ವಿಶ್ವ ಜಲ ದಿನಾಚರಣೆ : ಜಲ ಸಾಕ್ಷರತೆ ಹೆಚ್ಚಿಸೋಣ,  ಜಲಕ್ಷಾಮ ಹೊಡಿಸೋಣ : ಶಿವಕುಮಾರ

ಶಿವಕುಮಾರ 
ಐಇಸಿ ಸಮಾಲೋಚಕರು
ವಾಶ್ ಘಟಕ ಜಿ.ಪಂ.ಯಾದಗಿರಿ
ಪ್ರತಿ ವರ್ಷ ನಾವು  ಮಾರ್ಚ 22 ರಂದು ವಿಶ್ವ ಜಲದಿನಾಚರಣೆ ಮಾಡುತ್ತೆವೆ ಸಕಲ ಜೀವ ರಾಶಿಗಳಿಗೆ ಬದಕಲ ಬೇಕಾಗಿರುವ ಜಲ ದ ಕುರಿತು ನಾಲ್ಕು ಮಾತನಾಡಿ ಬಿಡುವುದೆ ಹೆಚ್ಚು ಆದರೆ ಜಲದ ಲಭ್ಯತೆ, ಮಿತ ಬಳಕೆ, ಮರುಬಳಕೆ, ಜಲ ಮೂಲಗಳ ಸಂರಕ್ಷಣೆ, ಅವುಗಳ ಸ್ವಚ್ಛತೆ, ಹಾಗೂ ಜಲಮೂಲಗಳನ್ನು ಮಲೀನತೆ ಮಾಡದಂತೆ ಜಾಗೃತಿ ಮೂಡಿಸಲು  ನಾವು ಎಷ್ಟು ಕಟಿಬ್ಬದರಾಗಿದ್ದೆವೆ, ಎಷ್ಟು ಜನರು ಈ ಅಂಶಗಳನ್ನ ಪಾಲಿಸುತ್ತೆವೆ ಎಂದು ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಅವಲೋಚಿಸಿ ಜಲ ಸಂರಕ್ಷಣೆಗೆ ಶಪತ ಮಾಡಬೇಕಿದೆ.
ಜಲಮೂಲಗಳನ್ನು ಪುನಶ್ಚೇತನ ಗೊಳಿಸಲು ಇಲಾಖೆಯಿಂದ ಯೋಜನೆ/ ಕಾರ್ಯಕ್ರಮಗಳಿದ್ದು ಅವುಗಳನ್ನು  ದೂರದೃಷ್ಟಿಯಿಂದ ಸದುಪಯೋಗ ಪಡಿಸಿಕೊಳ್ಳುವ ಕುರಿತು ಕ್ರಮಬದ್ದ ಅನುಷ್ಠಾನ ಗೊಳಿಸಲು ನಾವು ಸಹಕರಿಸಬೇಕು  ಹಾಗೂ ಕೆಲವು  ಸಂಘ, ಸಂಸ್ಥೆಗಳಿಂದ ಆಯ್ದ ಕೆರೆಗಳನ್ನು ಸಂರಕ್ಷಣೆ ಮಾಡಲು ಮುಂದೆ ಬರುತ್ತಿದ್ದು ಅವರ ಜೊತೆಗೆ ಕೈ ಜೊಡಿಸಿ ಯಶಸ್ವಿಗೊಳಿಸಬೇಕು.
 ಇಷ್ಟೆಲ್ಲಾ ಯೋಜನೆ/ ಕಾರ್ಯಕ್ರಮಗಳಿಂದ ಜಲ ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದರೂ ಇಂದು ನಾವು ಜಲ ಸಂಕಟವನ್ನು ಎದುರಿಸುತ್ತಿದ್ದೆವೆ ಬೇಸಿಗೆ ಕಾಲದಲ್ಲಿ ಅಂತು ಕನಿಷ್ಠ ೩ ತಿಂಗಳ ಕಾಲ ಗ್ರಾಮೀಣ & ನಗರ ಪ್ರದೇಶಗಳಲ್ಲಿ  ನೀರು ಸರಬರಾಜು ಮತ್ತು ನಿರ್ವಹಣೆ ಮಾಡುವುದು ತಲೆನೊವು ಆಗಿ ನಾವು ಪರದಾಡುವ ಸನ್ನಿವೇಶ ಅಲ್ಲಲ್ಲಿ ಕಂಡುಬರುತ್ತಿದ್ದೆ ಮತ್ತೆ ಜಲ- ನೀರಿನ ಕುರಿತು ಚರ್ಚೆಗೆ ಮುಂದಾಗುವುದು ಸಹಜ.
ನೀರು ಪಂಚಬೂತಗಳಲ್ಲಿ ಒಂದಾಗಿದೆ ಭೂಮಿ ಮೇಲಿರುವ  ವಾಸಿಸುವ ದಿಗ್ಗಜ ಮನುಷ್ಯನಿಂದ ಇಡಿದು  ಎಲ್ಲಾ ಜೀವರಾಶಿಗಳಿಗೂ ಬದಕಲು  ನೀರು ಪ್ರಮುಖ ಸಂಪತ್ತು.  ನೀರು ಪ್ರಕೃತಿಯ ಸೃಷ್ಠಿ  ಎಲ್ಲಾ ಜೀವ ರಾಶಿಗಳಲ್ಲಿಯು ಮನುಷ್ಯನೇ  ಅತ್ಯಧಿಕ  ನೀರನ್ನು ಬಳಸಿ, ವ್ಯಯಿಸಿ, ಜಲಮೂಲಗಳನ್ನು ಮಲೀನ ಮಾಡುವುದರಲ್ಲಿ ಅಷ್ಟೆ ಅಲ್ಲದೇ  ಜಲ ಮೂಲಗಳಾದ ಹಳ್ಳ, ಕೊಳ್ಳ, ಕೆರೆ ನದಿ ಭಾವಿ ಗಳನ್ನು ನಾಶ ಮಾಡುವುದರಲ್ಲಿ ಮನ್ಯಷ್ಯ ನೇ ನಂ1 ಸ್ಥಾನದಲ್ಲಿದ್ದಾನೆ.
ಮನುಷ್ಯ, ಪ್ರಾಣಿ, ಪಕ್ಷಿ, ಇತರೆ ಜೀವಗಳಿಗೆ ಬದಕಲು ಪ್ರಮುಖವಾಗಿ ಬೇಕಾಗಿರುವ ಈ ನೀರಿನ ಮಹತ್ವ, ಪ್ರಾಮುಖ್ಯತೆ, ಬಳಕೆ, ಮರು ಬಳಕೆ ಹಾಗೂ ಜಲ ಮೂಲಗಳನ್ನು ಸಂರಕ್ಷಣೆ ಮಾಡುವ ಕುರಿತು ಜಲ ಸಾಕ್ಷರತೆಯ ಅರಿವು  ಪ್ರತಿಯೊಬ್ಬರಿಗೂ ಮೂಡಿಸಿ ಜವಾಬ್ದಾರಿಯ ಕುರಿತು ಮನವರಿಕೆ ಮಾಡಬೇಕು ಅಂದಾಗ ಮಾತ್ರ‌ ನಾವು ಪ್ರತಿಯೊಬ್ಬರಿಗೂ ಪ್ರತಿ ದಿನ ಕನಿಷ್ಠ ತಲಾ 55 ಲೀಟರ ಕೊಡಲು ಸಾಧ್ಯವಾಗಿ ಇದನ್ನ ನಾವು ಮುಂದಿನ ಪೀಳಿಗೆಗೆ ನೀರನ್ನು ಅಥವಾ ನೀರಿನ ಮೂಲಗಳನ್ನ ಸಂರಕ್ಷಣೆ ಮಾಡಿಕೊಂಡು ಹೊಗಬಹುದಾಗಿದೆ ಇಲ್ಲಾದಿದ್ದರೆ ನಾವು ಮುಂದೊಂದು ದಿನ ಎಂಲ್ ಗಳ ಲೆಕ್ಕದಲ್ಲಿ ನೀರನ್ನು  ನಮ್ಮ ಮೊಮ್ಮಕ್ಕಳಿಗೆ ನೀರು ತೊರಿಸುವ ಕಾಲ ಬರಬಹುದು.
ಇಂತಹ ಸಂದರ್ಭ/ ಸನ್ನಿವೇಶ, ಜಲಕ್ಷಾಮಕ್ಕೆ ಉದ್ಭವಿಸಲು ಕಾರಣಗಳನ್ನು   ಮತ್ತು ಹಿನ್ನಲೆ ಏನು ? ಮಾನವನ ವರ್ತನೆಯೇ ಕಾರಣನಾ?  ಎಂದು ಆಲೋಚಿಸಿ, ಜಲ ಸಂರಕ್ಷಣೆಗಾಗಿ ಮನುಷ್ಯನ ವರ್ತನೆಯಲ್ಲಿ, ನೀರಿನ ಬಳಕೆಯಲ್ಲಿ,  ಜಲಮೂಲಗಳ ಸಂರಕ್ಷಣೆಗಾಗಿ ನಾವು ಕ್ಷೀಪ್ರ ಬದಲಾವಣೆಗೆ  ಬದ್ದರಾಗುವದಕ್ಕೆ ಸಿದ್ದರಾಗಿ ಮುನ್ನಡೆಯಬೇಕು ತಪ್ಪಿದಲ್ಲಿ ನೀರನ್ನುಆಮದು ಮಾಡಿಕೊಳ್ಳುವ ಕಾಲ ಬರುವುದರಲ್ಲಿ ಸಂದೇಹ ಇಲ್ಲಾ. ಆದರೆ ನಾವು ಇವಾಗಲೇ ಹೆಚ್ಚೆತ್ತುಕೊಳ್ಳಬೇಕು. ಜಲಮೂಲಗಳ ಸಂರಕ್ಷಣೆ ಹಾಗೂ ನೀರನ್ನು, ಜಲಮೂಲಗಳನ್ನು ಬಳಕೆಯಲ್ಲಿ ಕೆಲವೊಂದು ಅಂಶಗಳನ್ನು ಆಧರಿಸಿ ನಮ್ಮಲ್ಲಿ ಅಳವಡಿಸಿಕೊಳ್ಳಲು ಸಲಹೆಗಳು ನಮ್ಮ ಮುಂದಿವೆ.
 ಜಲ ಸಾಕ್ಷರತೆ :  ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಲ್ಲಿ   ನೀರು ನೈಸರ್ಗಿಕ  ಸಂಪತ್ತು ಇದನ್ನು ಉತ್ಪಾದನೆ ಮಾಡಲು ಆಗುವುದಿಲ್ಲಾ  ಇರುವ ಈ ಸಂಪತ್ತನ್ನು ಮಿತವಾಗಿ – ಇತವಾಗಿ, ಮರಬಳಕೆ ಮಾಡಿ- ಇಂಗಿಸುವ ಕುರಿತು ಜನರಲ್ಲಿ ಜಲ ಸಾಕ್ಷರತೆ ಜಾಗೃತಿಯನ್ನು ಮಟ್ಟವನ್ನು  ದ್ವಿಗುಣಗೊಳಿಸಬೇಕು.
ನೀರಿನ ಮಿತ ಬಳಕೆ : ಮನುಷ್ಯ  ತನ್ನ ದಿನನಿತ್ಯ ಬಳಕೆ ಮಾಡಿ ವ್ಯಯಿಸುವ  ಶೇ ೭೦%  ನೀರನ್ನು ಭೂಮಿಯಲ್ಲಿ ಇಂಗಿಸಬಹುದಾಗಿ ಹಾಗೂ ಅದನ್ನು ಮರುಬಳಕೆಯು ಮಾಡುವುದನ್ನು ನಾವು ಅಳವಡಿಸಿಕೊಳ್ಳಬೇಕು.
ಜಲಮೂಲಗಳ ಸಂರಕ್ಷಣೆ : ಕುಡಿಯಲು, ದಿನ ಬಳಿಕೆಗೆ ಹಾಗೂ ಜೀವ ರಾಶಿಗಳ ಜೀವ ಜಲವಾಗಿರುವ  ಬೋರವೆಲ್,ಬಾವಿ, ಕೆರೆ, ನದಿ, ಹಳ್ಳ,ಕೊಳ್ಳ ಇತ್ಯಾದಿಗಳನ್ನು  ನಾವು ಸಂರಕ್ಷಿಸಿ ಅವುಗಳನ್ನು ಶುದ್ದತೆಯಿಂದ ಇಟ್ಟುಕೊಳ್ಳಬೇಕು.ನಾವು ನದಿ- ಹಳ್ಳ – ಕೆರೆಗಳನ್ನು ಅಭಿವೃದ್ಧಿಯ ಆಧುನಿಕರಣದ ಆತುರತೆಯಲ್ಲಿ ಇವುಗಳನ್ನು ಬಹುತೇಕ ನಾಶಪಡಿಸುದ್ದೆವೆ.ನದಿ- ಹಳ್ಳ- ಕೊಳ್ಳಗಳು ನಾಶವಾಗಿವೆ ನದಿಗಳು ಬತ್ತಿವೆ ಇವುಗಳನ್ನು ಬತ್ತದಂತೆ, ಮಲೀನವಾಗದಂತೆ ನಾವು ರಕ್ಷಣೆಯ ಜವಾಬ್ದಾರಿ ನಮ್ಮದಾಗಿದೆ.
ನೀರಿನ ಲಭ್ಯತೆ- ವ್ಯಯ ಮತ್ತು ಆಯ  (Water Budget) :ಪ್ರತಿ ಗ್ರಾಮಗಳಲ್ಲಿ ಪ್ರತಿ ವರ್ಷ ನಾವು ಒಟ್ಟು ಕುಟುಂಬಗಳಿಗೆ ಕುಡಿಯುಲು & ದಿನ ಬಳಕೆಗೆ ಬೇಕಾಗುವಷ್ಟು ನೀರಿನ ಲಭ್ಯತೆ ಇದೆ ? ಎಂದು ಗೊತ್ತುಪಡಿಸಿಕೊಳ್ಳುವುದು ವಾರ್ಷಿಕ ಸರಾಸರಿ ಎಷ್ಟು ಬೇಡಿಕೆ ಇದೆ, ಲೆಕ್ಕಾಚಾರದ ಮೇಲೆ  ಬೇಡಿಕೆ- ಲಭ್ಯತೆ ಆಧರಿಸಿ  ಕೊರತೆ ಸರಿದೂಗಿಸಲು ಬೇಕಾಗುವ ಪ್ರಮಾಣವನ್ನು ಸರಿದೂಗಿಸಲು ಕ್ಷೀಪ್ರ ಯೋಜನೆ ರೂಪಿಸಿಕೊಳ್ಳುವುದು ಹಾಗೂ ಮುಂದಿನ ವರ್ಷಕ್ಕೆ ಈ ಕೊರತೆಯನ್ನು ನೀಗಿಸಲು ಜಲಮೂಲಗಳ ಪುನಶ್ಚೇತನ ಕ್ಕೆ ಯೋಜನೆ/ ಕಾರ್ಯಕ್ರಮ ಹಾಕಿಕೊಳ್ಳುವುದು ಸೂಕ್ತ.
ಮಾನವನ ನಡುವಳಿಕೆಯಲ್ಲಿ ಬದಲಾವಣೆ :  ಒಟ್ಟಾರೆ ಜಲಮೂಲಗಳ ಸಂರಕ್ಷಣೆ, ಸ್ವಚ್ಛತೆ ಮಲೀನವಾಗದಂತೆ  ಹಾಗೂ ನೀರಿನ  ಬಳಕೆಮಾಡುವಲ್ಲಿ ನಮ್ಮಲ್ಲಿರುವ ಕೆಲವು ನಡುವಳಿಕೆಯಲ್ಲಿ   ಬದಲಾಯಿಸಿಕೊಂಡು ಪ್ರಕೃತಿ ವಿನಾಶದ ಆಲೋಚನೆಗಳನ್ನು- ನಡವಳಿಕೆಗಳಿಗೆ ನಾವು ಇತಿಶ್ರೀ  ಹಾಡಬೇಕು.ಇಲ್ಲದಿದ್ದರೆ  ಇಂತಹ ಕಾರ್ಯಕ್ರಮ ಅಥವಾ ವಿಶ್ವ ಜಲ ದಿನಾಚರಣೆ ಬರಿ ಆಚರಣೆಗೆ ಮಾತ್ರ ಸೀಮಿತವಾಗುತ್ತದೆ.

About The Author