ರಹದಿಂದ ಅವರನ್ನು ಅಳೆಯುತ್ತಿರುವುದು ಇದು ಎಂತಾ ಕಾಲವಯ್ಯ ಎಂದು ಕಾಡುತ್ತಿದೆ. ಹಾಗಾಗಿ ಬಸವಣ್ಣನವರು ವಚನಗಳ ಮೂಲಕ ನಾವು ಎಚ್ಚರಿಸಿಕೊಂಡು ಸಮಾಜವನ್ನು ಮುನ್ನಡೆಸಬೇಕಿದೆ.

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ ಇವ ನಮ್ಮವ ಇವನಮ್ಮನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ !!

ದಯವಿಲ್ಲದ ಧರ್ಮವಾವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ !!

ದಯವಿಲ್ಲದ ಧರ್ಮ ಯಾವುದಾದರೇನು ಅದು ಧರ್ಮಮೇ ಅಲ್ಲಾ ಧರ್ಮ ಅನ್ನುವುದು ಇದ್ದರೆ ಅದು ಮನುಕುಲವನ್ನು ಮತ್ತು ಸಕಲ ಜೀವರಾಶಿಗೂ ಲೇಸನ್ನು ಬಯಸುವುದು ಧರ್ಮ ಇರಬೇಕು ಹೊರತು ಆಡಂಭರದ ಆಚರಣೆಗಳಿಂದ ಕೂಡಿದ ಕುಲ ಕುಲವೆಂದು ಗುರುತಿಸುವ ಧರ್ಮ ಧರ್ಮವಲ್ಲಾ ಎಂದರು.ಇಂದಿನ ವರ್ತಮಾನ ಕಾಲದಲ್ಲಿ ಯುವ ಪೀಳಿಗೆಗೆ ಕಾಯಕ ನಿಷ್ಠೆ, ಸತಿ-ಪತಿ ಜೀವನ, ಮೌಢ್ಯತೆ, ಅಕ್ಷರ ಅರಿವು ಮುಂತಾದ ವಿಷಯಗಳ ಕುರಿತು ವಚನಗಳಲ್ಲಿ ಉಲ್ಲೇಖಿಸಿರುವ ಸಾರವನ್ನು ನಮ್ಮ ಭಕ್ತಿ- ಭಾವಗಳಲ್ಲಿ ಅಳವಡಿಸಿಕೊಂಡರೆ ಅದುವೇ ಸಂಗನೊಲಿದAತಾಗುತ್ತದೆ.ಇಂತಹ ಅನೇಕ ವಚನಗಳಿಂದ ಬಸವಣ್ಣನವರು ಸಮಾಜದಲ್ಲಿದ್ದ ಲಿಂಗಬೇದ ಜಾತಿ ಬೇದ, ಧರ್ಮಬೇದ ಮತ್ತು ಕಾಯಕ ಭೇದ , ಸಾಮರಸ್ಯತೆ, ಹಾಗೂ ಮೌಢ್ಯತೆಯಲ್ಲಿನ ಕಗ್ಗತ್ತಲ್ಲನ್ನು ಓಡಿಸಿ ಬಸವ ಬೆಳಕನ್ನು ಚೆಲ್ಲಿದರು. ಶರಣ ಸಂಪ್ರದಾಯದ ಜನರಲ್ಲಿ ಘಳಿಗೆಗೊಮ್ಮೆ ಕುಂತ್ರು- ನಿಂತ್ರು ಸಹ ಬಸವ ಬಸವ ಎಂದು ಜಪಿಸುತ್ತಿರುವುದು ಅವರ ವಚನದ ಪ್ರಭಾವ ನಾವು ಶರಣ ಚಿಂತನೆಯ ವಚನೋಕ್ತಿಗಳ ವಿಚಾರ- ವಿನಿಮಯಕ್ಕಾಗಿ ಪ್ರತಿ ಸಮುದಾಯದಲ್ಲಿ ವಚನ- ಓದು ಎನ್ನುವ ಉದ್ದೇಶದಿಂದ ಶರಣರ ಚಿಂತನ ಮೇಳ ಏರ್ಪಡಿಸಲಿ ಎನ್ನುವುದು ನಮ್ಮ ಆಸೆ.ಬುದ್ದ, ಬಸವಣ್ಣನ ಮತ್ತು ಅಂಬೇಡ್ಕರ್ ರವರ ಆಚಾರ- ವಿಚಾರಗಳು ನಮ್ಮಲ್ಲಿ ಬೆಳಸಿಕೊಳ್ಳೊಣ ಈ ಶ್ರೇಷ್ಠರ ನೆರಳಲ್ಲಿ ನಡೆಯೋಣ.ಬಸವಣ್ಣನವರ ಸಮಕಾಲಿನ ಎಲ್ಲಾ ಶರಣರನ್ನು ವಚನಕಾರರನ್ನು ನೆನೆಯೊಣಾ ಬಸವಣ್ಣನವರು ನೀಡಿರುವ ವಚನೋಕ್ತಿಯ ಬೆಳನಕಿನಲ್ಲಿ ನಡಿಯೋಣ.ಬಸವ ಧರ್ಮ ಬೆಳಗಲಿ ಸಂವಿಧಾನ ಉಳಿಯಲಿ. ಎಲ್ಲರಿಗೂ ೮೯೨ ನೇ ಬಸವ ಜಯಂತಿಯ ಶುಭಾಷಯಗಳು

ಶಿವಕುಮಾರ ಬಿ ಮುದಕನ್