ಕರ್ನಾಟಕ ಕವಿಭೂಷಣ ರಸ್ತಾಪೂರದ ಭೀಮಕವಿಗಳನ್ನು,ಕಡೆಗಾಣಿಸಿದ ತಾಲೂಕ ಸಾಹಿತ್ಯ ಪರಿಷತ್ತು ತನ್ನ ಭೂಷಣವನ್ನೆ ಕಳೆದುಕೊಂಡಿದೆ : ಶ್ರೀಶೈಲ ಬಿರಾದಾರ

ಶ್ರೀಶೈಲ ಬಿರಾದಾರ ನಾಗನಟಿಗಿ

           ಸಗರ ಗ್ರಾಮವು “ಸಗರ ಸಾವಿರಹಳ್ಳಿ ಏಕ ದೋರನಹಳ್ಳಿ “ಎಂಬ ಜನಪದರ ವಾಣಿಯಂತೆ ಸುತ್ತುಮುತ್ತಲಿನ ಹತ್ತಾರು ಗ್ರಾಮಗಳನ್ನು ಹೊಂದಿರುವ ದೊಡ್ಡಗ್ರಾಮವಾಗಿದೆ, ಈ ಗ್ರಾಮವು ಐತಿಹಾಸಿಕ  ಭಾವೈಕ್ಯತೆಯ ತಾಣವಾದೆ.ಸಗರನಾಡಿನ ತವರೂರು ಸಗರ ಗ್ರಾಮದಲ್ಲಿ ದಿನಾಂಕ ೨೪/೦೭/೨೦೨೩ರಂದು ಹಮ್ಮಿಕೊಳ್ಳಲಾಗಿದ್ದ ಶಹಾಪೂರ ತಾಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರಾದ ಶಹಾಪೂರದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಈ ಹಿಂದೆ ನಡೆದ ಎರಡು ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಬೀಮಕವಿಯನ್ನು ಕಡೆಗಣಿಸಿದ್ದು ಸಾಹಿತ್ಯ ಮತ್ತು ಚರಿತ್ರೆಯ ಕುರಿತು ನಮಗಿರುವ ಅಜ್ಞಾನವನ್ನು ತೋರ್ಪಡಿಸುತ್ತದೆ.19 ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆದಿಯಲ್ಲಿ ಹಳ್ಳಿಯೊಂದರ ಹಿಂದುಳಿದ ಸಮುದಾಯದ ಪರಿಸರದಲ್ಲಿ ಬದುಕು ಸವೆಸಿದ ರಸ್ತಾಪುರದ ಬೀಮಕವಿಗಳು ಪುರಾಣ, ಸ್ತೋತ್ರ, ಅನುಬಾವ, ಬಯಲಾಟ, ನಾಟಕದಂತ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಗೈದ ಪ್ರತಿಭೆ.

ಸಾಹಿತ್ಯ ಪಂಡಿತರಿಗೆ ಮಾತ್ರ ಮೀಸಲಲ್ಲ ಎಂಬುದನ್ನು ಸಾಬೀತುಪಡಿಸಿದವರು. ಕನ್ನಡ ಶಾಲೆ ನಡೆಸಿದವರು. ನಾಟಕ ಕಂಪನಿ ಕಟ್ಟಿದವರು. ಮಾಸ್ತರರಾಗಿ ಅನೇಕ ಬಯಲಾಟ ಆಡಿಸಿದವರು. ಪಾತ್ರ ಕಟ್ಟಿ ಕುಣಿದವರು.ಅನೇಕ ಸವಾಲುಗಳ ಮೆಟ್ಟಿ ಹೋರಾಟದ ಬದುಕು ಬಾಳಿದವರು.ಇಲ್ಲಿವರೆಗೂ ಅವರ ಸಾಹಿತ್ಯದ ಕುರಿತು ವಿಸ್ತ್ರುತವಾದ ಅದ್ಯಯನ ಮಾಡದೇ ನಾವು ಅಪಮಾನಿತರಾಗಿದ್ದೇವೆ. ಆದರೆ ಈ ನೆಲದ ಸಾಹಿತ್ಯ ಸಾಂಸ್ಕ್ರುತಿಕ ಸಂಭ್ರಮಗಳಲ್ಲಿ ಅವರನ್ನು ಗೌರವಪೂರ್ವಕವಾಗಿ ನೆನೆಯದೇ ಇರುವುದು ಅತ್ಯಂತ ಬೇಸರದ ಸಂಗತಿ.

ಈ ಹಿಂದೆಲ್ಲ ಇದರ ಹಿಂದೆ ಸಾಂಸ್ಕೃತಿಕ ರಾಜಕಾರಣ ಕೆಲಸ ಮಾಡುತ್ತಿದೆ ಎಂದು ಮಾತನಾಡಬಹುದಿತ್ತು. ಆದರೆ ಈ ಹೊತ್ತಲ್ಲಿ ಹೀಗಾಗಬಾರದಿತ್ತು. ನೆಲದ ಸಾಹಿತ್ಯ ಸಂಸ್ಕ್ರುತಿಗಳ ಕುರಿತ ಸಮಗ್ರ ಪರಿಕಲ್ಪನೆ, ಸಮನ್ವಯಗೊಳಿಸಬೇಕಾದ ವಿವೇಕ, ಸಂಯೋಜನೆಯ ತಂತ್ರಗಾರಿಕೆಗಳು ಕ್ಷೀಣವಾಗಿರುವುದು ಎದ್ದು ಕಾಣುತ್ತದೆ. ಸಂಬಂದಿಸಿದವರು ಸಮಜಾಯಿಶಿಯನ್ನಾದರೂ ಕೊಡಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ.

ಷಟ್ಪದಿಯ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿದ ಅಭಿನವಕಾಳಿದಾಸನೆಂದು ಬಿರುದಾಂಕಿತನಾದ ರಸ್ತಾಪೂರದ ಭೀಮಕವಿಗಳು ಬಸವ ಪುರಾಣ,ರಸ್ತಾಪುರ ಶರಭಲಿಂಗೇಶ್ವರ ಪರಾಣ, ದೋರನಹಳ್ಳಿಯ ಮಾಂತೇಶ್ವರ ಪುರಾಣ,ಶಹಾಪೂರದ ಚರಬಸವೇಶ್ವರ ಪುರಾಣ, ಮೈಲಾರಲಿಂಗೇಶ್ವರ ಪುರಾಣ,ಹಾಲ್ಮತೋತ್ತೆಜಕ ಪುರಾಣ ಸೇರಿದಂತೆ  ರಾಮಾಯಣ ಮಹಾಭಾರತ ಆಧರಿತ ಅನೇಕ ಬೈಲಾಟಗಳನ್ನು ಮತ್ತು ಸಾಮಾಜಿಕ ನಾಟಕಗಳನ್ಬು ರಚಿಸಿ ಪ್ರದರ್ಶನ ಮಾಡಿಸಿದ್ದಾರೆ.ಅಂದಿನ ಸುರಪುರ ಗೋಷಲ ವಂಶದ ಸಂಸ್ಥಾನದ ಕವಿಯಾದ ಇವರನ್ನು ಸುರುಪರ ಅರಸರು “ಭಿಮಕವಿ ” ಎಂಬ ಬಿರುದನ್ನು ನೀಡಿ ಗೌರವಿಸಿದರೆ,ಇಂದು ಸುರುಪುರದ ಕನ್ಡಡ ಸಾಹಿತ್ಯ ಸಂಘವು ಸುರಪುರದ ಬಸ್ ನಿಲ್ದಾಣದ ಎದುರಿಗಿರುವ ತನ್ನ ಸಂಘದ ಕಟ್ಟಡದ ಮಳಿಗೆಗಳಿಗೆ ರಸ್ತಾಪೂರದ ಭೀಮಕವಿಗಳ ಮಳಿಗೆ ಎಂದು ನಾಮಕರಣಮಾಡಿದ್ದಾರೆ.

ಸಗರ ಸಾವಿರಹಳ್ಳಿಯಲ್ಲಿ ಒಂದಾದ ಭೀಮಕವಿಗಳ ಊರು ರಸ್ತಾಪೂರವು ಒಂದಾಗಿದೆ. ಆದರೆ ಊರಲ್ಲೆ ನಡೆಯುತ್ತಿರುವ ೩ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆ ಮಹಾ ಕವಿಗಗಳನ್ನು ಕಡೆಗಾಣಿಸುತ್ತಿದೆ ಎಂದು ಸಮ್ಮೇಳನದ ಆಮಂತ್ರಣ ಪತ್ರಿಕೆ ಗಮನಿಸಿದಾಗ ಕಂಡು ಬರುತ್ತಿದೆ,ಭೀಮಕವಿಗಳ ವಿಷಯದಲ್ಲಿ ಸಾಹಿತ್ಯ ಪರಿಷತ್ತು ಯಾಕೆ? ಈ ಧೋರಣೆಯನ್ನು ಪದೆಪದೆ ಅನುಸರಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ.ಈ ನಾಡಿನ ಸಾಹಿತ್ಯಗಳಿಗೂ ,ಸಾಹಿತ್ಯ ಪ್ರೇಮಿಗಳು ಹಾಗೂ ಕನ್ನಡ ನಾಡು ನುಡಿಗಾಗಿ ಹಂಬಲಿಸುವ ಮನಗಳಿಗೆ ಏನಾದರೂ ಅರ್ಥವಾಗಿದ್ದರೆ ತುಸು ತಿಳಿಸಿ ನಾವು ಅರ್ತೈಸಿಕೊಳ್ಳುವೇವು ಎಂದು ನಾವು ಮಾದ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೂ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ನಿನ್ನೆ ಇಂದ ನಾವು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಏನನ್ನು ಪ್ರತಿಕ್ರಿಯೆ ಮಾಡದೆ ಮೌನವಾಗಿದೆ. ಹಾಗೆಯೆ ಶಹಾಪೂರದ ಪ್ರಗತಿಪರ ಚಿಂತಕರು ಹಿರಿಯ ಕಿರಿಯ ಸಾಹಿತಿಗಳು ಹಾಗೂ ಬರಹಗಾರರಲ್ಲಿ ಒಂದಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಮಾಡಿರುವದು ಬಿಟ್ಟರೆ ಬಹುತೇಕ ಎಲ್ಲರೂ ಮೌನವಾಗಿರುವದು ನೋಡಿದರೆ ಮೌನಂ ಸಮ್ಮತಿಯ ಲಕ್ಷಣ ಎಂಬಂತೆ ಭೀಮಕವಿಗಳನ್ನು ಕಡೆಗಾಣಿಸಿದ್ದಕ್ಕೆಲ್ಲರ ಸಮ್ಮತಿ ಇದೆಯಂದು ಅರ್ಥೈಸಿಕೊಳ್ಳಬೇಕೆನೊ?

ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಈ ದೊರಣೆ ಸಾದುವಾದುದಲ್ಲ.ಸಾಹಿತ್ಯ ಪರಿಷತ್ತಿಗೆ ಘನತೆ ತರುವಂತದಲ್ಲ. ೧೯೪೨ರ ಮಾರ್ಚ ತಿಂಗಳಲ್ಲಿ ಸುರಪುರದಲ್ಲಿ ನಡೆದ ನಿಜಾಂ ಕರ್ನಾಟಕ ಪರಿಷತ್ತಿನ ೩ನೇ ಅಧಿವೇಶನದಲ್ಲಿ “ಕರ್ನಾಟಕ ಕವಿಭೂಷಣ” ಎಂದು ಬಿರುದು ನೀಡಿ ಗೌರವಿಸಲಾಗಿದೆ,ಭೀಮಕವಿಗಳು ಯಾವುದೆ ರಾಜಾಶ್ರಯವಿಲ್ಲದೆ ಪ್ರತಿಭೆಯಿಂದಲೆ ಜನಪ್ರೀಯತೆ ಮತ್ತು ಖ್ಯಾತಿಯನ್ನು ಪಡೆದವರು ವರಕವಿ,ವರ್ಣಕವಿ,ಅಭಿನವಕಾಳಿದಾಸ,ಕರ್ನಾಟಕ ಕವಿ ಭೂಷಣ,ಕರ್ನಾಟಕ ಕವಿಚಂದ್ರ,ಎಂಬ ಬಿರುದುಗಳನ್ನೊಂದಿದ ಸಗರ ಸಾವಿರಹಳ್ಳಿಯ ಈ ಕವಿಭೂಷಣನನ್ನು ಉದ್ದೇಶ ಪೂರ್ವಕವಾಗಿಯೇ ಪ್ರತಿ ಸಮ್ಮೇಳನದಲ್ಲಿ ಪರಿಷತ್ತು ಮರೆಯುತ್ತಲೆ ಬರುತ್ತಿದೆ.  ಪರಿಷತ್ತಿನ ಅಧ್ಯಕರು ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತಕರು ಹಾಗೂ ಅಂಬೇಡ್ಕರ್ ಅಭಿಮಾನಿಗಳಾಗಿರುವದಲ್ಲದೆ ಎಲ್ಲರನ್ನು ಜೊತೆಗೆ ಕರೆದೊಯ್ಯುವ ಮನೋಭಾವದವರಾಗಿದ್ದಾರೆಂದು ಹೇಳಲಾಗಿತ್ತು. ಆದರೆ ಯಾರ ಒತ್ತಡಕ್ಕೆ  ಒಳಗಾದರೊ ತಿಳಿಯದಾಗಿದೆ. ಇದು ಅಧ್ಯಕ್ಷರ ವ್ಯಕ್ತಿತ್ವಕ್ಕೆ ಸರಿಹೊಂದದು. ಜಾತಿ ಹಣ ಅಧಿಕಾರಸ್ಥರ ಕಪಿಮುಷ್ಟಿಗೆ ಸಿಲುಕಿದೆಯೊ? ತಿಳಿಯದು. ಪರಿಷತ್ತು ತನ್ನಭೂಷಣವನ್ನಂತು ತಾನೆ ಕಳೆದುಕೊಳ್ಳುತ್ತಿದೆ.ಹೀಗಾಗಿ ಪರಿಷತ್ತು ತನಗಂಟಿದ ಈ ಮರುವಿನ ರೋಗದಿಂದ ಗುಣಮುಖವಾಗಬೇಕು.ಯಾರ ಕಪಿಮುಷ್ಠಿಗೂ ಒಳಗಾಗಬಾರದಿತ್ತು.ಸಾಹಿತ್ಯ ಪರಿಷತ್ತು ಕನ್ನಡನಾಡು ನುಡಿಗೆ ಆಸ್ತಿಯಾಗಬೇಕು.ಸ್ವಾರ್ಥಿಗಳಿಗೆ ಆಸ್ತಿಯಾಗಬಾರದು.

About The Author