ಕನ್ನಡ ನಾಡು ನುಡಿಗಾಗಿ ಹೋರಾಟಗೈದ ಬಸವರಾಜ ಪಡಕೋಟೆಯವರ 54ನೇ ಜನ್ಮದಿನವೆಂದು ಕಿರು ಲೇಖನ

ಶಹಪುರ : ಕರ್ನಾಟಕ ಕನ್ನಡದ ವಿಷಯ ಬಂದಾಗ ಸರಕಾರ,ಸಚಿವರು ಯಾರನ್ನು ಕೇಳದೆ ನಾಡು ನುಡಿ ಜಲವೇ ನಮಗೆ ಮುಖ್ಯ. ಹೋರಾಟ ಮಾಡಲು ಸದಾ ಸಿದ್ಧ. ಜೈಲಿಗೆ ಹೋಗಲು ಸಿದ್ದ ಎನ್ನುತ್ತಾರೆ ನಮ್ಮ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಪಡ್ಕೋಟೆ. ಸಂಸಾರವನ್ನು ಲೆಕ್ಕಿಸದೆ ರಾಜ್ಯದ ಒಳಿತಿಗಾಗಿ ಕನ್ನಡದ ಉಳಿವಿಗಾಗಿ ಕಾವೇರಿಯ ಹೋರಾಟಕ್ಕೆ ಸಿದ್ದ ಎನ್ನುತ್ತಾರೆ. 40 ವರ್ಷಗಳ ನಾಡು ನುಡಿಯ ಹೋರಾಟದಲ್ಲಿ ಅವರ ಚರಿತ್ರೆ ಹೋರಾಟದ ಹಾದಿಯೇ ವಿಚಿತ್ರ. ಕನ್ನಡ ಉಳಿಸುವುದು ಬಡವರು ಕಾರ್ಮಿಕರೆ ಹೊರತು ಶ್ರೀಮಂತರು ಅಥವಾ ಜನಪ್ರತಿನಿಧಿಗಳಲ್ಲ ಎನ್ನುತ್ತಾರೆ.

ಪ್ರಸ್ತುತ ಸೋಶಿಯಲ್ ಮೀಡಿಯಾಗಳಿವೆ. ಆ ಸಮಯದಲ್ಲಿ ಇರಲಿಲ್ಲ. ಇದ್ದಿದ್ದರೆ ನಾವೆಲ್ಲ ಅಂದೆ ಹೀರೋಗಳಾಗುತ್ತಿದ್ದೆವು. ಕನ್ನಡಕ್ಕಾಗಿ ಹಲವಾರು ಬಾರಿ ಜೈಲು ಸೇರಿದ್ದೇವೆ ಎನ್ನುತ್ತಾರೆ. 2೦೦3ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಾಡು ನುಡಿಗಾಗಿ ಹೋರಾಟ ಮಾಡಿದ್ದೇವೆ. ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸಬೇಕೆಂದು ಹೋರಾಟ ಮಾಡಿ ರೈಲ್ವೆ ತಡೆ ಚಳುವಳಿಯನ್ನು ಮಾಡಿದ್ದೇವೆ.ನಮ್ಮ ಹೋರಾಟದ ಪ್ರತಫಲ ಇಂದು ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವಂತಾಗಿದೆ. ಇದು ಇತರ ರಾಜ್ಯಗಳಿಗೂ ಕೂಡ ಅವರ ರಾಜ್ಯಗಳ ಭಾಷಾ ಪರೀಕ್ಷೆಗಳು ನಡೆಯುವಂತೆ ನಮ್ಮ ಹೋರಾಟದಿಂದ ಆಯಿತು ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಕನ್ನಡ ನಾಮಪಲಕಕ್ಕಾಗಿ ಹೋರಾಡಿದ್ದೇವೆ,
ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಬೆಳಗಾವಿ ಮೆಯರಗೆ ವಿಧಾನಸೌಧದಲ್ಲಿ ಮಸಿ ಬಳಿದಿದ್ದೇವೆ. 15 ದಿನಗಳ ಕಾಲ ಜೈಲು ಸೇರಿದ್ದೇವೆ. ಇದೆಲ್ಲವೂ ರಾಜ್ಯದ ನಾಡು ನುಡಿಗಾಗಿ ನಮ್ಮ ಸಂಸಾರವನ್ನು ಲೆಕ್ಕಿಸದೆ ಹೋರಾಟ ಮಾಡಿದ್ದೇವೆ. ನಮ್ಮ ಸ್ವಾರ್ಥಕ್ಕಾಗಿ ಅಲ್ಲ ಎನ್ನುತ್ತಾರೆ ಬಸವರಾಜ ಪಡಕೋಟೆ.ಇಂತಹ ಹೋರಾಟಗಾರನ ಮೇಲೆ ಹಲವಾರು ಕೇಸುಗಳು ನಮ್ಮ ಮೇಲೆ ದಾಖಲಾಗಿವೆ. ಆದರೂ ನಾವು ಹೋರಾಟ ಬಿಟ್ಟಿಲ್ಲ. ರಾಜ್ಯದ ಭಾಷೆ ನಾಡು ನುಡಿ ವಿಷಯ ಬಂದಾಗ ಹೋರಾಟಕ್ಕೆ ಸಿದ್ಧ ಎನ್ನುತ್ತಾರೆ ಬಸವರಾಜ ಪಡ್ಕೋಟೆ. ಇಂದು ಬಸವರಾಜ ಪಡಕೋಟೆ ಅವರ 54ನೇ ಜನ್ಮ ದಿನೋತ್ಸವದಂದು ಅವರಿಗೆ ಶಿವ-ದುರ್ಗೆಯರು ಆಯುರಾರೋಗ್ಯ ಕೊಡಲೆಂದು ಆಶಿಸೋಣ

 

About The Author