ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ

ಯಾದಗಿರಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ಅವರು ರವಿವಾರ ನಾಮಪತ್ರ ಸಲ್ಲಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ನಾರಾಯಣೋರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷದಲ್ಲಿ ಪತ್ರಕರ್ತರ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ.ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಆರ್ಥಿಕ ನೆರವು ಕಲ್ಪಿಸಲಾಗಿದೆ. ಇದಲ್ಲದೇ ಕ್ರೀಡಾಕೂಟಗಳನ್ನು ನಡೆಸುವ ಮೂಲಕ ಮಾನಸಿಕ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

         ಮಹಿಳೆಯರಿಗಾಗಿ ಪ್ರತಿ ವರ್ಷ ಕೂಡ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ನಡೆಸಲಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗಿದೆ. ಇದಲ್ಲದೇ ಅವರಿಗಾಗಿ ಕ್ರೀಡಾಕೂಟಗಳನ್ನು ಸಹ ನಡೆಸಲಾಗಿದೆ.ಪತ್ರಕರ್ತರ ಸಂಘದಿಂದ ವೈದ್ಯಕೀಯ ಪರಿಹಾರ ನೀಡುವ ಜೊತೆಗೆ ನಗರಸಭೆಯಿಂದಲೂ ಪತ್ರಕರ್ತರಿಗೆ ಆರ್ಥಿಕ ನೆರವು ಕೊಡಿಸಲಾಗಿದೆ.ಅತ್ಯುತ್ತಮವಾದ ಕೆಲಸ ಮಾಡಿರುವ ಪರಿಣಾಮವಾಗಿ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯ ಮಟ್ಟದ ಉತ್ತಮ ಸಂಘ ಪ್ರಶಸ್ತಿ ಕೂಡ ಲಭಿಸಿದೆ. ಹೀಗಾಗಿ ಮತದಾರರು ಈ ಬಾರಿಯೂ ಕೂಡ ಮತ್ತೊಮ್ಮೆ ಆಶೀರ್ವದಿಸುವ ವಿಶ್ವಾಸವಿದೆ ಎಂದರು.

ರಾಘವೇಂದ್ರ ಕಾಮನಟಗಿ, ನಾಗಪ್ಪ ನಾಯ್ಕಲ್ , ಗಣೇಶ್ ಪಾಟೀಲ್, ಎಸ್.ಎಸ್. ನಾಯಕ, ಮಲ್ಲು ನಗನೂರು, ನಾಗರಾಜ ಮುಗದುಮ, ಸಿದ್ದಪ್ಪ ಲಿಂಗೇರಿ, ವೆಂಕಟಗಿರಿ ದೇಶಪಾಂಡೆ, ಡಾ.‌ಭೀಮರಾಯ ಲಿಂಗೇರಿ, ಮಹೇಶ್ ಗಣೇರ್, ನಾಗರಾಜ ಬೀರನೂರ ಬಸವರಾಜ ಅಂಗಡಿ, ನಾಗರಾಜ ಕೋಟೆ, ದೇವರಾಜ ನಾಯಕ, ಚಂದ್ರಶೇಖರ್, ಮಲ್ಲಾರಾವ್ ಕುಲಕರ್ಣಿ, ಸಿದ್ದನಗೌಡ ಬಿರಾದಾರ, ಬಾಲಪ್ಪ ಕುಪ್ಪಿ, ವಿಶ್ವನಾಥ, ಶರಭು ನಾಟೇಕರ್, ಭೀರಪ್ಪಲಿಂಗಪ್ಪ ಕಿಲ್ಲನಕೇರಾ, ನಾಗರಾಜಗೌಡ ಬಿಳ್ಹಾರ, ವಿಶಾಲ್ ದೋರನಹಳ್ಳಿ, ಮಲ್ಲಯ್ಯ ಪೋಲಂಪಲ್ಲಿ, ಬಸವರಾಜ ಕರೆಗಾರ, ಮಲ್ಲಿಕಾರ್ಜುನ ಮಾಳಿಕೇರಿ, ಬಸವರಾಜ ಕಾಂಬಳೆ, ಶಾಂತಿನಾಥ, ಸುಧೀರ್ ಕೋಟೆ, ಸೇರಿದಂತೆ ಇನ್ನಿತರರಿದ್ದರು.

ಮಲ್ಲಪ್ಪ ಸಂಕೀನ್ ಅಧ್ಯಕ್ಷರ ಅವಧಿಯಲ್ಲಿ ಕೈಗೊಂಡ ಕಾರ್ಯಗಳು”

* ಮೂರುವರೆ ವರ್ಷದಲ್ಲಿ ಉತ್ತಮ ಸಾಧನೆ. 
* ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ. 
* ಕ್ರೀಡಾಕೂಟಗಳ ಆಯೋಜನೆ, ವಿಜೇತರಿಗೆ ಬಹುಮಾನ      ವಿತರಣೆ. 
* ಪತ್ರಕರ್ತರು ಮತ್ತು ಕುಟುಂಬದವರಿಗೆ ವೈದ್ಯಕೀಯ ನೆರವು.
* ನಗರಸಭೆ ವತಿಯಿಂದಲೂ ಆರ್ಥಿಕ ನೆರವು. 
* ರಾಜ್ಯಮಟ್ಟದ ಉತ್ತಮ ಸಂಘ ಎನ್ನುವ ಹೆಗ್ಗಳಿಕೆ.