ಮಹಾಶೈವ ಧರ್ಮಪೀಠದಲ್ಲಿ 85 ನೆಯ ‘ ಶಿವೋಪನ ಕಾರ್ಯ’

ಗಬ್ಬೂರು,24 ಮಾರ್ಚ್ 2024 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮಾರ್ಚ್ 24 ರ ಆದಿತ್ಯವಾರದಂದು 84 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವೇಶ್ವರ ಶಿವನು ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಸಂತಾನದಕೊರತೆಯನ್ನು ಪರಿಹರಿಸಿ ನಿಶ್ಚಿತವಾಗಿ ಸಂತಾನವನ್ನು ಕರುಣಿಸುತ್ತ ‘ ಸಂತಾನೇಶ್ವರ ಶಿವ’ ನೆಂದು ಲೀಲೆಮೆರೆಯುತ್ತಿದ್ದಾನೆ.ಮದುವೆಯಾಗಿ ಹದಿನೆಂಟು ಇಪ್ಪತ್ತು ವರ್ಷಗಳಾಗಿಯೂ ಮಕ್ಕಳಾಗದೆ ಇದ್ದವರು ವಿಶ್ವೇಶ್ವರನ ಅನುಗ್ರಹದಿಂದ ಸಂತಾನ ಭಾಗ್ಯಪಡೆದಿರುವುದರಿಂದ ವಾರದಿಂದ ವಾರಕ್ಕೆ ಮಹಾಶೈವ ಧರ್ಮಪೀಠಕ್ಕೆ ಬರುವ ಸಂತಾನಾರ್ಥಿಗಳ ಸಂಖ್ಯೆಯು ಹೆಚ್ಚುತ್ತಿದೆ.ಇಂದಿನ ಶಿವೋಪಶಮನ ಕಾರ್ಯದಲ್ಲಿ ಸಂತಾನಾರ್ಥಿ ಭಕ್ತರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಅನಾರೊಗ್ಯಪೀಡಿತನಾಗಿದ್ದ ಖಾನಾಪುರದ ಬಾಯಿದೊಡ್ಡಿಬೂದೆಪ್ಪ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದರಿಂದ ಇಂದಿನ ಶಿವೋಪಶಮನ ಕಾರ್ಯದಲ್ಲಿ ಹೋಳಿಗೆಯೂಟದ ದಾಸೋಹಸೇವೆ ಸಲ್ಲಿಸಿದರು.ಪೀಠಾಧ್ಯಕ್ಷರಾದ ಶ್ರೀಮುಕ್ಕಣ್ಣ ಕರಿಗಾರ ಅವರು ಬೂದೆಪ್ಪ ಅವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

‌ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಸಾಂಸ್ಕೃತಿಕ ಸಮಿತಿಯ ಸದಸ್ಯ ಮತ್ತು ಸಾಹಿತಿ- ಪತ್ರಕರ್ತ ಬಸವರಾಜ ಭೋಗಾವತಿ,ಪತ್ರಕರ್ತರುಗಳಾದ ರಮೇಶ ಖಾನಾಪುರ, ಏಳುಬಾವೆಪ್ಪಗೌಡ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ವಿರುಪಾಕ್ಷಪ್ಪಗೌಡ ಹೊನ್ನಟಗಿ,ಗಂಗಣ್ಣಗೌಡ ಕೊರ್ವಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಸಿದ್ರಾಮಯ್ಯಸ್ವಾಮಿ ಹಳ್ಳಿ, ಮಲ್ಲಯ್ಯ ಹಿರೇಮಠ ಶಹಾಪುರ,ಗೌರೀಶ ಮಲದಕಲ್,ಯಲ್ಲಪ್ಪ ಕರಿಗಾರ,ರಂಗನಾಥ ಮಸೀದಪುರ,ಸಿದ್ದಣ್ಣಪೂಜಾರಿ ಚಾಗಬಾವಿ,ಪರಶುರಾಮ ಜಡೇರ, ದಾಮೋದರ, ಬೆಟ್ಟಪ್ಪ ಗದಾರ,ಹನುಮೇಶ,ವೆಂಕಟೇಶ ಮತ್ತು ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author