ತಾಲೂಕಿಗೆ ಕೆಎಎಸ್ ಉಸ್ತುವಾರಿ ನೋಡಲ್ ಆಫೀಸರ್‌ಗಳಾಗಿ ನೇಮಕ : ಮುಂದಿನ ತಿಂಗಳಿನಿಂದ ಕಾರ್ಯಾರಂಭ ಸರಕಾರ ನಿರ್ಧಾರ

ಬೆಂಗಳೂರು : ತಳಮಟ್ಟದಲ್ಲಿ ಜಿಡ್ಡುಗಟ್ಟಿರುವ ಆಡಳಿತಕ್ಕೆ ಚುರುಕು ಮೂಡಿಸುವ ಮೂಲಕ ಹೊಸ ರೂಪ ನೀಡುವ ಉದ್ದೇಶದಿಂದ ಪ್ರತಿ ತಾಲೂಕಿಗೆ ಒಬ್ಬ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡುವ ಹೊಸ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.

ಸರ್ಕಾರ ರೂಪಿಸುವ ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನ, ಜನಪರ ಯೋಜನೆಗಳ ಜಾರಿ ತಾಲೂಕು ಮಟ್ಟದಲ್ಲಿ ಆದಾಗ ಮಾತ್ರ ಅದರ ಫಲ ಜನರಿಗೆ ಸಿಗುತ್ತದೆ. ಆದ್ದರಿಂದಲೇ ಸಮನ್ವಯ ಸಾಧಿಸುವ ಮೂಲಕ ಆಡಳಿತವನ್ನು ಸರಿದಾರಿಗೆ ತರುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆಯ ಫಲವಾಗಿ ಆಡಳಿತ ಸುಧಾರಣೆಗೆ ಹೊಸ ರೂಪ ನೀಡಲಾಗುತ್ತಿದೆ. ಕೆಎಎಸ್ ಅಧಿಕಾರಿಗಳೆಲ್ಲರೂ ರಾಜ್ಯದವರೇ ಆಗಿರುತ್ತಾರೆ. ರಾಜ್ಯದ ಅಭಿವೃದ್ಧಿಗೆ ಅವರಿಗೆ ವಿಶೇಷ ಆಸಕ್ತಿ ಇದ್ದೇ ಇರುತ್ತದೆ. ಆದ್ದರಿಂದ ಅಂಥ ಅಧಿಕಾರಿಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಸರ್ಕಾರ ತೀರ್ವನಿಸಿದೆ.

ಯಾವಾಗಿನಿಂದ ಜಾರಿ?
ಮುಂದಿನ ತಿಂಗಳಿನಿಂದಲೇ ತಾಲೂಕು ನೋಡಲ್ ಅಧಿಕಾರಿಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನೋಡಲ್ ಅಧಿಕಾರಿಯ ಕರ್ತವ್ಯಗಳೇನೇನು ಎಂಬುದನ್ನು ಅಂತಿಮ ಮಾಡಲಾಗಿದೆ. ಇಂತಹದೊಂದು ಯೋಜನೆಯ ಮೂಲಕ ಬಹಳ ದೊಡ್ಡ ಬದಲಾವಣೆ ನಿರೀಕ್ಷೆ

ಗ್ರಾಮಗಳಿಗೂ ಭೇಟಿ,
ತಾಲೂಕು ನೋಡಲ್ ಅಧಿಕಾರಿಗಳು ತಮ್ಮ ತಾಲೂಕು ಭೇಟಿಯ ಸಂದರ್ಭದಲ್ಲಿ ಗ್ರಾಮಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಬಹುದು. ಸಾರ್ವಜನಿಕರಿಂದ ದೂರು ಬಂದಾಗ ಕಡ್ಡಾಯವಾಗಿ ಗ್ರಾಮಗಳಿಗೆ ಹೋಗಿ ಬರುವಂತಿರಬೇಕು.

ಸಿಇಒ ಜತೆ ಹೆಚ್ಚು ಸಂಪರ್ಕ: ಜಿಲ್ಲಾ ಪಂಚಾಯಿತಿಯ ಸಿಇಒಗಳ ಜತೆ ಹೆಚ್ಚಿನ ಸಂಪರ್ಕದಲ್ಲಿರಬೇಕು. ಕುಡಿಯುವ ನೀರು, ಶಿಕ್ಷಕರ ಕೊರತೆ, ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ಇತರೆ ಸಿಬ್ಬಂದಿ ಕೊರತೆ ಎದುರಾದ ಕೂಡಲೇ ಸಿಇಒಗಳನ್ನು ಸಂಪರ್ಕ ಮಾಡಿ ಕೊರತೆ ನೀಗಿಸುವ ಕಡೆ ಗಮನ ಹರಿಸ ಬೇಕಾಗುತ್ತದೆ.

ಐಎಎಸ್ ಅಧಿಕಾರಿಗಳು ವಿಫಲ,
ಈಗ ಪ್ರತಿ ಜಿಲ್ಲೆಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪ್ರತಿ ತಿಂಗಳು ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗೆ ಭೇಟಿ ನೀಡಬೇಕು, ತಾಲೂಕು ಕೇಂದ್ರಗಳಿಗೆ ಹೋಗಬೇಕು, ಪ್ರಗತಿಯ ವರದಿಯನ್ನು ಸರ್ಕಾರದ ಆಡಳಿತ ಸುಧಾರಣಾ ಇಲಾಖೆಗೆ ನೀಡಬೇಕೆಂಬ ನಿಯಮಗಳಿವೆ.
ಆದರೆ, ಬಹುತೇಕ ಅಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿಯೂ ಅನೇಕರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಭೇಟಿ ಕೊಟ್ಟರೂ ಬೆಳಗ್ಗೆ ಹೋಗಿ ಸಂಜೆ ವಾಪಸ್ ಬರುವವರೇ ಹೆಚ್ಚು, ದೂರದ ಜಿಲ್ಲೆಗಳಿಗೆ ವರ್ಷಕ್ಕೆ ಎರಡು ಬಾರಿಯೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೋಗಿರುವ ಉದಾಹರಣೆ ಸಿಗುವುದಿಲ್ಲ. ಇನ್ನು, ತಾಲೂಕಿಗೆ ಹೋದವರ ಸಂಖ್ಯೆ ಇಲ್ಲವೇ ಇಲ್ಲ. ತಳಹಂತದಲ್ಲಿ ಆಡಳಿತವನ್ನು ಸರಿದಾರಿಗೆ ತರದಿದ್ದರೆ ಸುಧಾರಣೆ ಸಾಧ್ಯವೇ ಇಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಕೆಳಗೆ ಪ್ರತಿ ತಾಲೂಕಿಗೆ ಒಬ್ಬ ಕೆಎಎಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೀಡುವ ಮೂಲಕ ಬದಲಾವಣೆ ತರಲು ಸರ್ಕಾರ ತೀರ್ಮಾನ ಮಾಡಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಇರುವ ಎಲ್ಲ ಜವಾಬ್ದಾರಿಗಳು ಇವರಿಗೆ ಇದ್ದು ತಾಲೂಕು ಉಸ್ತುವಾರಿ ಕಾರ್ಯದರ್ಶಿಯೇ ಅಗಿರುತ್ತಾರೆ. ಆದರೆ, ತಾಲೂಕು ನೋಡಲ್ ಅಧಿಕಾರಿ ಎಂದೇ ಕರೆಯಲಾಗುತ್ತದೆ.

ಆಯ್ಕೆ ಹೇಗೆ?,
ಸರ್ಕಾರ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ಹಿಡಿದುಕೊಂಡು ತಾಲೂಕು ಹಂಚಿಕೆ ಮಾಡುವುದಿಲ್ಲ. ಅಧಿಕಾರಿಗಳ ವಿವೇಚನೆಗೆ ಬಿಡಲಾಗುತ್ತದೆ. ಅವರು ತಮಗೆ ಇಷ್ಟವಾದ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಒಂದೇ ತಾಲೂಕಿಗೆ ಹೆಚ್ಚು ಹೆಸರು ಬಂದಾಗ ಮಾತ್ರ ಮೊದಲು ಬಂದವರಿಗೆ ಆಯ್ಕೆ ಮಾಡಲಾಗುತ್ತದೆ. ಯಾವುದೇ ತಾಲೂಕನ್ನು ಯಾರೊಬ್ಬರು ಆಯ್ಕೆ ಮಾಡಿಕೊಳ್ಳದಿದ್ದಾಗ ಮಾತ್ರ ಸರ್ಕಾರ ಆಯ್ಕೆ ಮಾಡುತ್ತದೆ. ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಮಾತ್ರವಲ್ಲದೇ ಆ ಹುದ್ದೆಗೆ ಸರಿಸಮಾನವಾದ ಹುದ್ದೆಯಲ್ಲಿರುವ ಕೆಎಎಸ್‌ಯುತರ ಅಧಿಕಾರಿಗಳು ಸಹ ತಾಲೂಕುಗಳ ನೋಡಲ್ ಅಧಿಕಾರಿಯಾಗಲು ಮುಂದೆ ಬಂದರೆ ಅವಕಾಶ ನೀಡಲಾಗುತ್ತದೆ. ಅಭಿವೃದ್ಧಿ ಕಾರ್ಯಗಳ ಮೇಲುಸ್ತುವಾರಿ ಸರ್ಕಾರದ ಯೋಜನೆಗಳ ಸಮರ್ಥ ಜಾರಿಯ ಹೊಣೆ ಜಿಲ್ಲಾ ಕಾರ್ಯದರ್ಶಿಗಳು ತಾಲೂಕುಗಳಿಗೆ ಹೋಗುತ್ತಿಲ್ಲ ವೆಬ್ ಪೋರ್ಟಲ್ ಮಾಡಿ ಅದರ ಮೂಲಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಪ್ರತಿ ತಿಂಗಳು ಭೇಟಿ, ಜನತಾ ದರ್ಶನ ಸಹ ಮಾಡಬೇಕು ಮುಂದಿನ ತಿಂಗಳಿನಿಂದಲೇ ಈ ಕಾರ್ಯ ಆರಂಭ ವೆಬ್ ಪೋರ್ಟಲ್ ರಚನೆ:: ಕೆಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ಮಾಡಿ ಸುಧಾರಣೆ ತರುವ ಕೆಲಸಕ್ಕೆ ಪೂರಕವಾಗಿ ವೆಬ್ ಪೋರ್ಟಲ್‌ವೊಂದನ್ನು ರೂಪಿಸಲಾಗುತ್ತದೆ. ರಾಜ್ಯಮಟ್ಟದಲ್ಲಿ ಸರ್ಕಾರದ ಗಮನಕ್ಕೆ ತರುವುದು ಹಾಗೂ ಪ್ರತಿ ತಿಂಗಳ ವರದಿಯನ್ನು ಇದರ ಮೂಲಕವೇ ಸಲ್ಲಿಸಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಾವೇ ವರದಿ ಸಿದ್ಧಪಡಿಸಿ ಕೊಡಬೇಕು. ಆದ್ದರಿಂದ ಅದು ಸರಿಯಾಗಿ ಜಾರಿಯಾಗು ವುದಿಲ್ಲ. ವೆಬ್ ಪೋರ್ಟಲ್ ಮೂಲಕ ಅಧಿಕಾರಿಗಳ ಮೇಲೂ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.

ಕರ್ತವ್ಯಗಳೇನು?

1.ಪ್ರತಿ ತಿಂಗಳು ಕಡ್ಡಾಯವಾಗಿ ತಾಲೂಕಿಗೆ ಹೋಗಬೇಕು,

2 ದಿನ ವಾಸ್ತವ್ಯ ಮಾಡಬೇಕು ಬೇರೆ ಬೇರೆ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ
ಮಾಡಬೇಕು

3.ನರೇಗಾ ಕಾಮಗಾರಿಗಳು, ಹಾಸ್ಟೆಲ್‌ಗಳು, ಆರೋಗ್ಯ ಸೇವೆ, ಅಭಿವೃದ್ಧಿ ಯೋಜನೆಗಳು, ಶಾಲಾ-ಕಾಲೇಜುಗಳಿಗೆ ಭೇಟಿ, ಪರಿಶೀಲನೆ.

4.ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವಂತಹ ಎನ್ ಆರ್‌ಎಲ್‌ಎಂ, ಎನ್‌ಯುಎಲ್‌ಎಂ ಯೋಜನೆಗಳ ಅನುಷ್ಠಾನ

5.ತಮ್ಮದೇ ಆದ ನೆಟ್‌ವರ್ಕ್ ಬೆಳೆಸಿಕೊಂಡು ಸಮನ್ವಯ
ಸಾಧಿಸಬೇಕು

6.ಯಾವುದೇ ಸಮಸ್ಯೆಗೆ ಅದೇ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಜತೆ ಸಮನ್ವಯ

7.ಸಿಎಸ್ಆರ್ ನಿಧಿಯನ್ನು ತಂದು ವಿವಿಧ ಕೆಲಸಗಳನ್ನು ನಿರ್ವಹಿಸುವ ಕಡೆ ಗಮನಹರಿಸಬೇಕು

8.ಪ್ರತಿ ತಿಂಗಳು ಜನತಾ ದರ್ಶನದ ಮೂಲಕ
ಸಾರ್ವಜನಿಕರ ಸಮಸ್ಯೆಗೆ ಧನಿಯಾಗಬೇಕು

About The Author