ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ವೀಕ್ಷಕರಾಗಿ ಬಿ.ಎಂ.ಪಾಟೀಲ್ ನೇಮಕ

ಬಳ್ಳಾರಿ : ರಾಜ್ಯಾದ್ಯಂತ ವಿಧಾನ ಪರಿಷತ್ ಗೆ 2026 ರಲ್ಲಿ ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಯುವ ಸಂಭವವಿದ್ದು ಅದರಂತೆ ಈಗಾಗಲೇ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಗಳಿಗೆ ಚಾಲನೆ ನೀಡಲಾಗಿದ್ದು ಕಾಂಗ್ರೆಸ್ ಪಕ್ಷದಿಂದ ಪಕ್ಷದಲ್ಲಿನ ಬಿ ಎಂ ಪಾಟೀಲ್ ಅವರನ್ನು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕ್ಷೇತ್ರದ ವೀಕ್ಷಕರನ್ನಾಗಿ ನೇಮಿಸಿ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಆದೇಶಿಸಿದ್ದಾರೆ.  ಬಿ ಎಂ ಪಾಟೀಲರು ತಮಗೆ ವಹಿಸಿದ ಉಸ್ತುವಾರಿಯನ್ನು ಚಾಚು ತಪ್ಪದೇ ಪಕ್ಷ ನಿಷ್ಠೆಯಿಂದ ಹಲವಾರು ಬಾರಿ ಕಾರ್ಯ ನಿರ್ವಹಿಸಿದ್ದು ಪಕ್ಷದ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ.ಅದನ್ನು ಗಮನಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಬಿ ಎಂ ಪಾಟೀಲರಿಗೆ ಶಿರಗುಪ್ಪ ಕ್ಷೇತ್ರದ  ಜವಾಬ್ದಾರಿಯನ್ನು ನೀಡಿದ್ದಾರೆ. ಇನ್ನೂ ನೋಂದಾವಣೆಯಾಗದ ಶಿಕ್ಷಕರನ್ನು ನೋಂದಾವಣೆ ಮಾಡುವಂತೆ ಪಕ್ಷವು ಸೂಚಿಸಿದ್ದು ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಬಿಎಂ ಪಾಟೀಲರು ತಿಳಿಸಿದ್ದಾರೆ.