ನಾಳೆ ಮಕ್ಕಳ ದಿನಾಚರಣೆ ನಿಮಿತ್ತ ಲೇಖನ : ಮಕ್ಕಳಲ್ಲಿ ಛಲ, ನೈತಿಕ ಮೌಲ್ಯ, ಆತ್ಮ ಸ್ಥೈರ್ಯ ತುಂಬಬೇಕಿದೆ

ಲೇಖನ : ಶಿವಕುಮಾರ ಬಿ.
ಮಕ್ಕಳ ದಿನಾಚರಣೆಯಂದು ಮಕ್ಕಳಲ್ಲಿ ಅಳವಡಿಸಿಕೊಳ್ಳಬೇಕಿರುವ ಪ್ರಮುಖ ಮೌಲ್ಯಗಳು!!
ಪ್ರತಿ ವರ್ಷ ನಾವು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡುತ್ತಾ ಬರುತ್ತಿದ್ದೆವೆ. ಅಂದು ಮಕ್ಕಳ ದಿನಾಚರಣೆಯ ಹಿನ್ನಲೆ, ಮಕ್ಕಳಿಗೆ ಸಿಗುತ್ತಿರುವ- ಸಿಗದೆ ಇರುವ ಸೌಲಭ್ಯ ಗಳು,ಮಕ್ಕಳ ರಕ್ಷಣೆ ಕುರಿತು ಸಹಜವಾಗಿ ಮಾತನಾಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಣೆ ಮಾಡುವಂತದ್ದು ರೂಡಿ..ಪಸ್ತುತ ನಾಗರಿಕ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ದುಡಿಮೆಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡಿರುವುದು, ಬಾಲ್ಯವಿವಾಹ, ಮಕ್ಕಳ ಸಾಕಾಣಿಕೆ ಇಂತಹ ಘಟನೆಗಳಿಂದ ಪ್ರಬುದ್ದ ಸಮಾಜಕ್ಕೆ ಹೊಡೆತ ಬಿದ್ದು, ಇದನ್ನು ನಿವಾರಿಸುವ ದೃಷ್ಠಿಯಿಂದ ಎಲ್ಲರೂ ಸೇರಿ ಒಟ್ಟಾಗಿ  ಇಂತಹ ಚಟುವಟಿಕೆಗಳನ್ನು ನಿಗ್ರಹಿಸಿ ಇವುಗಳನ್ನು ನಿಲ್ಲಿಸಲು/ ತೊಲಗಿಸಲು  ಇಡೀ ಸಮುದಾಯವೇ ಒಗ್ಗೂಡಿ ಹೋರಾಡಿ  ಪ್ರಬುದ್ಧ ಸಮಾಜ ನಿರ್ಮಾಣ ಮಾಡಬೇಕಾಗಿದೆ.
 ಆಧುನಿಕ ಇ ಕಂಪ್ಯೂಟರ್ ಯುಗದಲ್ಲಿ ಹಳ್ಳಿಯಿಂದ ದಿಲ್ಲಿಯಲ್ಲಿ ವಾಸಿಸುವ ಎಲ್ಲಾ ನಾಗರಿಕರು ತಮ್ಮ ಮಕ್ಕಳಿಗೆ ಕನಿಷ್ಠ ಶಿಕ್ಷಣವನ್ನು ಕೊಡಬೇಕೆಂಬ ಆಸೆಯನ್ನು ಹೊಂದಿರುತ್ತಾರೆ ಅದಕ್ಕೆ ರೆಕ್ಕೆ- ಪುಕ್ಕಗಳಂತೆ ಸರಕಾರ/ ಶಿಕ್ಷಣ ಇಲಾಖೆ ಯುವ ಪೂರಕವಾಗಿ ಆದ್ಯತೆಯನ್ನು ನೀಡಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವಂತೆ ಯೋಜನೆಯನ್ನು ಹಾಕಿಕೊಂಡಿದೆ.
ಶಿಕ್ಷಣದ ವ್ಯಾಪರೀಕರಣದಲ್ಲಿ, ಮೋಹದಲ್ಲಿ ನಾವು ಬರಿ ಮಕ್ಕಳನ್ನು ಅಂಕಿ ಕರಣದಲ್ಲಿ (ಮಾರ್ಕ್ಸ) ಗುರುತಿಸುವಂತದ್ದು ಟ್ರೆಡಮಾರ್ಕ ಆಗಿದೆ. ಇದರಿಂದ ಶಿಕ್ಷಣದ ಮೂಲ ಉದ್ದೇಶ, ಶಿಕ್ಷಣದ ವಿಶಾಲ ದೃಷ್ಠಿಕೋನಕ್ಕೆ ಹೊಡೆತ ಬಿದ್ದಿದೆ, ಶಿಕ್ಷಣದ ಮೌಲ್ಯಕಳೆದುಕೊಳ್ಳುವಂತಹ ಹಂತಕ್ಕೆ ಬಂದು ತಲುಪಿದ್ದೆವೆ.
ಮಕ್ಕಳಲ್ಲಿ ನಾವು ಬರೀ ಪಠ್ಯಗಳಲ್ಲಿನ  ಅಂಕಗಳ ಬೆಳಸದೆ  ಜೀವನದಲ್ಲಿ ಏನನ್ನಾದರೂ  ಗುರಿ ಸಾಧಿಸುತ್ತೇವೆ ಎಂಬ ಛಲವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಇದರಿಂದ ಅವರ ಜೀವನದಲ್ಲಿ ಅವರ ಭವಿಷ್ಯಕ್ಕೆ ಅಥವಾ ಬದುಕಿಗೆ ಛಲ ಆತಂಕವಾದದ್ದು ಜೀವನದಲ್ಲಿ ಇದ್ದಾಗ ಅವರ ಸಂಸಾರಿಕ ಸಮಾಜದಲ್ಲಿನ ಬದುಕಿನ ವ್ಯವಸ್ಥೆ ಹಾಗೂ ಉದ್ಯೋಗದ ವ್ಯವಸ್ಥೆಯಲ್ಲಿ ಅಸ್ಥಿರತೆ ಇದ್ದರೂ ಸಾಧಿಸುವ ಚಲ ಹೊಂದಿದಾಗ ಬದಕಿನ ಚಲನೆ ತಾನಾಗಿಯೇ ನಡೆಸಿಕೊಂಡು ಹೊಗುತ್ತದೆ.
 ನೈತಿಕ ಮೌಲ್ಯಗಳು : ಇಂದಿನ ಕಾಲದಲ್ಲಿ  ಮಕ್ಕಳು ಯುವಕರಲ್ಲಿ ಕಲಿಯುವ ವಯಸ್ಸಿನಲ್ಲಿರುವಾಗ  ನಾವು ಬೋದಿಸುವ ಹಂತದಲ್ಲಿ ಇರುವಾಗಲೇ ಮಕ್ಕಳಿಗೆ ಬೇಕಿರುವ, ಮನುಷ್ಯನಿಂದ ಸಮಾಜಕ್ಕೆ ಬೇಕಿರುವ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಿದಾಗ ಅಥವಾ  ಭೋದಿಸಿದಾಗ ಅವುಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುವುದನ್ನು ಶಿಕ್ಷಣ ವ್ಯವಸ್ಥೆ, ಕುಟುಂಬ ವ್ಯವಸ್ಥೆ ಮತ್ತು ಸಮಾಜವು ಇವುಗಳನ್ನು ಗಮನಿಸಬೇಕಿದೆ . ಕೇವಲ ಒಂದು ವ್ಯವಸ್ಥೆಯವರು ಮಾಡುತ್ತಾರೆ ಎಂದು ನುಣುಚಿಕೊಳ್ಳವುದರಿಂದ ಮಕ್ಕಳಲ್ಲಿ ನೈತಿಕಮೌಲ್ಯಗಳನ್ನು ಬೆಳೆಸಬೇಕಿದೆ.
ಮಕ್ಕಳಲ್ಲಿ ಈ ವಿಚಾರ ಯಾಕೇ! ಇಂದು ಯಾಕೇ ಇಂತಹ ವಿಚಾರ ಮಾಡಬೇಕು ಎಂಬುವುದು ಎಲ್ಲರನ್ನು ಹುಬ್ಬೆರಿಸುವಂತೆ ಮಾಡುವುದು ಸಹಜ, ಆದರೆ ಇಂದಿನ ಮಕ್ಕಳು ನಾಳೆಯಲ್ಲಿ ಕುಟುಂಬದ ಮುಖ್ಯಸ್ಥರಾಗಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಕೆಲಸ ಮಾಡುತ್ತಿರುತ್ತಾನೆ, ದೇಶವೆಂದು ಬಂದಾಗ ಉತ್ತಮ ಪ್ರಜೆ ಎಂದು ಸರಳವಾಗಿ ಗುರುತಿಸುತ್ತೆವೆ.
ಏನಾದ್ರು ಗುರಿಸಾಧಿಸುವ ಛಲ ಇಲ್ಲದಿರುವುದರಿಂದ, ನೈತಿಕ ಮೌಲ್ಯಗಳ ಅಳವಡಿಸಿಕೊಳ್ಳದೇ ಇರುವುದರಿಂದ ಯಾವುದನ್ನು ಮಾಡಬೇಕು ಯಾವುದು ಅಪರಾದ, ಆರೋಗ್ಯಕ್ಕೆ, ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆಯಲ್ಲ. ಇದನ್ನು ಮಾಡಬಾರದು ಎಂದು ಸ್ವಯಂ ಕಟ್ಟಾಜ್ಞಯ ಕೊರತೆ ಬಹುತೇಕ ಎಲ್ಲರಲ್ಲಿ ಕಾಣುವಂತಾದಾಗಿದೆ. ಆಗಾಗಿ ಇಂದು ಚಿಕ್ಕ ವಯಸ್ಸಿನಲ್ಲಿ ಮಕ್ಕಳು – ಯುವಕರಿಗೆ ಗುರಿ ಇಲ್ಲದಿರುವ ಮನಸ್ಸುಹೊಂದಿರುವದರಿಂದ ದುಮಪಾನ, ಮದ್ಯಪಾನ, ಡ್ರಗ್ಸ, ಕ್ರೈಂ,ಅನೈತಿಕ ಚಟುವಟಿಕೆ,  ಚಟುವಟಿಕೆಗಳನ್ನು ಅಳವಡಿಸಿಕೊಂಡು ಹಾಗೂ ಸಮಾಜಘಾತಕ ಕೃತ್ಯಗಳಲ್ಲಿ  ಮಕ್ಕಳಿಂದ ಇಡಿದು ಯುವ ಸಮೂಹ ಬಲಿಯಾಗುತ್ತಿದೆ. ಇಂತಹ ವ್ಯವಸ್ಥೆಯಿಂದ ದೂರ ಬರಬೇಕಾದರೆ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಸ್ವಯಂ ಪ್ರೇರೆಣೆಯಿಂದ ಅಳವಡಿಸಿಕೊಳ್ಳಬೇಕು ಸಮಾಜವು ಉತ್ತಮ ನಡುವಳಿಕೆ‌/ ಉತ್ತಮ ಅಭ್ಯಾಸಗಳ ಅಳವಡಿಕೆಯನ್ನು ಪ್ರಶಂಸಿಬೇಕು. ನಾವು ಕೂಡಾ ಮಕ್ಕಳು ಮತ್ತು ಯುವಕರಲ್ಲಿ ಬಿತ್ತನೆ ಮಾಡಿ ಪೋಶಿಸಬೇಕು. ದುಶ್ಚಚಟಗಳಿಂದ ಯುವ ಸಮೂಹದಿಂದ ಇತಿ ಶ್ರೀ ಹಾಡಬೇಕು.
ಆತ್ಮ ಸ್ಥೈರ್ಯ
ಇತ್ತೀಚಿನ ಸಮಾಜದಲ್ಲಿ ಯುವಬಳಕೆ, ಮಕ್ಕಳ ಅಂಕಗಳು ಸರಿಯಾಗಿ ಬಂದಿಲ್ಲ. ಪಲಿತಾಂಶ ನಿರೀಕ್ಷೆ ಮಾಡಿದಷ್ಟು ಬಂದಿಲ್ಲವೆಂದು, ಪ್ರೇಮ ಎಂಬ ಮೊಹದ ಕಾಲದಲ್ಲಿ ಹುಡಗಿ ಅಥವಾ ಹುಡಗ ಸಿಗಲಿಲ್ಲವೆಂದು, ನಮ್ಮ ಜೀವನವೇ ಇಲ್ಲವೆಂದು ಭಾವಿಸಿ ಆತ್ಮಸ್ಥೈರ್ಯ ಕಳೆದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಮ್ಮ ಕಣ್ಮುಂದೆ ನಡಿಯುತ್ತಿದೆ. ಕ್ಷಣಿಕ ಆಕರ್ಷಣೆ ಎಂಬುದನ್ನು ತಿಳಿಸಿ ವಯಸ್ಸಿನ ಕಾಲದಲ್ಲಿ ಚಂಚಲತೆ ಹೊಡಾಟದ ಮನಸಿಗೆ ನೈತಿಕ ಮೌಲ್ಯಗಳೆಂಬ ಲಗಾಮನ್ನು ಮನಸಿಗೆ ಹಾಕಬೇಕು.
ಮಕ್ಕಳು -ಯುವಕರಲ್ಲಿ  ಏನನ್ನಾದ್ರು ಸಾಧಿಸುವ ಛಲ, ನೈತಿಕ ಮೌಲ್ಯಗಳು, ಬದುಕಿನಲ್ಲಿ ಆತ್ಮಸ್ಥೈರ್ಯಗಳು ಬಿತ್ತನೆ ಮಾಡಿದಾಗ  ಶಾಂತಿ, ನೆಮ್ಮದಿಯ ಸಮಾಜ ನಿರ್ಮಿಸಿ ದುಶ್ಚಟಗಳಿಗೆ ಒಳಗಾಗುತ್ತಿರುವ ಬಹುದೊಡ್ಡ ಬಹು ಮುಖ್ಯ ಸಮೋಹವನ್ನು ರಕ್ಷಿಸಿ ಮಾನವ ಸಂಪನ್ಮೂಲವನ್ನು ಉತ್ತಮರಿತಿಯಲ್ಲಿ ಬಳಕೆ ಮಾಡಬಹುದಾಗಿದೆ.

About The Author