ಕಾಶ್ಮೀರದ ಪಹಾಲ್ಗಮ್ ಹೀನ ಕೃತ್ಯ ಮೈನುದ್ದೀನ್ ಜಮಾದಾರ್ ಖಂಡನೆ

ಶಹಾಪುರ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ  ಪ್ರವಾಸಿ ಸ್ಥಳದಲ್ಲಿ ಉಗ್ರರಿಂದ ನಡೆದ ಹೀನ ಕೃತ್ಯಕ್ಕೆ 28 ಜನ ಬಲಿಯಾಗಿರುವುದು ಖಂಡನೀಯ ಎಂದು ಕೆಪಿಸಿಸಿ ರಾಜ್ಯ ಸಂಯೋಜಕರಾದ ರಾಜ್ ಮೈನುದ್ದೀನ್ ಜಮಾದಾರ್ ದೋರನಹಳ್ಳಿ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಭದ್ರತಾ ಲೋಪವೇ ಇದಕ್ಕೆ ಕಾರಣವಾಗಿದ್ದು, ಸೌಹಾರ್ದತೆಯ ಭಾರತದಲ್ಲಿ ಯಾವತ್ತೂ ಈ ರೀತಿಯ ಘಟನೆ ನಡೆದಿರಲಿಲ್ಲ. ದೇಶ ವಿದೇಶದ ಪ್ರವಾಸಿಗರಿಗೆ ಈ ಘಟನೆ  ಬೆಚ್ಚಿಬಿಳಿಸಿದೆ. ಹಿಂದುಸ್ಥಾನದಲ್ಲಿ ಹುಟ್ಟಿದ ನಾವು ಧರ್ಮ ಜಾತಿಯನ್ನದೆ ಹಿಂದೂ ಮುಸ್ಲಿಮರೆನ್ನದೆ, ಅಣ್ಣ ತಮ್ಮಂದಿರಾಗಿ ಸೌಹಾರ್ದತೆಯಿಂದ ದೇಶದಲ್ಲಿ ಬಾಳುತ್ತಿದ್ದೇವೆ.
ಉಗ್ರವಾದಿಗಳು ಹಿಂದೂ ಮುಸ್ಲಿಂ ಎಂಬ ಧರ್ಮ-ಜಾತಿಯ ವಿಷಬೀಜ ಬಿತ್ತುತ್ತಿದ್ದು ಇವೆಲ್ಲವನ್ನು ನಾವು ಸಹಿಸುವುದಿಲ್ಲ. ನಾವೆಲ್ಲರೂ ಭಾರತೀಯರು. ಜಾತೀಯತೆಯನ್ನು ಮೀರಿ ಬೆಳೆದವರು. ಈ ರೀತಿ ಧರ್ಮಾಂಧತೆಯ ವಿಷಬೀಜ ಬಿತ್ತಿ ನಮ್ಮಲ್ಲಿಯೇ ಕ್ರೌರ್ಯ ಭಾವನೆ ಹಚ್ಚುವುದು ಖಂಡನೀಯ. ದೇಶಕ್ಕಾಗಿ ಯಾವ ಬಲಿದಾನಕ್ಕೂ ನಾವು ಸಿದ್ಧರಿದ್ದೇವೆ.
ಕೇಂದ್ರ ಮತ್ತು ರಾಜ್ಯ ಸರಕಾರ ಉಗ್ರ ನೆಲೆಗಳನ್ನು ಹುಡುಕಿ ಬೇರು ಸಮೇತ ಕಿತ್ತೆಸೆಯಬೇಕು.
ಕಾಶ್ಮೀರ ದೇಶದ ಸ್ವರ್ಗವಿದ್ದಂತೆ.ಈಲ್ಲಿಗೆ ದೇಶ ವಿದೇಶದ ಪ್ರವಾಸಿಗರು ಬರುತ್ತಾರೆ. ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ಈ ಸಂದರ್ಭದಲ್ಲಿ ಪಹಲ್ಗಾಮ್ ದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಕುಟುಂಬಕ್ಕೆ ಜಮಾದಾರ್ ಸಾಂತ್ವಾನ ಹೇಳಿದರು.

Leave a Reply

Your email address will not be published. Required fields are marked *