ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು – ಶಾಂತಗೌಡ ಪಾಟೀಲ್

ಶಹಪುರ : ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿ ಈ ಸಮಾಜಕ್ಕೆ ಪರಿಚಯಿಸಿ ಅವರ ಭವಿಷ್ಯಕ್ಕೆ ಬೆಳಕನ್ನು ನೀಡುವ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ,ಆದ್ದರಿಂದ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು ಎಂದು ಯಾದಗಿರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಹೇಳಿದರು.

ತಾಲೂಕಿನ ಸಗರ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಅವರಣದಲ್ಲಿ ಹಮ್ಮಿಕೊಂಡಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಇನ್ನೊಬ್ಬರ ಕಷ್ಟ ಕಾಲಕ್ಕೆ ಸ್ಪಂದಿಸುವ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಅತ್ಯಗತ್ಯವಿದೆ ಎಂದು ನುಡಿದರು.

ಹಿರಿಯ ನಿವೃತ್ತ ಕನ್ನಡ ಶಿಕ್ಷಕರಾದ ಎಸ್.ಎನ್.ಪಾಟೀಲ್ ಮಾತನಾಡಿ ಈ ಗುರುವಂದನಾ ಕಾರ್ಯಕ್ರಮ ಗುರು ಶಿಷ್ಯರ ಬಾಂಧವ್ಯ ಬೇಸುಗೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶ್ಲಾಘಿಸಿದರು, ಈ ಶಾಲೆಯಲ್ಲಿ ಕಲಿತ ಹಳೆಯ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಜೊತೆಗೆ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿರುವುದು ನಿಜಕ್ಕೂ ನನಗ ವೈಯಕ್ತಿಕವಾಗಿ ಸಂತೋಷ ತರುತ್ತಿದೆ ಎಂದು ನುಡಿದರು ಸುದೀರ್ಘವಾಗಿ ತಾವು ಸಲ್ಲಿಸಿದ ಶಾಲೆ ಹಾಗೂ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳನ್ನು ಸಂದರ್ಭದಲ್ಲಿ ಮೆಲುಕು ಹಾಕಿದರು.ಎಲ್ಲಾ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು

ಸಮಾರಂಭದ ವೇದಿಕೆಯ ಮೇಲೆ ಒಕ್ಕಲಗೇರಿ ಹಿರೇಮಠದ ಷ.ಬ್ರ ಮರುಳು ಮಾಹಾಂತ ಶಿವಾಚಾರ್ಯರು,ಹಾಗೂ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು, ಶಿಕ್ಷಕರಾದ ಬಿ.ಜಿ.ಬಶೆಟ್ಟಿ,ಈರಯ್ಯ ಸ್ವಾಮಿ ಮಠ,ಗುರುಲಿಂಗಯ್ಯ ಸ್ವಾಮಿ,ನಿಂಗಣ್ಣ ಗುಂಡನೂರ,ರಮೇಶ್ ಕಂಬಾರ್,ಶಿಕ್ಷಕಿರಾದ ಅರುಂಧತಿ ಭಾಗೀರಥಿ,ಬಸ್ಸಮ್ಮ ಸಜ್ಜನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು,ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎನ್.ಕೆ. ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ವಿವಿಧ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಈ ಗುರುವಂದನಾ ವಂದನಾ ಕಾರ್ಯಕ್ರಮದಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಗ್ರಾಮದ ಐದು ಜನ ಯೋಧರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು,ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಪೂಜಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ನಾ ಅರಿಕೇರಿ ಸ್ವಾಗತಿಸಿದರು ನಿರೂಪಿಸಿದರು ಶಿವರಾಜ ಕನಗುಂಡು ವಂದಿಸಿದರು.

About The Author