ಶಹಾಪೂರ,,
ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಭವನ ವಸಂತನಗರದಲ್ಲಿ ಮಹಾ ನಾಯಕ ಚಕ್ರವರ್ತಿ ಸಾಮ್ರಾಟ ಅಶೋಕ ರಾಜನ ಜೀವನಾಧರಿತ ನಾಟಕವು ಜುಲೈ 13 ರಂದು ಪ್ರದರ್ಶನಗೊಳ್ಳಲಿದ್ದು ಯಾದಗಿರಿ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ ತಿಳಿಸಿದ್ದಾರೆ. ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಾಟಕದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು ನಾಗಪುರದ ಬುದ್ಧಿಸ್ಟ್ ಅಕಾಡೆಮಿ ಆಫ್ ಫರ್ಫಾಮಿಂಗ್ ಆರ್ಟ್ ಸಂಸ್ಥೆಯಿಂದ ಈ ನಾಟಕ ಪ್ರದರ್ಶನಗೊಳ್ಳುತ್ತಿದ್ದು ಜುಲೈ 13 ರಂದು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಪ್ರದರ್ಶನವಾಗಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಚಿವರಾದ ಎಚ್ ಸಿ ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ ಎಚ್ ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಂಸದ ರಾಧಾಕೃಷ್ಣ ದೊಡ್ಡಮನಿ ರವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಶರಬಣ್ಣ ದೋರನಹಳ್ಳಿ, ಮಲ್ಲಿಕಾರ್ಜುನ ಹೊಸಮನಿ, ಭೀಮಾಶಂಕರ, ಸಂತೋಷ್ ಗುಂಡಳ್ಳಿ, ವಾಸು ಕೋಗಿಲ್ಕರ್, ನಾಗರಾಜ, ಸಿದ್ದಪ್ಪ ಕೊಡುಮನಹಳ್ಳಿ, ದೊಡ್ಡಪ್ಪ ಕಾಡಂಗೇರಾ, ಸಂದೀಪ, ಸುಭಾಷ್ ಹುರಸಗುಂಡಗಿ, ಬಸ್ಸು ಬೋಳಾರಿ, ನಾಗಪ್ಪ ಬಬಲಾದಿ, ಮಾನಪ್ಪ ಮುಕ್ತಾಪುರ ಸೇರಿದಂತೆ ಇತರರು ಇದ್ದರು.