ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಸಂಸ್ಕೃತಿಯಾಗಲಿ : ಶಿವುಕುಮಾರ

ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ೧೭ ಗುರಿಗಳಲ್ಲಿ ೬ ನೇ ಗುರಿ ಶುದ್ದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಷಯಕ್ಕೆ ಸಂಬಂದಪಟ್ಟದ್ದಾಗಿದೆ. ವಿಶ್ವ ಸಂಸ್ಥೆಯಿಂದ ಸ್ಥಳೀಯ ಸಂಸ್ಥೆಯ ಸರಕಾರದವರೆಗೆ ತನ್ನದೇ ನಿರ್ದಿಷ್ಟ ಉದ್ದೇಶಗಳೊಂದಿಗೆ ಗುರಿ ಸಾಧಿಸಲಿಕ್ಕೆ ತನ್ನದೇ ಕಾರ್ಯತಂತ್ರ ರೂಪಿಸಿಕೊಂಡಿವೆ.೬ ನೇ ಗೂಲ್ ( ಗುರಿ) ಅನುಸಾರ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ ಅನುಷ್ಠಾನದ ಮೂಲಕ ಗುರಿ ಸಾಧಿಸಲಾಗುತ್ತಿದೆ. ನಾವು ನೈಮರ್ಲ್ಯ ಅಥವಾ ಸ್ವಚ್ಚ ಭಾರತ ಯೋಜನೆ ಕೆಲವು ಘಟಕಾಂಶಗಳು ಹಾಗೂ ಯೋಜನೆಯ ಉದ್ದೇಶ,ಗುರಿ ಯೋಜನೆಯಲ್ಲಿ ಸಾರ್ವಜನಿಕರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಕುರಿತು ಚಿಂತನ – ಮಂಥನ ಮಾಡಬೇಕಾಗಿದೆ.

ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಬೇಕಾಗಿರುವ ಸಕಲ ಸೌಕರ್ಯಗಳನ್ನು ನಿರ್ಮಿಸಿಕೊಳ್ಳುವುದು ಒಂದು ಕಡೆಯಾದರೆ ಸ್ವಚ್ಛತೆ & ಶುಚಿತ್ವಕ್ಕೆ ಇರುವ ನಿರ್ದಿಷ್ಠ ಉದ್ದೇಶಗಳಿಗೆ ಈ ಸೌಕರ್ಯಗಳನ್ನು ಬಳಸಿಕೊಳ್ಳುವುದು ಹಾಗೂ ಸ್ವಚ್ಛತೆಯ ಅಭ್ಯಾಸಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳುವುದು ಪ್ರಮುಖ ಅಂಶವಾಗಿದೆ. ಇದಕ್ಕಾಗಿ ಹಲವು ಜಾಗೃತಿ ಚಟುವಟಿಕೆಯ ಕಾರ್ಯಕ್ರಮಗಳನ್ನು ಕೇಂದ್ರ-ರಾಜ್ಯ ಸರಕಾರ, ಸ್ಥಳೀಯ ಸರಕಾರಗಳು ( ಗ್ರಾಮ ಪಂಚಾಯತ) ಹಾಕಿಕೊಂಡು ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟದಲ್ಲಿ ಬದಲಾವಣೆ ತರಲು ಅಣಿಯಾಗಿದೆ. ಸ್ವಚ್ಛ ಭಾರತ ಮಿಷನ್ & ಜಲ ಜೀವನ ಮಿಷನ್ ಯೋಜನೆಯ ಕುರಿತು ಸಾರ್ವಜನಿಕರು ಜಾಗೃತಿ ಅರಿವು ಇಂದಿನ ಮಟ್ಟಕ್ಕೆ ಹೊಲಿಸಿದರೆ ಜಾಗೃತರಾಗಿದ್ದಾರೆ.ಆದರೆ ನಿರೀಕ್ಷೀಸದ ಮಟ್ಟದಲ್ಲಿ ಸಾರ್ವಜನಿಕರ ಮನೊಭಾವದಿಂದ ರೂಡಿಗತ ಪದ್ದತಿಗಳನ್ನು ಬದಲಾಯಿಸಿಕೊಂಡು ಬದಲಾದ ಮನೊಭಾವನೆಗಳ ಸಂಖ್ಯೆ ಕಡಿಮೆ.

ಇಂದಿನ ಯುವ ಸಮೂಹವು ಮುಖಂಡರು,ಚುನಾಯಿತ ಪ್ರತಿನಿಧಿಗಳು,ನೈಮಲ್ಯ, ಚಟುವಟಿಕೆ ಅಭಿಯಾನದಲ್ಲಿ ಪಾಲ್ಗೊಂಡು ಜನಾಂದೋಲನ ರೂಪದಲ್ಲಿ ಮುಂದಾಳತ್ವವಹಿಸಬೇಕಿದೆ.ಪ್ರತಿಯೊಬ್ಬರು ಆರೋಗ್ಯಕರ ಉತ್ತಮ ಅಭ್ಯಾಸಗಳನ್ನ ರೂಡಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾದಾಗ ಮಾತ್ರ ಪ್ರತಿಯೊಂದು ವಾರ್ಡ, ಓಣಿ, ಗ್ರಾಮ,ಗ್ರಾಮ ಪಂಚಾಯತಗಳು ಸ್ವಚ್ಛತೆಯಿಂದ ಇರಲು ಸಾಧ್ಯ.

ಸ್ವಚ್ಛತೆಯ ಅಭ್ಯಾಸಗಳನ್ನು ಇಷ್ಟೊಂದು ಒತ್ತು ಕೊಟ್ಟು ಹೇಳುವುದು,ಸರಕಾರಗಳು ಮಹತ್ವಾಕಾಂಕ್ಷೆ ನೀಡಿರುವುದೇಕೆ ಒಮ್ಮೆ ತಿರುಗಿ ನೋಡಿದರೆ ಸ್ವಚ್ಛತೆ- ಶುಚಿತ್ವದ ಅಭ್ಯಾಸಗಳಿಂದ ನಮಗೆ ಆರೋಗ್ಯ ಜೀವನ ಮಟ್ಟದಲ್ಲಿ ಸುಧಾರಣೆ, ಅನೈರ್ಮಲ್ಯ ಅಭ್ಯಾಸಗಳಿಂದ ಅನಾರೋಗ್ಯಕ್ಕೆ ವೆಚ್ಚ ಮಾಡುವುದನ್ನು ತಗ್ಗಿಸುವುದು ಮತ್ತು ಉತ್ತಮ ಪರಿಸರ ವಾತವರಣ ನಿರ್ಮಾಣ ಮಾಡಬಹುದು. ಈ ಮೂರು ಅಂಶಗಳಲ್ಲಿ ನಾವು ಲಾಭ ನಿರೀಕ್ಷಿಸಬಹುದಾಗಿದೆ. ಆದರೆ ಇದು ನನ್ನ ಜಾವಾಬ್ದಾರಿಯಲ್ಲ. ಇದರಿಂದ ನೇರ ಲಾಭ ಇಲ್ಲವೆಂದು ಊಹಿಸಿಕೊಂಡರೆ ನಿಧಾನವಾಗಿ ನಮ್ಮಿಂದ ನಮ್ಮ ಸುತ್ತ ಮುತ್ತಲಿನ ಪರಿಸರದ ಮೇಲೆ,ಆರೋಗ್ಯದ ಮೇಲೆ ಪರಿಣಾಮ ಭೀರುವುದು ತಪ್ಪಿದ್ದಲ್ಲ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು‌.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಮಿಷನ್ -೨ ರಲ್ಲಿ ಪ್ರಮುಖ ಘಟಕಾಂಶಗಳೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಜೀವನ ಮಟ್ಟದಲ್ಲಿ ಸುಧಾರಣೆ ತಂದು ಸುಸ್ಥಿರ ಅಭಿವೃದ್ಧಿ ಗೂಲ್ ಗೆ ತಲುಪಲು ಇಲಾಖೆಯಿಂದ ಈ ಯೋಜನೆಗಳನ್ನು ಆದ್ಯತೆಯ ಮೇಲೆ ಅನುಷ್ಠಾನ ಮಾಡಲಾಗುತ್ತಿದೆ.

ಗ್ರಾಮೀಣಾಭಿವೃದ್ಧಿ & ಪಂಚಾಯತ ರಾಜ್ ಇಲಾಖೆಯು ಕಳೆದ ಡಿಸೆಂಬರ್ ತಿಂಗಳಿಂದ ಪ್ರತಿ ತಿಂಗಳ ಮೊದಲನೆಯ ಶನಿವಾರವನ್ನು ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಛತೆ ಚಟುವಟಿಕೆಗಳ ಶ್ರಮದಾನ ಹಮ್ಮಿಕೊಳ್ಳುದರ ಮೂಲಕ ಸ್ವಚ್ಛ ಶನಿವಾರ ಎಂದು ಆಚರಣೆ ಮಾಡಲು ನಿರ್ದೇಶನ ನೀಡಿದೆ‌.

ಈ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಕೆಲವು ಪ್ರಮುಖ ಘಟಕಾಂಶಗಳನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.

೧.ಘನ ತ್ಯಾಜ್ಯ ನಿರ್ವಹಣೆ:
ಪ್ರತಿಯೊಂದು ಮನೆಯಿಂದ , ಅಂಗಡಿ,ಹೊಟೆಲ್,ದುಖಾನ, ಇತರೆ ಮಳಿಗೆಗಳಿಂದ ಕಸವನ್ನು ಉತ್ಪಾದಿಸಿ ಎಲ್ಲೆಂದರಲ್ಲಿ ಬಿಸಾಡುತ್ತಿರುವದನ್ನು ನಿಲ್ಲಿಸಿ, ಕಸವನ್ನು ವ್ಯವಸ್ಥಿತವಾಗಿ ವಿಂಗಡಿಸಿ,ವಿಲೇವಾರಿ ಮಾಡಬೇಕಾಗಿದೆ. ಅಂದಾಗ ಮಾತ್ರ ತ್ಯಾಜ್ಯ ಸಂಸ್ಕರಣಾ ಘಟಕ ಈ ತ್ಯಾಜ್ಯವನ್ನು ನಿರ್ವಹಣೆ ಮಾಡಿಕೊಂಡು ಮುಂದಿನ ಪ್ರೋಸೆಸಿಗೆ ಹೊಗಲು ಸಾಧ್ಯವಾಗುತ್ತದೆ.ಗ್ರಾಮದ ಪ್ರತಿ ಕುಟುಂಬವು ಕಸವನ್ನು ನೀಡಿ ಸ್ವಚ್ಚತೆಗೆ ಸಹಕರಿಸಬೇಕಾಗಿದೆ.

೨.ಬೂದು ನೀರು ನಿರ್ವಹಣೆ: ಪ್ರತಿ ದಿನ ಪ್ರತಿ ಕುಟುಂಬದಿಂದ ಬಟ್ಟೆ ತೊಳೆದ ಬಚ್ಚಲು ನೀರು ಪಾತ್ರೆ ತೊಳೆದ ನೀರು ಇತರೆ ದಿನ ಬಳೆಕೆಯ ನೀರನ್ನು ನಾವು ರಸ್ತೆಮೇಲೊ, ಚರಂಡಿಗೆ ಬಿಡುತ್ತಿದ್ದೆವು. ಆದರೆ ಹಲವು ಕುಟುಂಬಗಳು ಮನೆಯ ಅಕ್ಕ- ಪಕ್ಕದಲ್ಲಿಯೇ ಗಲೀಜ್ ನೀರನ್ನು ನಿಲ್ಲದಂತೆ ಮಾಡುವಲ್ಲಿ ಪ್ರತಿ ಕುಟುಂಬಗಳಿಂದ ಸಹಕಾರಬೇಕಿದೆ.ದಿನ ಬಳಕೆಯಲ್ಲಿ ಸಾಧ್ಯವಾದಷ್ಟು ಅಥವಾ ದಿನ ಬಳಕೆಯ ಅರ್ಧದಷ್ಟು ನೀರನ್ನು ವ್ಯಯಿಸಿ ರಸ್ತೆ ಮೇಲೆ ಹೊಗದಂತೆ ರೂಢಿಗತ ಮಾಡಿಕೊಂಡಿದ್ದೇವೆ. ಆದರೆ ಇದನ್ನು ಅವಕಾಶ ಇರುವ ಕುಟುಂಬಗಳಲ್ಲಿ ವೈಯಕ್ತಿಕ ಇಂಗು ಗುಂಡಿಯ ಮೂಲಕ ನೀರನ್ನು ಬಚ್ಚಲು ಗುಂಡಿಯಲ್ಲಿ ಇಂಗಿಸುವುದು. ಸ್ಥಳವಕಾಶ ಇಲ್ಲದ ಕುಟುಂಗಳಗಳಿಗೆ ಸಮುದಾಯ ಹಂತದಲ್ಲಿ ನಿರ್ವಹಣೆ ಮಾಡಿ ಬೂದು ನೀರು ನಿಲ್ಲುವ ಅವಕಾಶ ತಪ್ಪಿಸಲು ಇಲಾಖೆಯು ವ್ಯವಸ್ಥಿತ ಯೋಜನೆ ರೂಪಿಸಿಕೊಂಡಿದೆ.ಇದರಿಂದ ಸೋಳ್ಳೆ ಕಾಟ, ವಾಸನೆ ಕಾಟ ತಪ್ಪಿಸಬಹುದು.ಆ ಮನೆಯ ಸುತ್ತ- ಮುತ್ತ ಸ್ಬಚ್ಚತೆಯಿಂದ ಉತ್ತಮ ವಾತವರಣ ನಿರ್ಮಿಸಿಕೊಳ್ಳಬಹುದು.ಇದು ಎಲ್ಲಾ ಕುಟುಂಬಗಳಲ್ಲಿ ಅಳವಡಿಸಿಕೊಂಡಾಗ ಗ್ರಾಮದ ಅಂದವನ್ನು ಹೆಚ್ಚಿಸುತ್ತದೆ. ಇದಕ್ಕೆ ಗ್ರಾಮದ ಪ್ರತಿಯೊಬ್ಬರಿಂದ ಸಹಕಾರ ಈ ಯೋಜನೆಯಲ್ಲಿ ಪಾಲ್ಗೊಳ್ಳುವಿಕೆ ಪ್ರಮುಖವಾಗಿದೆ.

೩.ಋತುಚಕ್ರ ನಿರ್ವಹಣೆ :
ಜನಸಂಖ್ಯೆಯ ಅರ್ಧದಷ್ಠು ಇರುವ ನಮ್ಮ ಮಹಿಳೆಯರು ಈ ಅವಧಿಯಲ್ಲಿ ಜಾಗೃತಿ ವಹಿಸಬೇಕಾಗಿರುತ್ತದೆ. ಇದು ನಿಸರ್ಗದ ಪ್ರಕ್ರಿಯೆ ಯಾಗಿರುವುದರಿಂದ ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಮುಜಗುರ, ಕಿನ್ನತೆಗೆ ಒಳಗಾಗಬಾರದು ಹಾಗೂ ಋತುಚಕ್ರ ಅವಧಿಯಲ್ಲಿ ಬಳಸಿ ಬಿಸಾಡುವ (ಪ್ಯಾಡ್ಸ, ಕಪ್ಪು) ತ್ಯಾಜ್ಯವನ್ನು ವೈಜ್ಞಾನಿಕ ವಿಧಾನಗಳಲ್ಲಿ ವಿಲೇವಾರಿ ಮಾಡವುದಕ್ಕೆ ನಾವು ಸಂಕೋಚ ಭಾವನೆ ಪಡಬಾರದು.ಆರೋಗ್ಯ,ಶಿಶು ಅಭಿವೃದ್ಧಿ & ಪಂಚಾಯತ ರಾಜ್ ಇಲಾಖೆಯಿಂದ ಕಿಶೋರಿಯರಿಗೆ,ಮಹಿಳೆಯರಿಗೆ ನೀಡುತ್ತಿರುವ ಜಾಗೃತಿಯಿಂದ ಶುಚಿತ್ವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಿದೆ‌.

೪.ಮಿತ ಬಳಕೆ – ಮರು ಬಳಕೆ – ತ್ಯಜಿಸುವುದು (Reduse- Recycling- Refuse)

ಎಲ್ಲಾ ಪ್ಲಾಸ್ಟಿಕ್ ಮಯವಾದರೆ ನಾಳೆ ನಾವು ಮಾಯಾ ಎಂಬ ವ್ಯಾಖ್ಯೆ ನೆನಪಿಸಿಕೊಳ್ಳಬೇಕಿದೆ ಇಂದು ವಿಶೇಷವಾಗಿ ಪ್ಲಾಸ್ಟಿಕ್ ಬಳಕೆ ಮತ್ತು ಇತರೆ ಉಪಯೋಗಿಸಿದ ಕಸವೆಂದು ಬೀಸಾಡುವ ವಸ್ತುಗಳನ್ನು ಉತ್ಪಾದನೆಯ ಹಂತದಲ್ಲಿ ಕಡಿಮೆ ಮಾಡುವುದು, ಮರು ಬಳಕೆಮಾಡುವುದಿದ್ದರೆ ಮಾಡುವುದು, ಅಂತಿಮವಾಗಿ ದಿನದಿಂದ ದಿನಕ್ಕೆ ನಾವು ಅದನ್ನು ತ್ಯಜೀಸುವಂತೆ ನಾವು ರೂಡಿಸಿಕೊಳ್ಳಬೇಕು .

೫.ವೈಯಕ್ತಿಕ & ಸಮುದಾಯಕ ಶೌಚಾಲಯ :
ಪ್ರತಿಯೊಂದು ಕುಟುಂಬವು ಶೌಚಾಲಯ ರಹಿತ ಕುಟುಂಬವಾಗಿರದೆ ಶೌಚಾಲಯ ನಿರ್ಮಿಸಿಕೊಂಡ ಪ್ರತಿಯೊಬ್ಬರು ಶೌಚಾಲಯವನ್ನು ಬಳಸಿಕೊಳ್ಳುವುದು ಮತ್ತು ಆಯಾ ಗ್ರಾಮದಲ್ಲಿ ಜನ ಸಂದಣಿ ಇರುವ ಮತ್ತು ಅವಶ್ಯಕತೆ ಇರುವ ಸ್ಥಳಗಳಲ್ಲಿ ನಿರ್ವಹಣೆಯ ಜವಾಬ್ದಾರಿ ತೆಗೆದು ಗ್ರಾಮ ಪಂಚಾಯತಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿಕೊಂಡು ಇದರ ಬಳಕೆಯ ಮೂಲಕ ಸಾರ್ವಜನಿಕರು ಲಾಭ ಪಡೆಯಬೇಕು.

ಈ ಎಲ್ಲಾ ಘಟಕಾಂಶಗಳಲ್ಲಿ ನಮ್ಮಲ್ಲಿರುವ ರೂಡಿಗತ ಸಂಪ್ರದಾಯಿಕ ಪದ್ದತಿಗಳನ್ನು ಬಿಟ್ಟು ಆರೋಗ್ಯಕ್ಕೆ ಅನುಕೂಲವಾಗುವ, ಪರಿಸರಕ್ಕೆ ಉಪಕಾರವಾಗುವ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಂಡು ಇಲಾಖೆ ಸರಕಾರಗಳು ನಿಮ್ಮಿಂದ ನೀರಿಕ್ಷಿಸುವ ಸಹಕಾರವನ್ನು ನೀಡಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಕೇವಲ ಒಂದು – ಎರಡು ದಿನ ಕಾರ್ಯವಾಗದೆ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಸಂಸ್ಕೃತಿಯಾಗಲಿ ಎಂಬುವುದು ನಮ್ಮ ಆಸೆಯಾಗಿದೆ.ಹಾಗಾಗಿ ಈ ಯೋಜನೆಯ ಇದರ ಅಡಿಯಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಕಾರ ಮತ್ತು ಪಾಲ್ಗೊಳ್ಳಲು ಮನವಿ.

ಶಿವಕುಮಾರ ಬಿ
ಸ್ವಚ್ಛ ಭಾರತ ಮಿಷನ್
ಐ.ಇ.ಸಿ ಸಮಾಲೋಚಕರು
ಜಿ.ಪಂ.ಯಾದಗಿರಿ‌

About The Author