ಗಬ್ಬೂರು : ಬೇರೆ ಪಕ್ಷ ತೊರೆದು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆ

ಗಬ್ಬೂರು: ಬಿಎಸ್ಪಿ ಪಕ್ಷದ ಜಿಲ್ಲಾ ಸಂಚಾಲಕರಾದ ಭೂಮಾನಂದ ಹದ್ದಿನಾಳ ಇವರ ನೇತೃತ್ವದಲ್ಲಿ ಗಬ್ಬೂರು ಹೋಬಳಿ ಮಟ್ಟದ ಯುವಕರ ಸಮ್ಮಿಲನ ಕಾರ್ಯಕ್ರಮ ಹಾಗೂ ಬಹುಜನ ಸಮಾಜ ಪಾರ್ಟಿಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಗಬ್ಬೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ವಹಿಸಿ ಮಾತನಾಡಿದ ಎಂ.ಆರ್ ಬೇರಿ ಅವರು ಬಹುಜನ ಸಮಾಜ ಪಕ್ಷದ ಮೂಲ ಧ್ಯೇಯೋದ್ದೇಶಗಳು, ಪಕ್ಷದ ಸಿದ್ಧಾಂತಗಳು, ವೈಚಾರಿಕ ಚಿಂತನೆಗಳು, ಅದರ ಮೌಲ್ಯ, ವಿಚಾರಗಳು, ಹಾಗೂ ಬಿಎಸ್ಪಿ ಪಕ್ಷದ ಮೂಲ ಕಾರಣ ಕರ್ತೃ ದಾದಾ ಕಾನ್ಸಿರಾಮ್ ಜಿ ಸಾಹೇಬರ ಅಖಂಡ ಭಾರತದ ಚಿಂತನೆಗಳು, ಡಾ. ಬಾಬಾ ಸಾಹೇಬರ ಸಂವಿಧಾನ ಭದ್ದ ಕನಸಿನ ಭಾರತವನ್ನು ಕಟ್ಟುವ ಚಿಂತನೆಗಳ ಬಗ್ಗೆ ವಿಸ್ತಾರವಾಗಿ ಯುವಜನತೆಗೆ ಮಾಹಿತಿ ನೀಡಿದರು.

ನಂತರ ಬಸವರಾಜ ಭಂಡಾರಿ ಮಾತನಾಡಿದ ಅವರು, ಬಡ ಮತ್ತು ವಂಚಿತರಿಗಾಗಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಲು ಬಿಎಸ್ಪಿ ಪಕ್ಷದ ಕಾರ್ಯಕರ್ತರ ಉತ್ಸಾಹ ಅತ್ಯಗತ್ಯ ಎಂದರು.ನಂತರ ಗಬ್ಬೂರು ಹೋಬಳಿಯ ವ್ಯಾಪ್ತಿಯ ವಿವಿಧ ಗ್ರಾಮಗಳ ಯುವಕರು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾದರು.ಕಾರ್ಯಕ್ರಮದ ನಿರೂಪಣೆ ಮೋಹನ್ ಕುಮಾರ್ ಸಿಂಗ್ರಿ ಗಬ್ಬೂರು ಅವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯಮಟ್ಟದ ಪ್ರಧಾನ ಕಾರ್ಯದರ್ಶಿಗಳು, ಯೇಸು, ಜಿಲ್ಲಾಮಟ್ಟದ, ತಾಲೂಕುಮಟ್ಟದ, ಮುಖಂಡರುಗಳು ಮತ್ತು ಹೋಬಳಿ ಗ್ರಾಮದ ನೂರಾರು ಯುವ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.