ನಾಳೆ ವಿಶ್ವ ಜಲದಿನಾಚರಣೆ ನಿಮಿತ್ತ ಈ ಲೇಖನ  : ಜೀವ ಜಲ ಸಂರಕ್ಷಣೆಯಲ್ಲಿ ಮನುಷ್ಯ ಜೀವಿಯ ಮನೋಭಾವ ಬದಲಾಗಲಿ..!

“ನೈಸರ್ಗಿಕ ಸಂಪತ್ತನ್ನು ನೈಸರ್ಗಿಕ ವಿಧಾನಗಳಿಂದ ಉಳಿಸೋಣ”

ಪ್ರತಿ ವರ್ಷದಂತೆ ಈ ವರ್ಷವು ವಿಶ್ವ ಜಲ ದಿನಾಚರಣೆಯನ್ನೆ ನೆನಪಿಸಿಕೊಂಡು ಆಚರಣೆ ಮಾಡುತ್ತೇವೆ. ಈ ದಿನವನ್ನು ಬರೀ ಆಚರಣೆಗೆ ಮಾತ್ರ ಸೀಮಿತ ಮಾಡದೆ ಪ್ರತಿಯೊಬ್ಬರು ಜಲ ಮೂಲಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯಾಗಿದೆ ಎಂದರಿತು ಜಲವನ್ನು ಮಿತವಾಗಿ ಬಳಕೆ ಮಾಡುವುದು, ಜಲ ಮೂಲಗಳ ಸಂರಕ್ಷಣೆ, ಜಲಮೂಲಗಳ ನಾಶ ಜಲ ಮೂಲ ಮಲೀನವಾಗದಂತೆ ಪರೋಕ್ಷವಾಗಿ, ಪ್ರತ್ಯೆಕ್ಷವಾಗಿ ತಡೆಗಟ್ಟಲು ಪ್ರತಿಜ್ಞೆ ಮಾಡಬೇಕು.

ಪ್ರತಿಯೊಬ್ಬ ನಾಗರಿಕರಲ್ಲಿ, ಸಮುದಾಯ ಹಂತದಲ್ಲಿ ನಮ್ಮೆಲ್ಲರ ಜೀವನಕ್ಕೆ ಬೇಕಾಗಿರುವ ಜೀವ ಜಲದ ಮಹತ್ವವನ್ನು ಹಂಚಿಕೊಂಡು ಮುಂದಿನ ದಿನಗಳಲ್ಲಿ ಜೀವನಕ್ಕೆ ನೀರಿನ ಕೊರತೆಯಾಗದಂತೆ ನಮ್ಮ ಹಂತದಲ್ಲಿನ ಪಾತ್ರದ ಕುರಿತು ಚಿಂತನೆ ಮಾಡಿ ಜಲ‌ ಮೂಲಗಳ ಉಳಸುವಿಕೆಯತ್ತ ನಮ್ಮ ಚಿತ್ತವಿರಲಿ ಎನ್ನುವ ಉದ್ದೇಶದಿಂದ ಒಂದೊಂದು ಪ್ರಯತ್ನವನ್ನಾದರು ಮಾಡಲು ಹೆಜ್ಜೆ ಹಾಕಲೇಬೇಕು.

ಈ ನಿಟ್ಟಿನಲ್ಲಿ ಜಲ ಸಂಪತ್ತಿಗೆ ಆದ್ಯತೆ ನೀಡಲು ಮಾರ್ಚ 22 -2028 ರಂದು UN Assembly ಯಲ್ಲಿ 2018 ರಿಂದ 2028ರ ವರೆಗಿನ ಅವಧಿಯನ್ನು  ಜಲದಶಕ ಎಂದು ಘೋಷಿಸಿ ಪ್ರಾಮುಖ್ಯತೆ ನೀಡಿದೆ.

ವಿಶ್ವ ಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಗುರಿಯ ( Sustenable Development Goal ) ಉದ್ದೇಶವು ಎಲ್ಲರಿಗೂ ಶುದ್ದ, ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಮತ್ತು ನೈರ್ಮಲ್ಯ ಸೌಕರ್ಯಗಳನ್ನು ಕಲ್ಪಿಸಿ ಅವುಗಳನ್ನು ಖಚಿತಪಡಿಸಿ ಕೊಳ್ಳುವುದಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಪ್ರತಿದಿನಕ್ಕೆ ಕನಿಷ್ಠ ಕುಡಿಯುವ ನೀರು ಮತ್ತು ಆತನಿಗೆ ದಿನಬಳಕೆ ಸೇರಿದಂತೆ 55 ಲೀಟರ್( Lpcd).ನೀರನ್ನು ಒದಗಿಸುವ ಗುರಿ ಹೊಂದಿದೆ.ಆ ನಿಟ್ಟಿನಲ್ಲಿ ಕೇಂದ್ರ,ರಾಜ್ಯ ಸರಕಾರಗಳು ಹಲವು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ರೂಪಿಸಿಕೊಂಡು ಮುಂದಿನ 30 ವರ್ಷದವರೆಗೆ ಕಾರ್ಯಾಚರಣೆ ಇರುವಂತೆ ದೂರದೃಷ್ಠಿಯಿಂದ ಯೋಜನೆಗಳನ್ನು ರೂಪಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಜಲ ಸಂಪತ್ತು ಇದು. ಸಕಲ ಜೀವರಾಶಿಗಳಿಗೆ ಜೀವಿಸಲು ಇರುವ ಜೀವಾಮೃತ. ನೈಸರ್ಗಿಕವಾಗಿರುವ ಈ ಸಂಪತ್ತನ್ನು ಜನಸಮೂಹದಿಂದ ಸಂರಕ್ಷಣೆಯಾಗುತ್ತಿಲ್ಲ. ಮಿತಬಳಕೆಯಾಗುತ್ತಿಲ್ಲ. ಜಲ ಮೂಲಗಳನ್ನು ಮಲೀನವಾಗುತ್ತಿರುವುದರಿಂದ ಜಲ ಸಂಪತ್ತಿನ ಕೊರತೆಯಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಜಲ ಸಂರಕ್ಷಣೆಗೆ ಪ್ರತಿಜ್ಞೆ ಮಾಡಿ ನಮ್ಮಿಂದಲೇ ಅಥವಾ ನಮ್ಮ ಮನೆ,ಗ್ರಾಮ,ಗ್ರಾಮ ಪಂಚಾಯತ್ ವ್ಯಾಪ್ತಿಯಿಂದಲೇ ಯೋಚಿಸಿ ನೀರನ್ನು ಯಾವ ಯಾವ ಹಂತದಲ್ಲಿ ಮಿತಗೊಳಿಸಬಹುದು,ನೀರು ಸಂರಕ್ಷಿಸಲು ಸಾದ್ಯವಿದೆಯೇ ಅದನ್ನು ಅನುಸರಿಸಿ ಜಲ‌ಸಂರಕ್ಷಣೆ ನಮ್ಮ ಸಂಕಲ್ಪ ಎಂದು ಮುನ್ನುಗ್ಗಬೇಕಿದೆ.

ಇಲಾಖೆ ರೂಪಿಸಿರುವ ಕಾರ್ಯಕ್ರಮ,ಚಟುವಟಿಕೆ, ಯೋಜನೆಗಳು,ತಾಂತ್ರಿಕತೆಯನ್ನು ಸಹಕರಿಸೋಣ. ನಾವು ಒಬ್ಬ ಸಾಮಾನ್ಯ ನಾಗರಿಕರಾಗಿ ನಮ್ಮೂರಿನ ಹಳ್ಳ,ನಮ್ಮೂರಿನ ಹೊಳೆ,ನಮ್ಮೂರಿನ ಕೆರೆ,ನಮ್ಮ ಓಣಿಯ ಭಾವಿ,ನಮ್ಮ ಓಣಿಗೆ ನಿರುಣ್ಣಿಸುವ ಕೈಪಂಪ್,ನಮ್ಮ ಮನೆಯಲ್ಲಿರುವ ನಲ್ಲಿ (FHTC) ನನ್ನದು ನಮ್ಮ ಕುಟುಂಬದ್ದು ಎಂದು ಅದನ್ನು ನಿಗಾವಹಿಸುವಂತದ್ದು ಪ್ರತಿಯೊಬ್ಬರ ಮತ್ತು ಸಮುದಾಯದ ಜವಾಬ್ದಾರಿ ಹಾಗೂ ಸಮುದಾಯ ಮಾಲೀಕತ್ವದ ಭಾವನೆ ನಮ್ಮಲ್ಲಿ ಬೆಳಸಿಕೊಳ್ಳಬೇಕಿದೆ.ಇವುಗಳನ್ನು ಮಲೀನವಾಗದಂತೆ,ಹಾಳು ಮಾಡುವ ಮನಸ್ಸು ನಮ್ಮಲ್ಲಿ ಬರಬಾರದು ಹಾಗೂ ಈ ಜಲ ಮೂಲಗಳ ಸುತ್ತ-ಮುತ್ತ ಸ್ವಚ್ಛತೆ ಕಾಪಾಡಿಕೊಂಡಲ್ಲಿ ಅದು ನಮಗೆ ಸ್ವಚ್ಛ ನೀರು ನೀಡಲಿದೆ.ಜಲ ಮೂಲದ ಹತ್ತಿರ ಸ್ವಚ್ಛತೆ ಕಾಪಾಡದಿದ್ದಲ್ಲಿ ಕಲುಷಿತ ನೀರು ನಮಗೆ ನೀಡುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಜಲ ಮೂಲಕ್ಕೆ ಜಲ ಮಾತೆಯೆ ಎಂದು ಗೌರವಿಸಿ ಪೋಷಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯಗಳಾಗಲಿ.ನೀರಿನ ಬಳಕೆ ಉಳಿಕೆ ಜಲ ಮೂಲಗಳ ರಕ್ಷಣೆಗೆ ಮನುಷ್ಯ ನಲ್ಲಿರುವ ಬೇಜಾಬ್ದಾರಿಯ ನಡವಳಿಕೆಗಳಿಗೆ ಇತಿ ಶ್ರೀ ಹಾಡಿ ಮನುಷ್ಯನಲ್ಲಿರುವ ಮನೋಭಾವ ಬದಲಾಗಬೇಕಿದೆ.ಜಲ ಸಂಪತ್ತನ್ನು ಉಳಿಸೋಣ ಜೀವ ಸಂಪತ್ತು ಬೆಳಿಸೋಣ ಎಂಬುದರ ಮೂಲಕ ಎಲ್ಲರಿಗೂ ವಿಶ್ವ ಜಲ ದಿನಾಚರಣೆಯ ಶುಭಾಷಯಗಳು.

ಲೇಖನ.

ಶಿವಕುಮಾರ ಬಿ.
ನೀರು,ನೈರ್ಮಲ್ಯ ಮತ್ತು ಶುಚಿತ್ವದ ವಿಭಾಗ ಐ.ಇ.ಸಿ
ಜಿ.ಪಂ.ಯಾದಗಿರಿ.