ವಿಶ್ವೇಶ್ವರ ಶಿವನ ಅನುಗ್ರಹ,ಗಂಟಲು ಕ್ಯಾನ್ಸರ್ ನೋವಿನಿಂದ ಮುಕ್ತರಾದರು ಪತ್ತೆಪ್ಪ ಪವಾರ್

Raichur ಗಬ್ಬೂರು,ಅಗಸ್ಟ್ 20 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಗಸ್ಟ್ 20 ರ ರವಿವಾರದಂದು 58 ನೆಯ ‘ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸವನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವೋಪಶಮನ ಕರುಣಿಸಿದರು.

ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಂಡೆಗುಡ್ಡ ತಾಂಡದ ಪತ್ತೆಪ್ಪ ಪವಾರ್ ಅವರು ಗುಣಮುಖರಾಗಿದ್ದುದು ಈ ದಿನದ ಶಿವೋಪಶಮನದ ವಿಶೇಷವಾಗಿತ್ತು.ಪೂನಾದಲ್ಲಿ ಪತ್ನಿ ಢಾಕಮ್ಮ ಅವರ ಜೊತೆ ಕೆಲಸ ಮಾಡಿ ಬದುಕುತ್ತಿರುವ ಪತ್ತೆಪ್ಪ ಪವಾರ್ ಗಂಟಲು ನೋವಿನಿಂದ ಬಳಲುತ್ತಿದ್ದು ವೈದ್ಯರು ಗಂಟಲು ಕ್ಯಾನ್ಸರ್ ಎಂದು ಗುರುತಿಸಿದ್ದರಿಂದ ಬೆಂಗಳೂರಿನ ನಾರಾಯಣ ಮತ್ತು‌ ಕಿದ್ವಾಯಿ ಆಸ್ಪತ್ರೆಗಳಲ್ಲಿ ತೋರಿಸಿಕೊಂಡು ಗುಣಮುಖರಾಗದೆ ಊಟ ಮಾಡದ ಸ್ಥಿತಿಯಲ್ಲಿದ್ದ ಪತ್ತೆಪ್ಪ ಪವಾರ್ ಮಹಾಶೈವ ಧರ್ಮಪೀಠಕ್ಕೆ ಅಗಸ್ಟ್ 06 ರಂದು ನಡೆದಿದ್ದ 56 ನೆಯ ಶಿವೋಪಶಮನಕ್ಕೆ ಬಂದು ಪೀಠಾಧ್ಯಕ್ಷರಲ್ಲಿ ತಮ್ಮ ಆರೋಗ್ಯ ಸಮಸ್ಯೆಯನ್ನು ನಿವೇದಿಸಿಕೊಂಡಿದ್ದರು.ಪೀಠಾಧ್ಯಕ್ಷರು ಪತ್ತೆಪ್ಪ ಪವಾರ್ ಅವರ ಗಂಟಲು ಕ್ಯಾನ್ಸರ್ ರೋಗಗುಣಪಡಿಸುವಂತೆ ಭವರೋಗವೈದ್ಯ ವಿಶ್ವೇಶ್ವರ ಶಿವನಲ್ಲಿ ಪ್ರಾರ್ಥಿಸಿ ಶಿವಾಭಯವನ್ನು ಅನುಗ್ರಹಿಸಿದ್ದರು ಮತ್ತು ಮೂರು ರವಿವಾರಗಳಂದು ವಿಶ್ವೇಶ್ವರ ಶಿವನ ಸನ್ನಿಧಿಗೆ ಬರಲು ತಿಳಿಸಿದ್ದರು.ಇಂದು ನಡೆದ 58 ನೆಯ ಶಿವೋಪಶಮನಕ್ಕೆ ಪತ್ನಿ ಢಾಕಮ್ಮ ಅವರ ಜೊತೆ ಶಿವನಸನ್ನಿಧಿಗೆ ಬಂದ ಪತ್ತೆಪ್ಪ ಪವಾರ್ ಗುಣಮುಖರಾಗಿರುವುದಾಗಿಯೂ ಈಗ ಊಟ ಮಾಡುತ್ತಿರುವುದಾಗಿಯೂ ತಿಳಿಸಿದ್ದಲ್ಲದೆ ಮುಂದಿನವಾರ ಪುನಃ ಪೂನಾಕ್ಕೆ ದುಡಿಯಲು ಹೋಗುವುದಾಗಿ ತಿಳಿಸಿ ಪೀಠಾಧ್ಯಕ್ಷರಿಗೆ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿದರು.ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರದಲ್ಲಿ ಪ್ರಕಟಗೊಂಡು ಜಗದೋದ್ಧಾರದ ಲೀಲೆಯನ್ನಾಡುತ್ತಿರುವ ಪರಶಿವನು ತನ್ನನ್ನು ನಂಬಿ ಬರುವ ಭಕ್ತರ ಅಸಾಧ್ಯರೋಗಗಳನ್ನು ಕಳೆದು ಅವರನ್ನು ಸಂಕಟಮುಕ್ತರನ್ನಾಗಿಸುತ್ತಿದ್ದಾನೆ.

‌ ಕಳೆದ ವಾರ ಮಹಾಶೈವ ಧರ್ಮಪೀಠಕ್ಕೆ ಬಂದು ಮೂಲವ್ಯಾಧಿ ರೋಗಮುಕ್ತರಾಗಿದ್ದ ನಾಗೋಲಿಯ ಮಾಳಪ್ಪ ಪೂಜಾರಿ ಅವರು ಮಹಾಶೈವ ಧರ್ಮಪೀಠದ ಇಂದಿನ ದಾಸೋಹಸೇವೆಯನ್ನು ನಡೆಸಿಕೊಟ್ಟರು.ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಕೈಲಾಸಕ್ಕೆ ಆಗಮಿಸಿ ಕೃತಜ್ಞತಾಪೂರ್ವಕವಾಗಿ ಪೀಠಾಧ್ಯಕ್ಷರನ್ನು ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ಪೀಠಾಧ್ಯಕ್ಷರು ಮಾಳಪ್ಪ ಪೂಜಾರಿ ದಂಪತಿಗಳನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಗುರುಬಸವ ಹುರಕಡ್ಲಿ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ, ಶಿವಯ್ಯಸ್ವಾಮಿ ಮಠಪತಿ,ಉಮೇಶ ಸಾಹುಕಾರ ಅರಷಣಗಿ,ಬಾಬುಗೌಡ ಯಾದವ ಸುಲ್ತಾನಪುರ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ,ತಾತಪ್ಪ ಚಿಕ್ಕಳ್ಳಿ,ರಘುನಂದನ್ ಪೂಜಾರಿ,ಬಸ್ಸಣ್ಣ ಗುತ್ತೆದಾರ,ರಂಗಪ್ಪ ಗಾಳಿ, ಸಿದ್ರಾಮಯ್ಯ ರಘುನಾಥನಹಳ್ಳಿ,ಶಿವಪುತ್ರಪ್ಪ ಅನ್ವರಿ, ಬಸವರಾಜ ಹದ್ದಿನಾಳ,ಆನಂದ,ರಮೇಶ ಮಡಿವಾಳ,ಅಮರೇಶ , ರಘುರಾಮ ಹೇರೂರು,ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author