ಬೀದರ್ : ರಾಜ್ಯದಲ್ಲಿ ಮನರೆಗಾ ಯೋಜನೆಯಡಿ ಮಾನವ ದಿನಗಳ ಸೃಜಿಸುವುದರಲ್ಲಿ ಬೀದರ್ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿಗಳ ಅತೀವ ಕಾಳಜಿಯಿಂದಾಗಿ ನರೇಗಾದಲ್ಲಿ ಬೀದರ್ ಜಿಲ್ಲೆ ಮೂರನೇ ಸ್ಥಾನ ದೊರಕಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಏನು ಮಾಡಬಹುದು ಎನ್ನುವುದಕ್ಕೆ ಇದೇ ಸಾಕ್ಷಿ.ಮನರೇಗಾ ಯೋಜನೆಯಡಿ ಮತ್ತೊಂದು ಹೆಜ್ಜೆ ಮುಂದಿಟ್ಟ ಬೀದರ್ ಜಿಲ್ಲಾ ಪಂಚಾಯಿತಿಯು ತನ್ನ ಜಿಲ್ಲೆಯಲ್ಲಿ ಕಾಯಕ ಮಾಸಾಚರಣೆ ಮಾಡಲು ಹೊರಟಿದ್ದು ಏಪ್ರಿಲ್ 30 ರಿಂದ ಮೇ 31ರವರೆಗೆ ಕಾಯಕ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮನರೆಗಾ ಯೋಜನೆಯು ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತಿ ಸಣ್ಣ ರೈತರು, ಮಹಿಳೆಯರು, ದುಡಿಯುವ ವರ್ಗ, ದುರ್ಬಲ ವರ್ಗದವರಿಗೆ ಬಡ ಕೂಲಿಕಾರರ ಬದುಕುಗಳಿಗೆ ಆಸರೆಯಾಗುವ ಮಹತ್ವದ ಯೋಜನೆಯನ್ನಾಗಿಲು ಸಹಕಾರಿ. ಬಡಜನರು ಕೂಲಿ ಕೆಲಸ ಮಾಡುವವರು ಬೇರೆ ರಾಜ್ಯ, ಜಿಲ್ಲೆಗಳಿಗೆ ಕೂಲಿ ಕೆಲಸಕ್ಕೆ ಹೋಗುವುದನ್ನು ತಡೆದು ತಾನಿರುವ ಸ್ಥಳದಲ್ಲಿಯೇ ಆರ್ಥಿಕ ವರ್ಷದಲ್ಲಿ ಒಂದು ನೂರು ದಿನಗಳ ಕೂಲಿ ಕೆಲಸ ನೀಡಲಾಗಿದೆ. ಪ್ರಸ್ತುತ ಬೇಸಿಗೆ ಆರಂಭವಾಗಿದ್ದು ರೈತರು,ಬಡವರು ಕೂಲಿಕಾರರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಖಾಲಿ ಇರುವುದರಿಂದ ಅವರಿಗೆ ಕೂಲಿ ಕೆಲಸ ನೀಡಲಾಗುತ್ತಿದೆ. ಕಾಯಕ ಮಾಸಾಚರಣೆ ಯು ಸಂದರ್ಭದಲ್ಲಿ 30 ದಿನಗಳಲ್ಲಿ ಒಂದು ಲಕ್ಷ ಕೂಲಿಕಾರರಿಗೆ ಕೆಲಸ ನೀಡುವ ಉದ್ದೇಶ ಹೊಂದಲಗಿದೆ ಎಂದು ನೋಡಲ್ ಅಧಿಕಾರಿಗಳಾದ ಮುಕ್ಕಣ್ಣ ಕರಿಗಾರ ತಿಳಿಸಿದ್ದಾರೆ.

* ಏಪ್ರಿಲ್ 28 ಮತ್ತು 29 ರಂದು ಬೀದರ್ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಕಾಯಕ ಮಾಸಾಚರಣೆ ಬಗ್ಗೆ ಅರಿವು ಮೂಡಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸುವುದು .
* ಏಪ್ರಿಲ್ 30ರಂದು ಬಸವ ಜಯಂತಿ ನಿಮಿತ್ತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡುವ ಮೂಲಕ ಕಾಯಕ ಮಾಸಾಚರಣೆ ಸ್ಥಳದಲ್ಲಿಯೇ ಆಚರಿಸುವುದು.
* ತಾಲೂಕುಗಳ IEC ಸಮಾಲೋಚಕರು ಮತ್ತು ಗ್ರಾಮ ಪಂಚಾಯತಿಗಳ ಕಾಯಕ ಮಿತ್ರರು ಪಂಚಾಯತ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕೆ, ಬರುವಂತೆ ಪ್ರೇರೇಪಿಸುವುದು.
* ತಾಲೂಕಾ EC ಗಳಸುವುದು ಗುರುವಾರ ಕಡ್ಡಾಯವಾಗಿ ರೋಜಗಾರ ದಿನಾಚಾರಣೆಯನ್ನು ಆಚರಿಸಿ, IEC ಚಟುವಟಿಕೆಗಳನ್ನು ಕೈಗೊಳ್ಳ ಬೇಕು ಹಾಗು ಅರ್ಹ ಕೂಲಿಕಾರರಿಗೆ ಹೊಸ ಉದ್ಯೋಗ ಚೀಟಿಗಳನ್ನು ನೀಡಬೇಕು.
* ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, TAE ಗಳು ಮತ್ತು TC ಗಳು ಪ್ರತಿ ಗ್ರಾಮ ಪಂಚಾಯತಗಳಲ್ಲಿ ಕನಿಷ್ಠ 500 ಜನ ಕೂಲಿಕಾರರಿಗೆ ಕೆಲಸ ನೀಡುವಂತಹ ಕೆರೆ ಹೂಳೆತ್ತುವ, ನಾಲಾ ಹೂಳೆತ್ತುವ ಹಾಗು CCT ಕಾಮಗಾರಿಗಳಂಹ ಕಾಮಗಾರಿಗಳ ಹೆಚ್ಚು ಸಂಖ್ಯೆಯ NMR ಗಳನ್ನು ಸೃಜಿಸುವುದು. ಹಾಗು ಒಂದು NMR ಮುಕ್ತಾಯಗೊಂಡ ಕೂಡಲೇ ಮತ್ತೊಂದು NMR ಕಾಮಗಾರಿ ಪ್ರಾರಂಭವಾಗುವಂತೆ ನೋಡಿಕೊಳ್ಳತಕ್ಕದ್ದು ಯಾವುದೇ ಕಾರಣಕ್ಕೂ, NMR ಮುಕ್ತಾಯಗೊಂಡಿದೆ.ಮತ್ತೊಂದು NMR ತೆಗೆಯತ್ತೇವೆ ಎಂದು ಹೇಳುತ್ತಾ ಕೂಲಿಕಾರರ ಕೆಲಸವನ್ನು ನಿರಾಕರಿಸತಕ್ಕದ್ದಲ್ಲ.
* ಸಹಾಯಕ ನಿರ್ದೇಶಕರು (ಗ್ರಾ.ಉ) ಇವರುಗಳು ನಿಯತವಾಗಿ ಮೇಲ್ವಿಚಾರಣೆ ಮಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಕೆಲಸ ನೀಡಲಾಗುತ್ತಿದೆ ಎನ್ನುವುದನ್ನು ಖಚಿತ ಪಡಿಸಕೊಳ್ಳತಕ್ಕದ್ದು.
* ಕಾರ್ಯನಿರ್ವಾಹಕ ಅಧಿಕಾರಿಗಳು ಮೇಲಿಂದ ಮೇಲೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು.
* ಬೇಸಿಗೆ ಕಾಲವಾಗಿದ್ದರಿಂದ ಕಾಮಗಾರಿಗಳ ಸ್ಥಳಗಳಲ್ಲಿ ಕೂಲಿಕಾರರಿಗೆ ನೆರಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡತಕ್ಕದ್ದು ಹಾಗು ಕಾಮಗಾರಿಗಳ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟಿರಬೇಕು. ಮತ್ತು ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರಗಳನ್ನು ಏಪರ್ಡಿಸಬೇಕು.
ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ
ಈ ಹಿಂದೆ ಮನರೆಗಾ ಯೋಜನೆಯಡಿ ಯಾದಗಿರಿ ಜಿಲ್ಲೆ ಮಾನವ ದಿನಗಳನ್ನು ಸೃಷ್ಟಿಸುವುದರಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮನರೆಗಾ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಟಿಸುವುದರಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕೊನೆಯ ಸ್ಥಾನದಲ್ಲಿದೆ. ಇಲ್ಲಿನ ಜನ ಪ್ರತಿನಿಧಿಗಳ ನಿಸ್ಕಾಳಜಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ತೀವ್ರ ನಿಷ್ಕಾಳಜಿಯಿಂದಾಗಿ ಹಿಂದುಳಿದಿದೆ. ಯಾವುದೇ ಕೆಲಸವಾಗಬೇಕಾದರೆ ಅಧಿಕಾರಿಗಳ ಶ್ರಮ ಅತ್ಯಗತ್ಯ.