ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿನ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕನಕಾಂಗಣ ಸಭಾಂಗಣದಲ್ಲಿ ಮುಕ್ಕಣ್ಣ ಕರಿಗಾರ ಅವರು ಆಯುಕ್ತರಾಗಿ ಅಧಿಕಾರವಹಿಸಿಕೊಂಡ ನಂತರ ಕನಕ ದರ್ಶನ ಕವಿಗೋಷ್ಠಿ ಎನ್ನುವ ಹಾವೇರಿ ಜಿಲ್ಲಾಮಟ್ಟದ ಮೊದಲ ಕವಿಗೋಷ್ಠಿಯನ್ನು ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.ಈ ಸಂಧರ್ಭದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಮಾತನಾಡಿ, ಜಿಲ್ಲಾ ಮಟ್ಟದ ಮೊದಲ ಕನಕ ದರ್ಶನ ಕವಿಗೋಷ್ಠಿ ಎನ್ನುವ ಕಾರ್ಯಕ್ರಮವು ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕನಕಾಂಗಳ ಸಭಾಭವನದಲ್ಲಿ ಇಂದು ನಡೆದ ಕನಕದರ್ಶನ ಕವಿಗೋಷ್ಠಿಯಲ್ಲಿ ಹಾವೇರಿ ಜಿಲ್ಲೆಯ 38 ಜನ ಕವಿಗಳು ಪಾಲ್ಗೊಂಡು ಕವಿಗೋಷ್ಠಿಯನ್ನು ಯಶಸ್ವಿಗೊಳಿಸಿದರು.ಜಿಲ್ಲೆಯ ಹಿರಿಯ ಕವಿ ಸತೀಶ ಕುಲಕರ್ಣಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಾಧಿಕಾರವನ್ನು ಬೆಂಬಲಿಸಿ,ಔದಾರ್ಯ ಮೆರೆದರು.ಪ್ರಾಧಿಕಾರದ ಸಂಶೋಧಕರಾದ ಡಾ. ಜಗನ್ನಾಥ ಗೇನಣ್ಣನವರ್ ಹಾಗೂ ಪ್ರಾಧಿಕಾರದ ಸಿಬ್ಬಂದಿಯವರು ಕಳೆದ ಮೂರ್ನಾಲ್ಕು ದಿನಗಳಿಂದ ಶ್ರದ್ಧಾನಿಷ್ಠೆಗಳಿಂದ ಪರಿಶ್ರಮಿಸಿದ ಫಲವಾಗಿ ಇಂದಿನ ಕವಿಗೋಷ್ಠಿಯು ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪ್ರಾಧಿಕಾರದ ಸಿಬ್ಬಂದಿಯವರಾದ ಲೆಕ್ಕಾಧಿಕ್ಷಕರಾದ ಸಿ.ಬಿ.ಸಪ್ಪಿನ್, ನವೀನಕುಮಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕವಿಗೋಷ್ಠಿಯ ನಂತರ ಕವಿಗಳೊಂದಿಗೆ ಕವಿರಾಯ ಕನಕದಾಸರ ಸನ್ನಿಧಿಯಲ್ಲಿ ಕವಿಗಳೊಂದಿಗೆ ಭಾವಚಿತ್ರ ತೆಗೆಸಿಕೊಂಡರು.