ಶಹಪುರ : ತಾಲೂಕಿನಾದ್ಯಂತ ಸರಕಾರಿ ಅರೇ ಸರಕಾರಿ ಕಛೇರಿಗಳ ಮೇಲೆ ಹಾಗೂ ವ್ಯಾಪಾರಸ್ಥರು ಅಂಗಡಿಗಳಿಗೆ ಶೇಕಡ 60ರಷ್ಟು ಕಡ್ಡಾಯವಾಗಿ ಕನ್ನಡ ನಾಮಪಲಕ ಬರೆಯಿಸುವಂತೆ ತಹಶೀಲ್ದಾರರು ಕೂಡಲೇ ಆದೇಶ ಹೊರಡಿಸಬೇಕೆಂದು ತಾಲೂಕು ಕನ್ನಡ ಪರ ಸಂಘಟನೆಗಳ ಒಕ್ಕೂಟ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಸರಕಾರ ಈಗಾಗಲೇ ಶೇಕಡ 60ರಷ್ಟು ಕನ್ನಡದಲ್ಲಿ ನಾಮಫಲಕ ಇರಬೇಕೆಂದು ಆದೇಶಿಸಿದೆ. ಶಹಾಪುರ ನಗರದಲ್ಲಿಯೂ ಕೂಡ ಕನ್ನಡದಲ್ಲಿ ನಾಮಪಲಕ ಬರೆಯಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪರ ಸಂಘಟನೆ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಸ್ವಾಮಿ ಇಟಗಿ ಹೋರಾಟಗಾರರಾದ ಡಾ. ಶರಣು ಗದ್ದುಗೆ ಭೀಮಣ್ಣ ಶಾಖಪುರ ವೆಂಕಟೇಶ ಬೋನೆರ ಸುಭಾಷ್ ಹೊತಪೇಟ ಅಬ್ದುಲ್ ಹಾದಿಮನಿ ಬಾಬು ಜಾನಿ ಸೋಪಣ್ಣ ಸಗರ್ ಭೀಮಾಶಂಕರ ಕಟ್ಟಿಮನಿ ಪ್ರದೀಪ್ ಅಣಬಿ ಸೇರಿದಂತೆ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.