ಇಂಡಿಯಾ ಎಟಿಎಂ ಉದ್ಘಾಟಿಸಿದ ವಿನೋದ್ ಪಾಟೀಲ್

ಶಹಾಪೂರ,,

ಗ್ರಾಮೀಣ ಭಾಗದ ಜನರಿಗೆ ಅನುಕೂಲಕರವಾಗಲೆಂದು ಇಂಡಿಯನ್ ಪ್ರವೇಟ್ ಸೆಕ್ಟರ್ ಎಟಿಎಂ ದೋರನಹಳ್ಳಿ ಗ್ರಾಮದಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿನೋದಗೌಡ ಮಾಲಿಪಾಟೀಲ್ ದೋರನಹಳ್ಳಿ ತಿಳಿಸಿದರು. ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಎಟಿಎಂ ಉದ್ಘಾಟನೆಗೈದು ಮಾತನಾಡಿದ ಅವರು, ಯಾದಗಿರಿಯಿಂದ ಶಹಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಯಾವುದೇ ಎಟಿಎಂ ಇರುವುದಿಲ್ಲ. ಸಾರ್ವಜನಿಕರು ಪರದಾಡುವಂತಹ ಸ್ಥಿತಿಯಿತ್ತು. ಇದರಿಂದ ತೊಂದರೆ ಅನುಭವಿಸುತ್ತಿದ್ದರು .ಆದರೆ ಇಂಡಿಯಾ ಎಟಿಎಂ ಹೊಸದಾಗಿ ಎಟಿಎಂ ಆರಂಭಿಸಿದೆ.ಸಾರ್ವಜನಿಕರು ಮತ್ತು ದೋರನಹಳ್ಳಿ ಗ್ರಾಮಸ್ಥರಿಗೆ ಎಟಿಎಂದಿಂದ ಅನುಕೂಲಕರ ವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಬಿ ಗದ್ದುಗೆ, ಸಿದ್ದಣ್ಣ ಆರ್ಬೋಳ್, ಪ್ರೇಮ್ ಸರ್ಕಿಲ್, ಶ್ರೀಶೈಲ್ ಆನೆಗುಂದಿ, ರಮೇಶ್ ಗಡ್ಡೆಮನಿ, ನಾಗು ಆವಂಟಿ, ಓನರ್ ಸಾಬ್ ಸೇರಿದಂತೆ ಇನ್ನಿತರರು ಇದ್ದರು.