ಸರಕಾರಿ ಅಧಿಕಾರಿಗಳ ಸೇವೆಯ ಆನಂದ ಯೋಗ’ ಕೃತಿ ಲೋಕಾರ್ಪಣೆ

ಸರಕಾರಿ ಅಧಿಕಾರಿಗಳ ಸೇವೆಯ ಆನಂದ ಯೋಗ’ ಕೃತಿ ಲೋಕಾರ್ಪಣೆ

Mukkanna karigar

       ನನ್ನ ಇತ್ತೀಚಿನ ಕೃತಿ ‘ ಸರಕಾರಿ ಅಧಿಕಾರಿಗಳ ಸೇವೆಯ ಆನಂದ ಯೋಗ’ ಕೃತಿಯನ್ನು ಇಂದು,ಅಕ್ಟೋಬರ್ 17,2025 ರಂದು ಹುಮನಾಬಾದ್ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ದೀಪಿಕಾ ನಾಯ್ಕರ್ ಅವರು ಲೋಕಾರ್ಪಣೆಗೊಳಿಸಿದರು. ಹುಮನಾಬಾದ್ ತಾಲೂಕಾ ಪಂಚಾಯತಿಯ ವಿ ಸಿ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಂಡಿತು.ನಾನು ಹುಮನಾಬಾದ್ ತಾಲೂಕಾ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಇದೇ ಅಗಸ್ಟ್ 22 ರಂದು ತೆಗೆದುಕೊಂಡ ಕೆ ಡಿ ಪಿ ಸಭೆಯ ಅನುಭವವನ್ನಾಧರಿಸಿ ಸರಕಾರಿ ಅಧಿಕಾರಿಗಳಿಗೆ ಆಪ್ತಹಿತನುಡಿಗಳ ರೂಪದಲ್ಲಿ ರಚಿಸಿದ ಪುಸ್ತಕ ಇದಾಗಿದ್ದರಿಂದ ಅದನ್ನಿಂದು ಹುಮನಾಬಾದ್ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ದೀಪಿಕಾ ನಾಯ್ಕರ್ ಅವರಿಂದ ಬಿಡುಗಡೆಗೊಳಿಸಿದೆ.

ಇನ್ನೊಂದು ಪುಸ್ತಕ ” ಭಾರತೀಯ ಹಬ್ಬಗಳ ಸಂಸ್ಕೃತಿ ದರ್ಶನ” ವು ಕೂಡ ಬಿಡುಗಡೆಗೆ ಸಿದ್ಧಗೊಂಡಿದ್ದು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ್ ದಿಲೀಪ್ ಬದೋಲೆಯವರು ಇಷ್ಟರಲ್ಲೆ ಅದನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಕೃತಿ ಲೋಕಾರ್ಪಣೆ ಸಂದರ್ಭದಲ್ಲಿ ಸಹಾಯಕ ನಿರ್ದೆಶಕ ಜಗನ್ನಾಥ ಮತ್ತು ಹುಮನಾಬಾದ್ ತಾಲೂಕಿನ ವಿವಿಧ ಗ್ರಾಪಂಗಳ ಪಿಡಿಒಗಳು,ತಾಪಂ ಸಿಬ್ಬಂದಿಯವರು ಉಪಸ್ಥಿತರಿದ್ದರು.

೧೭.೧೦.೨೦೨೫