ನವದುರ್ಗಾ : ಶಿವಶಕ್ತಿಯ ಲೋಕೋದ್ಧರಣ ಲೀಲೆ ನವರಾತ್ರಿ : ಮುಕ್ಕಣ್ಣ ಕರಿಗಾರ

ಪರಶಿವನು ವಿಶ್ವನಿಯಾಮಕ ವಿಶ್ವೇಶ್ವರನಾಗಿದ್ದರೆ ಅದಕ್ಕೆ ಕಾರಣಳೂ ಆತನ ಸತಿ,ಶಕ್ತಿಯಾಗಿರುವ ಪರಾಶಕ್ತಿ.ಶಕ್ತಿಯು ಪರಬ್ರಹ್ಮೆಯಾದುದರಿಂದಲೆ ಶಿವನು‌ಪರಬ್ರಹ್ಮನೆನ್ನಿಸಿಕೊಂಡಿರುವನು.ಪರಶಿವ ಪರಾಶಕ್ತಿಯರೊಂದಾದ ತತ್ತ್ವವೇ ಶಿವನ ‘ ಅರ್ಧನಾರೀಶ್ವರ ತತ್ತ್ವ’. ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಶಿವನು ಶಕ್ತಿಸಹಿತ ಪ್ರಕಟಗೊಂಡಿರುವುದರಿಂದ ಶ್ರೀಕ್ಷೇತ್ರ ಕೈಲಾಸವು ‘ ಶಿವಶಕ್ತ್ಯಾತ್ಮಕ ಕ್ಷೇತ್ರ’ , ‘ ಶಿವ ಶಕ್ತ್ಯಾದ್ವೈತ ಕ್ಷೇತ್ರ’ ಎನ್ನಿಸಿಕೊಂಡಿದೆ.ವಿಶ್ವನಿಯಾಮಕನಾಗಿರುವ ಪರಶಿವನು ಶ್ರೀಕ್ಷೇತ್ರ ಕೈಲಾಸದಲ್ಲಿ ‘ ವಿಶ್ವೇಶ್ವರಶಿವ’ ನಾಗಿ ಪ್ರಕಟಗೊಂಡಿದ್ದರೆ ಪರಾಶಕ್ತಿಯು ‘ ವಿಶ್ವೇಶ್ವರಿ ದುರ್ಗಾದೇವಿ’ ರೂಪದಲ್ಲಿ ಪ್ರಕಟಗೊಂಡು ಶ್ರೀಕ್ಷೇತ್ರದಲ್ಲಿ ನೆಲೆಸಿ,ಭಕ್ತರನ್ನು ಉದ್ಧರಿಸುತ್ತಿದ್ದಾಳೆ. ಶ್ರೀಕ್ಷೇತ್ರದಲ್ಲಿ ಶಿವನು ತನ್ನ ಭಕ್ತರ ಸರ್ವಸಂಕಷ್ಟಗಳನ್ನು ಕಳೆದು,ಇಷ್ಟಾರ್ಥಸಿದ್ಧಿಯನ್ನಿತ್ತು ಅನುಗ್ರಹಿಸುವ ‘ ಭವರೋಗವೈದ್ಯ’ ನ ಲೀಲೆಯನ್ನಾಡುತ್ತಿದ್ದರೆ ಶಿವಶಕ್ತಿಯು ಭಕ್ತರಿಗೆ ರಾಜಕೀಯವಾದಿ ಸಮಸ್ತಕ್ಷೇತ್ರಗಳಲ್ಲಿ ಯಶಸ್ಸನ್ನು ಕರುಣಿಸುವ ‘ ವಿಜಯದುರ್ಗೆ’ ಯ ಲೀಲೆಯನ್ನಾಡುತ್ತಿದ್ದಾಳೆ.ಪರಶಿವನು ವಿಶ್ವದ ಕಾರಣಕರ್ತನಾಗಿಯೂ ವಿಶ್ವವ್ಯವಹಾರದಲ್ಲಿ ನಿರ್ಲಿಪ್ತನಾಗಿರುವನು.ಪರಾಶಕ್ತಿಯು ವಿಶ್ವವ್ಯವಹಾರದಲ್ಲಿ ಸಕ್ರೀಯಳಾಗಿದ್ದು ಶಿವಕಾರ್ಯವನ್ನು ನಡೆಸುತ್ತಿರುವುದರಿಂದ ಅವಳನ್ನು ‘ ಶಿವದೂತೆ’ ಅಂದರೆ ಶಿವನ ಪ್ರತಿನಿಧಿತತ್ತ್ವರೂಪಳು ಎನ್ನಲಾಗುತ್ತದೆ.ಬೋಳೇಶಂಕರನಾದ ಶಿವನು ಭಕ್ತರು ಕೇಳಿದ ವರಗಳನ್ನು ಕೊಡುವಲ್ಲಿ ಮಹಾ ಉದಾರಿಯು.ಪಾತ್ರರು ,ಅಪಾತ್ರರು ಎಂದು ನೋಡದೆ ತನ್ನ ಭಕ್ತರು ಕೇಳಿದ ವರಗಳನ್ನು ನೀಡಿಯೇ ಬಿಡುತ್ತಾನೆ.ಸತ್ಪುರುಷರಿಗೆ ವರ ನೀಡಿದರೆ ಅದರಿಂದ ಲೋಕಕ್ಕೆ ಒಳ್ಳೆಯದಾಗುತ್ತದೆ,ದುಷ್ಟರಿಗೆ ವರನೀಡಿದರೆ ಲೋಕಕ್ಕೆ ಸಂಕಷ್ಟವು ಬಂದೊದಗುತ್ತದೆ.ಶಿವವರಗರ್ವಿತ ಅಸುರರು ಧರೆಯಲ್ಲಿ ಸ್ವೇಚ್ಛೆಯಾಗಿ ವಿಹರಿಸುತ್ತ,ಲೋಕಕಂಟಕರಾಗಿ ಬಾಳಿದಾಗ ಅವರನ್ನು ನಿಗ್ರಹಿಸಿ,ಲೋಕವನ್ನು ಅನುಗ್ರಹಿಸಲು ಅವತರಿಸುತ್ತಾಳೆ ಶಿವಶಕ್ತಿ ದುರ್ಗಾದೇವಿಯು.

‘ ದುರ್ಗಾ’ ಎಂದರೆ ದುರಿತನಿವಾರಕಿ,ಕ್ಲೇಶಪರಿಹಾರಕಿ ಎನ್ನುವ ಅರ್ಥವಿದ್ದು ಜಗತ್ತಿಗೆ ಆಪತ್ತುಬಂದೊದಗಿದ ಸಂದರ್ಭಗಳಲ್ಲಿ ಜಗನ್ಮಾತೆದುರ್ಗಾದೇವಿಯ ಮಾತೃಶಕ್ತಿಯ ಲೀಲೆ ಇಲ್ಲವೆ ಅವತರಣವಾಗುತ್ತದೆ.ಪರಮಕಾರುಣ್ಯ ಮೂರ್ತಿಯಾದ ಶಿವನು ಯಾರನ್ನೂ ಕೊಲ್ಲಲಾರನು ಆದ್ದರಿಂದ ದುಷ್ಟರನಿಗ್ರಹಕಾರ್ಯವೇನಿದ್ದರೂ ಶಿವಶಕ್ತಿಯಾಗಿರುವ ದುರ್ಗಾದೇವಿಯ ಕಾರ್ಯವಿಶೇಷವು.ಶಿವನು ಬೆಳಕಿನ ರೂಪದಲ್ಲಿ ಶಕ್ತಿಯು ಕತ್ತಲೆಯ ರೂಪದಲ್ಲಿದ್ದು ವಿಶ್ವಲೀಲೆಯನ್ನಾಡುತ್ತಿದ್ದಾರೆ ಎನ್ನುತ್ತದೆ ಬ್ರಹ್ಮವೈವರ್ತಪುರಾಣ.’ರಾತ್ರಿ ರೂಪಾ ಮಹೇಶಾನಿ,ದಿವಾ ರೂಪೋ ಮಹೇಶ್ವರಃ’ ಎನ್ನುವುದು ಬ್ರಹ್ಮವೈವರ್ತಪುರಾಣದ ಸಿದ್ಧಾಂತ.ಶಿವನು ಹಗಲಾಗಿದ್ದರೆ ದುರ್ಗೆಯು ರಾತ್ರಿಸ್ವರೂಪಳು.ಆ ಕಾರಣದಿಂದಾಗಿ ದೇವಿಯನ್ನು ರಾತ್ರಿಯಲ್ಲಿ ಪೂಜಿಸುವ ಪದ್ಧತಿಯಿದ್ದು ಮುಂದೆ ಅದುವೆ ನವರಾತ್ರಿಯಾಗಿ ಬೆಳೆದಿದೆ.ಮತ್ಸ್ಯಪುರಾಣವು ಶಿವನನ್ನು ಹಗಲು ಹೊತ್ತಿನಲ್ಲಿ ಪೂಜಿಸಬೇಕು ಎನ್ನುತ್ತದೆ.ಶಿವೋಪಾಸಕರು ಬೆಳಿಗ್ಗೆ ಮತ್ತು ರಾತ್ರಿ ಎನ್ನುವ ದ್ವಿಕಾಲಪೂಜಾ ಪದ್ಧತಿಯ ಪೂಜಾವ್ರತಿಗಳಾಗಿದ್ದು ಬೆಳಿಗ್ಗೆ ಶಿವನನ್ನು ರಾತ್ರಿ ಶಕ್ತಿಯನ್ನು ಪೂಜಿಸುತ್ತಾರೆ.

ಶಿವನು ಪುರುಷನಾದರೆ ಶಕ್ತಿಯು ಪ್ರಕೃತಿಯು.ಆ ಪ್ರಕೃತಿತತ್ತ್ವವೇ ನವರಾತ್ರಿ ತತ್ತ್ವವು.
ಪ್ರಕೃತಿಸ್ತಂಚ ಚ ಸರ್ವಸ್ವ ಗುಣತ್ರಯ ವಿಭಾಗಿನೀ
ಕಾಳರಾತ್ರಿರ್ಮಹಾರಾತ್ರಿರ್ಮೋಹರಾತ್ರಿಸ್ಸುದಾರುಣ

ಅಂದರೆ ಪ್ರಕೃತಿಯು ಕಾಳರಾತ್ರಿ,ಮಹಾರಾತ್ರಿ ಮತ್ತು ಮೋಹರಾತ್ರಿಯೆನ್ನುವ ಮೂರು ರೂಪಗಳಲ್ಲಿ ವಿಶ್ವವನ್ನುವ್ಯಾಪಿಸಿ,ವಿಶ್ವೋದ್ಧರಣ ಕಾರ್ಯನಡೆಸುತ್ತಿರುವಳು.ಸತ್ವ,ರಜ ಮತ್ತು ತಮೋಗುಣವಾಚಕಗಳಾಗಿ ದೇವಿಯು ಮಹಾಕಾಳಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರೆನ್ನುವ ತ್ರಿದೇವಿಯರ ರೂಪದಲ್ಲಿ ಪೂಜೆಗೊಳ್ಳುತ್ತಿದ್ದಾಳೆ.ನವರಾತ್ರಿ ಎಂದರೆ ಒಂಬತ್ತುದಿನಗಳ ಕಾಲ ದೇವಿಯನ್ನು ಪೂಜಿಸುವ ಉತ್ಸವ,ಪರ್ವಕಾಲ.ಮಾರ್ಕಂಡೇಯ ಪುರಾಣವು ಅಶ್ವಯುಜ ಶುದ್ಧ ಪಾಡ್ಯಮಿಯಂದು ಹಸ್ತಾನಕ್ಷತ್ರದಿಂದಯುಕ್ತವಾದ ಶುಭಮುಹೂರ್ತದಲ್ಲಿ ಶ್ರೀದುರ್ಗಾದೇವಿಯ ಪೂಜೆಯನ್ನು ಪ್ರಾರಂಭಿಸಬೇಕು ಎನ್ನುತ್ತದೆ.”ನವ” ಎಂದರೆ ಒಂಬತ್ತು ಎಂದು ಅರ್ಥವಾದರೆ ” ಹೊಸತು” ಎನ್ನುವ ಮತ್ತೊಂದು ಅರ್ಥವೂ ಇದೆ.ಒಂಬತ್ತುದಿನಗಳ ದುರ್ಗಾ ಉಪಾಸನೆಯಿಂದ ದೇಹದ ನವಶಕ್ತಿಕೇಂದ್ರಗಳು ಚೇತನಗೊಂಡು ನವಶಕ್ತಿ,ನವಸ್ಫೂರ್ತಿಯನ್ನು ಪಡೆಯುವ ನವನವೋಲ್ಲಾಸಕರ ಚೈತನ್ಯದಾಯಕ ಉಪಾಸನೆಯೇ ನವರಾತ್ರಿಯದೇವಿ ಉಪಾಸನೆ.

ನವರಾತ್ರಿಯನ್ನು ದಸರಾಹಬ್ಬವನ್ನಾಗಿ,ಕರ್ನಾಟಕದ ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ.ದುರ್ಗಾದೇವಿಯು ದುಷ್ಟಶಕ್ತಿಗಳನ್ನು ದಮನಮಾಡಿ,ಶಿಷ್ಟಜನರಿಗೆ ಅಭಯವನ್ನು ನೀಡುತ್ತಾಳೆ ಎನ್ನುವುದೇ ದಸರಾಹಬ್ಬದ ಅರ್ಥ,ತತ್ತ್ವವಿವರಣೆ.”ದಶಹರಾ” ಎನ್ನುವ ಸಂಸ್ಕೃತಶಬ್ದದ ತದ್ಭವ ರೂಪವೇ ದಸರಾ ಆಗಿದೆ. ” ದ” ಎಂದರೆ ದಾನವರನ್ನು,ದುಷ್ಟರನ್ನೂ ದಂಡಿಸುವವಳು ಎಂದಾಗಿದ್ದು ” ಸರಾ” ಎಂದರೆ ಅವರಿಂದ ದೂರಮಾಡುವುದು ಎಂದರ್ಥ.ದಸರಾಹಬ್ಬದಲ್ಲಿ ತನ್ನನ್ನು ಭಜಿಸುವವರ ಶತ್ರುಗಳನ್ನು,ದುಷ್ಟಶಕ್ತಿಗಳನ್ನು ದುರ್ಗಾದೇವಿಯು ದೂರಮಾಡುತ್ತಾಳೆ ಎನ್ನುವುದೇ ದಸರಾ ಹಬ್ಬದ ಆಚರಣೆಯ ಹಿನ್ನೆಲೆ.

ಲೋಕಮಾತೆಯಾದ ವಿಶ್ವೇಶ್ವರಿ ದುರ್ಗಾದೇವಿಯು ಋಷಿಗಳು,ಯೋಗಿಗಳಿಂದ ಪೂಜಿಸಲ್ಪಟ್ಟ ಪರಾಶಕ್ತಿಯು

” ಯಯೇದಂ ಭ್ರಾಮ್ಯತೆ ವಿಶ್ವಂ ಯೋಗಿಭಿರ್ಯಾ ವಿಚಿಂಚ್ಯತೇ
ಯದ್ಧಾ ಸಾ ಭಾಸತೇ ವಿಶ್ವಂ ಸೈಕಾ ದುರ್ಗಾ ಜಗನ್ಮಯೀ”

ಯಾವ ದೇವಿಯಿಂದ ಈ ಸಂಸಾರಚಕ್ರ ತಿರುಗುವುದೋ,ಯೋಗಿಗಳು ಯಾವ ದೇವಿಯನ್ನು ನಿರಂತರ ಧ್ಯಾನಿಸುವರೋ,ಯಾವ ದೇವಿ ಪ್ರಕಾಶದಿ…

About The Author