ದೇವದುರ್ಗ: ಭಾರತ ದೇಶ ಸ್ವಾತಂತ್ರ್ಯ ಪಡೆದ ನಂತರ ದೇಶದ ಅಭಿವೃದ್ದಿ ದೃಷ್ಠಿಯಿಂದ ಹಾಗೂ ಸಕಲ ಜೀವರಾಶಿಗಳಿಗೂ ಸಮಾನತೆಯ ದೃಷ್ಠಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿದಾನ ಎಲ್ಲ ವರ್ಗದವರಿಗೂ ಸಮಾನತೆಯನ್ನು ಕಲ್ಪಿಸಿದೆ ಎಂದು ವಕೀಲರಾದ ವೆಂಕಟೇಶ ಬೆಂಗಳೂರು ಅವರು ಹೇಳಿದರು.
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ನಾಗಭೂಷಣ ದೇವಸ್ಥಾನದ ಹತ್ತಿರ
ಸೋಮವಾರರಂದು ಶೃತಿ ಸಂಸ್ಕೃತಿ ಸಂಸ್ಥೆ ರಾಯಚೂರು ಇವರ ಸಹಯೋಗ ಹಾಗೂ ರಾಜ್ಯ ಕಲಾ ಮಂಡಳಿಯ ನಾಯಕರಾದ ಡಿಂಗ್ರಿ ನರಸಪ್ಪ ಅವರ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಡೀ ವಿಶ್ವವೇ ಸುತ್ತಾಡಿಬಂದರೂ ಕೂಡಾ ನಮ್ಮ ದೇಶದಲ್ಲಿರುವ ಸಮಾನತೆಯ ಸಂವಿದಾನ ಯಾವ ದೇಶದಲ್ಲಿಯೂ ಸಿಗುವದಿಲ್ಲಾ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿಸಲ್ಪಟ್ಟ ಭಾರತ ದೇಶದ ಸಂವಿದಾನ ಅತ್ಯಂತ ಪವಿತ್ರತೆಯನ್ನು ಹೊಂದಿದೆ ಇಂತಹ ಪವಿತ್ರ ಸಂವಿದಾನದಡಿಯಲ್ಲಿ ನಾವು ನೀವೇಲ್ಲರೂ ಸಾಗುತ್ತಿದ್ದು ದೇಶಕ್ಕೆ ಪವಿತ್ರ ಸಂವಿದಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಶತಕೋಟಿ ದೇಶದ ಜನರ ಪರವಾಗಿ ದನ್ಯತೆ ತಿಳಿಸಿದರು.
ಸಂವಿಧಾನವನ್ನು ಒಂದು ವಾಕ್ಯದಲ್ಲಿ ಹೇಳಬೇಕಾದರೆ ಸಂವಿಧಾನವು ಮನುಷ್ಯರಾಗಿ ಜೀವನ ಮಾಡುವಂತೆ ಇನ್ನೊಬ್ಬ ಮನುಷ್ಯರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳುತ್ತದೆ ಎಂದು ವಕೀಲರಾದ ಪೂರ್ಣ ಬೆಂಗಳೂರು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಉದ್ಘಾಟನೆ ಗಬ್ಬೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ತಿರುಮಲರೆಡ್ಡಿ ಅವರು ನೆರವೇರಿಸಿದರು. ಕಲಾವಿದರು ಹಾಗೂ ದಲಿತ ಸಂಘಟನೆಯ ಹೋರಾಟಗಾರರಾದ ರಾಜಪ್ಪ ಸಿರವಾರಕರ್ ಅವರ ಕ್ರಾಂತಿಗೀತೆಗಳನ್ನು ಹಾಡಿದರು.
ನರೇಗಾ ಯೋಜನೆಯ ಮಾರ್ಗಸೂಚಿ ಪ್ರಕಾರ ಪ್ರತಿ ದಿನಕ್ಕೆ ರೂ 370 ನಿಗದಿಪಡಿಸಿದ್ದು ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದು ಕೊಂಡು ಪ್ರತಿಯೊಬ್ಬ ಕೂಲಿಕಾರರು ಗುಳೆ ಹೋಗದೇ ನರೇಗಾ ಯೋಜನೆಯಡಿ ನಡೆಯುವ ಕೂಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಗಬ್ಬೂರು ಪಿಡಿಒ ತಿರುಮಲರೆಡ್ಡಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜೆಇ ಸುರೇಶ, ಗ್ರಾ.ಪಂ ಸಿಬ್ಬಂದಿಗಳು, ಬಸವರಾಜ ಸೂರಿ, ಮಾರ್ತಾಂಡ ಗಬ್ಬೂರು, ಮುತ್ತುರಾಜ ಮ್ಯಾತ್ರಿ, ಮಲ್ಲಪ್ಪ ಶಿರಡ್ಡಿ, ಶಾಂತಪ್ಪ, ಕ್ರೈ ಸಂಸ್ಥೆಯ ಮಲ್ಲಯ್ಯ ಖಾನಾಪುರ, ಕಾರ್ಕ್ ನ ಶಿಕ್ಷಕಿಯರಾದ ಮಾಯಮ್ಮ, ಅಶ್ವಿನಿ, ಮೇಟಿಗಳು ಹಾಗೂ ಕೂಲಿಕಾರ್ಮಿಕರು, ಕಿಶೋರಿಯರು ಸೇರಿದಂತೆ ಅನೇಕರು ಇದ್ದರು.