೨೧ ವರ್ಷಗಳ ಸಾರ್ಥಕ ಸೇವೆಗೆ ಗೌರವ | ಯುವಕರಲ್ಲಿ ಗುರುಭಕ್ತಿ, ಸಂಸ್ಕೃತಿ ಇದೆ : ಮಲ್ಲನಗೌಡ ಬಿರಾದಾರ

ಶಹಾಪೂರ,,

 ನನ್ನ ಹಳೆ ವಿದ್ಯಾರ್ಥಿಗಳ ನನ್ನ ಮೇಲಿನ ಗುರುಭಕ್ತಿಯನ್ನ ಕಂಡು ನನಗೆ ಶಿಕ್ಷಕ ವೃತ್ತಿ ಜೀವನ ಸಾರ್ಥಕ ಎನಿಸಿದೆ. ನನ್ನ ಕರ್ತವ್ಯದ ಹಾಲುಂಡ ತವರು ದೋರನಹಳ್ಳಿ ಗ್ರಾಮ ಎಂದು ವಿಶ್ರಾಂತ ಪ್ರಭಾರಿ ಅಕ್ಷರ ದಾಸೋಹ ಅಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರದಂದು ಸರ್ಕಾರಿ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ನನ್ನ ವೃತ್ತಿಯ ಬಗ್ಗೆ ಹೆಮ್ಮೆ ಪಡುವ ಕ್ಷಣ ಇಂದು ನನಸಾಗಿದೆ. ಮಾಡುವ ಕೆಲಸ ಪ್ರೀತಿಯಿಂದ  ಮಾಡಿದಾಗ  ನಿಜವಾದ ಅರ್ಥ ಬರುತ್ತದೆ.  ನನ್ನ ಶಿಕ್ಷಕ ವೃತ್ತಿ ಜೀವನಕ್ಕೆ ದೊಡ್ಡ ಇತಿಹಾಸ ಕೊಟ್ಟ ದೋರನಹಳ್ಳಿ ಗ್ರಾಮ ಇಲ್ಲಿನ ವಿದ್ಯಾರ್ಥಿಗಳ ಕೀರ್ತಿಯ ರಸಬಳ್ಳಿ ಹೆಚ್ಚೆಚ್ಚು ಹಬ್ಬಲಿ.ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನ ಮಸ್ತಕಕ್ಕೆ ಸೇರಿಸುವ ಜೊತೆಗೆ, ವಿನಯ, ವಿನಮ್ರತೆ, ಸಂಸ್ಕಾರ, ಸಂಸ್ಕೃತಿ, ನಡೆ, ನುಡಿ, ಆಚಾರ,ವಿಚಾರ, ಪ್ರೀತಿ, ಸಹಕಾರ, ಸಹಬಾಳ್ವೆ, ಸಮಾನತೆಯ ಬಗ್ಗೆ ಹಂತ ಹಂತವಾಗಿ ತಿಳಿಸಿಕೊಟ್ಟಾಗಲೇ ಶಿಕ್ಷಣ, ಶಾಲೆ, ಶಿಕ್ಷಕನಿಗೆ ಒಂದು ಸಾರ್ಥಕತೆ ಸಿಗುತ್ತದೆ. ನಿಮ್ಮೇಲ್ಲರ ಪ್ರೀತಿ, ವಿಶ್ವಾಸ ಜೊತೆಗೆ ವೃತ್ತಿಯ ಸಾರ್ಥಕತೆಯ ಗೆದ್ದಿರುವೆ. ಇಂದು ನನ್ನ ವಿದ್ಯಾರ್ಥಿಗಳು ರಾಜ್ಯ, ದೇಶದ ಮೂಲೆ ಮೂಲೆಯಲ್ಲಿ ಎಲ್ಲಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇಂದು ಅವರೆಲ್ಲ ಬಂದು ನನಗೆ ಗೌರವಿಸಿದ್ದು ನನಗೆ ಮಾತು ಬಾರದೆ ಮೂಕವಿಸ್ಮಿತನಾಗಿರುವೆ ಆದರೆ ಜಗತ್ತಿನ ಎಲ್ಲಾ ಶ್ರೇಷ್ಠ ಪ್ರಶಸ್ತಿಗಳ ಪಡೆದ ಸಂತಸ ನೀಡಿದೆ ಎಂದು ಭಾವುಕರಾಗಿ ಹೇಳಿದರು.
      ಶಹಾಪುರ ತಾಲ್ಲೂಕು ಶಿಕ್ಷಣಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಶಾಂತಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೋರನಹಳ್ಳಿ ಗ್ರಾಮಕ್ಕೆ ತನ್ನದೆ ಆದ ಇತಿಹಾಸವಿದೆ ಈಗ ಅಕ್ಷರ ಕಲಿಸಿದ ಗುರುವಿಗೆ ಹೃದಯ ಸ್ಪರ್ಶಿ ಗೌರವ ವಂದನೆ ನಿಜಕ್ಕೂ ಶ್ಲಾಘನಿಯ. ೨೧ ವರ್ಷ ಇಲ್ಲಿ ಸೇವೆ ಸಲ್ಲಿಸಿ ಇಲ್ಲಿಂದ ವರ್ಗವಾಗಿ ಹೋಗಿ ೧೦ ವರ್ಷ ಕಳೆದರು ಮತ್ತೆ ಅವರನ್ನ ಇಲ್ಲಿ ಗೌರವಿಸುವುದು ನೋಡಿದರೆ ಮಲ್ಲನಗೌಡರು ತಮ್ಮ ವಿದ್ಯಾರ್ಥಿಗಳನ್ನು, ಈ ಊರನ್ನು ಹೇಗೆ ಪ್ರೀತಿಸಿದ್ದಾರೆ ಎಂದು ಗೊತ್ತಾಗುತ್ತದೆ. ಈ ಪ್ರೀತಿ ಎಲ್ಲರಿಗೂ ಸಿಗಲಾರದು ಎಂದು ಹೇಳಿದರು.
      ಸಾನಿಧ್ಯ ವಹಿಸಿದ್ದ ಅಭಿನವ ಮಹಾಂತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಭೀಮಾಶಂಕರಾನಂಧ ಅವಧೂತರು ಇದ್ದರು.ಮುಖ್ಯ ಅತಿಥಿಗಳಾದ ಅಮರೇಶ ಕೆ, ಎಂ.ಎಸ್.ಪಾಟೀಲ್ ಗ್ರಾಮದ ಮುಖಂಡರಾದ ಈಶ್ವರಪ್ಪ ಲಕ್ಕಶೇಟ್ಟಿ ಮಾತನಾಡಿದರು. ಶಾಲೆಯ ಮುಖ್ಯಗುರು ಶಾಂತಪ್ಪ ಕೆರಟಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಅಮರೇಶ ಗೋಲಗೇರಿ ಕಾರ್ಯಕ್ರಮ ನಿರ್ವಾಹಣೆ ಮಾಡಿದರು. ಹಯ್ಯಾಳಪ್ಪ ಗುಂಟನೂರ, ನಿರೂಪಣೆ ಮಹೇಶ ಪತ್ತಾರ, ಸ್ವಾಗತ ಯಮನಪ್ಪಗೈದರು.ಕಿರು ಪರಿಚಯ ವಿಶಾಲ ಕುಮಾರ ಶಿಂಧೆ, ವಂದನಾರ್ಪಣೆ ಖಂಡಪ್ಪ ಅಗಸಿ ನಡೆಸಿಕೊಟ್ಟರು.ಅಮರೇಶ ಕೆ, ರಾಯಪ್ಪಗೌಡ ಜಿ ಹುಡೇದ್,
ಎಂ.ಎಸ್.ಪಾಟೀಲ್ , ದುರ್ದನಾಬೇಗಂ, ಹಯ್ಯಾಳಪ್ಪ ಗುಂಟನೂರ ಮಹಾಂತೇಶ ನೀಲಂಕಾರ, ಯಮನಪ್ಪ ಮುಕುಡಿ ಇತರರು ಇದ್ದರು.ಕಾರ್ಯಕ್ರಮದಲ್ಲಿ ಅಮರೇಶ ಕೆ, ರಾಯಪ್ಪಗೌಡ ಜಿ ಹುಡೇದ್, ಎಂ.ಎಸ್.ಪಾಟೀಲ್ , ದುರ್ದನಾಬೇಗಂ, ಹಯ್ಯಾಳಪ್ಪ ಗುಂಟನೂರ ಮಹಾಂತೇಶ ನೀಲಂಕಾರ, ಯಮನಪ್ಪ ಮುಕುಡಿ,ಎಸ್ ಡಿ ಎಂ ಸಿ ಅಧ್ಯಕ್ಷ ನಾಗಯ್ಯ ಗುತ್ತೇದಾರ,
ಗ್ರಾಮದ  ಮುಖಂಡರುಗಳು ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಇದ್ದರು.
ಹಲವಾರು ಕಾರ್ಯಕ್ರಮಗಳನ್ನು  ನೀಡಿದ್ದೇವೆ. ದೋರನಹಳ್ಳಿ ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಗುರುವಿನ ಬೀಳ್ಕೊಡಿಗೆ ಕಾರ್ಯಕ್ರಮ ಅಲ್ಲಿನ ಗ್ರಾಮ, ಜನರ ಸಂಸ್ಕಾರ, ಸಂಸ್ಕೃತಿಯನ್ನು ಎತ್ತಿ ಹಿಡಯುವ ಕೈಗನ್ನಡಿ ಎಂದರೆ ತಪ್ಪಾಗಲಾರದು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಹೆಮ್ಮೆ ಅನಿಸುತ್ತದೆ.
-ಬಸವರಾಜ ಮಹಾಮನಿ ಖ್ಯಾತ ಹಾಸ್ಯ ಭಾಷಣಾಕಾರ
    ದೋರನಹಳ್ಳಿ ಗ್ರಾಮ ಧಾರ್ಮಿಕ ಕಾರ್ಯಕ್ರಮಗಳನ್ನು ಹೇಗೆ ಆಚರಿಸುತ್ತಾರೋ ಅದರಂತೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅದರಲ್ಲಿ ನಾವು ಭಾಗವಹಿಸಿದ್ದು ಬಹಳ ಸಂತಸ ತಂದಿದೆ. ಅಕ್ಷರ ಕಲಿಸಿದ ಗುರುವಿಗೆ ಮರೆಯದೆ ಭಕ್ತಿ, ಭಾವನಾತ್ಮಕ ಗೌರವಿಸಿದ್ದು ಇಂದಿನ ಯುವಜನಕ್ಕೆ ಮಾದರಿಯಾಗಿದ್ದಾರೆ  ಗ್ರಾಮದ ಯುವಕರು, ಗ್ರಾಮಸ್ಥರು.
-ಗುಂಡಣ್ಣ ಡಿಗ್ಗಿ ಖ್ಯಾತ ಹಾಸ್ಯ ಭಾಷಣಾಕಾರ ಕಲಬುರ್ಗಿ.