ಕಾಂಗ್ರೆಸ್ CM ವಿಚಾರ : ಒಕ್ಕಲಿಗ V/S ಕುರುಬ ಜಾತಿವಾರು ಫೈಟ್ : ಡಾ. ಸುಧಾಕರ,ST. ಸೋಮಶೇಖರ್ ವಿರುದ್ಧ ಕಿಡಿ ಕಾರಿದ ಎಂಟಿಬಿ ನಾಗರಾಜ್ ಮತ್ತು ಬೈರತಿ ಬಸವರಾಜ

ಬೆಂಗಳೂರು : ರಾಜ್ಯದಲ್ಲಿ ಸಿಎಂ ಫೈಟ್ ತಾರಕಕ್ಕೇರಿದೆ. ಸಿದ್ದರಾಮಯ್ಯ V/S ಡಿಕೆಶಿ. ಯಾರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೋ, ಕೈ ಕಮಾಂಡ್ ಯಾರನ್ನು ಮುಖ್ಯಮಂತ್ರಿ ಮಾಡುತ್ತದೆಯೋ, ಇನ್ನು ತಿಳಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಸುಧಾಕರ್ ಟ್ವೀಟ್ ಮಾಡಿ ನಾವು ಬಿಜೆಪಿ ತೊರೆತಿದ್ದೆ ಸಿದ್ದರಾಮಯ್ಯನವರಿಂದ ಅವರೇ ಇದಕ್ಕೆ ಪ್ರೇರಣೆ ಎಂದು ಹೇಳಿದರೆ,ST ಸೋಮಶೇಖರ ಸಿದ್ದರಾಮಯ್ಯನವರೇ ನಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋಗಲು ಕಾರಣ. ಮೈತ್ರಿ ಸರಕಾರ ನನ್ನ ಮಾತು ಕೇಳುತ್ತಿಲ್ಲ. ಲೋಕಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ಕೆಡುಕುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
****
ಮೂಲತಹ ಇವರೀರ್ವರು ಒಕ್ಕಲಿಗ ಸಮಾಜದವರು. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಪಕ್ಷದವರಾದ ಕುರುಬ ಸಮಾಜದ ಎಂಟಿಬಿ ನಾಗರಾಜ ಮತ್ತು ಬೈರತಿ ಬಸವರಾಜ ತಿರುಗೇಟು ನೀಡಿದ್ದಾರೆ. ಡಾ. ಸುಧಾಕರ್ ಮತ್ತು ಸೋಮಶೇಖರ್ ಅವರ ಆರೋಪ ನಿರಾಧಾರ. ಅವರಿಬ್ಬರೂ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯನವರು ಕಾರಣ ಎಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದಾರೆ.
*****
ಇಷ್ಟು ದಿನ ಅಧಿಕಾರ ಅನುಭವಿಸಿದ ನೀವು ಆ ಮೊದಲೇ ಹೇಳಬೇಕಿತ್ತು, ಇದರ ಪ್ರಸ್ತಾಪ ಹೀಗೇಕೆ ಎಂದು ಕೆಂಡಮಂಡಲವಾಗಿದ್ದಾರೆ. ಇದು ಜಾತಿವಾರುಗಳ ಮಧ್ಯೆ ಫೈಟ್ ಎಂದು ಹೇಳಲಾಗುತ್ತಿದೆ. ಪರೋಕ್ಷವಾಗಿ ಸುಧಾಕರ್ ಮತ್ತು ಸೋಮಶೇಖರ್ ಡಿಕೆ ಶಿವಕುಮಾರ್ ಅವರನ್ನು ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ.
*****
ಒಕ್ಕಲಿಗರು ದಕ್ಷಿಣ ಕರ್ನಾಟಕದ ಮೈಸೂರು ರಾಮನಗರ ಮಂಡ್ಯ ಹಾಸನ ಚಿಕ್ಕಮಗಳೂರು ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಇದ್ದಾರೆ. ಆದರೆ ಕುರುಬ ಸಮಾಜದವರು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇದ್ದಾರೆ.ಸಿದ್ದರಾಮಯ್ಯ ಒಂದು ಸಮಾಜದ ನಾಯಕರಲ್ಲ. ಲಿಂಗಾಯತ ಕುರುಬ ದಲಿತರನ್ನು ಒಳಗೊಂಡು ಎಲ್ಲ ಸಮಾಜದ ಅಹಿಂದ್ ನಾಯಕರವರು. ಬಿಜೆಪಿ ಪಕ್ಷದಲ್ಲಿ ಅಧಿಕಾರ ಅನುಭವಿಸಿ ೪೦% ಭ್ರಷ್ಟಾಚಾರದಲ್ಲಿ ಕೋಟಿಗಟ್ಟಲೆ ಹಣ ಸಂಪಾದಿಸಿದ ಸುಧಾಕರ್ ಮತ್ತು ಸೋಮಶೇಖರ್ ಈಗ ಸಿದ್ದರಾಮಯ್ಯನ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ರಾಜ್ಯದ ಜನರ ಕ್ಷಮೆಯಾಚಿಸಬೇಕು. ಉತ್ತರ ಕರ್ನಾಟಕದಲ್ಲಿ ಒಕ್ಕಲಿಗರು ಒಬ್ಬ ಎಂಎಲ್ಎಗಳನ್ನು ಗೆಲ್ಲಿಸಿ ಕೊಡಿ ಎಂದು ಸಿದ್ದರಾಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ನೂರು ಸವಾಲು ಹಾಕಿದರು.

About The Author