Video Player
00:00
00:00
ಶಹಾಪೂರ : ತಾಲೂಕಿನ ಸೈದಾಪುರ ಗ್ರಾಮದಲ್ಲಿ ೨೦೨೩ ರ ಹೊಸ ವರ್ಷದ ಆರಂಭದ ಈ ದಿನದ ಸಂಭ್ರಮ ವರ್ಷಪೂರ್ತಿ ಉಳಿಯಲಿ ಎಂಬ ಸದಾಶಯದೊಂದಿಗೆ ಸ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಆಗಮಿಸಿ ಗುರುವೃಂದವನ್ನು ಅಭಿನಂದಿಸಿ ಆಶೀರ್ವಾದ ಪಡೆದು ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಸಂಭ್ರಮಿಸುವ ಮೂಲಕ ವಿಶಿಷ್ಟ ವಾಗಿ ಆಚರಿಸಿದ್ದಕ್ಕೆ ಶಾಲೆಯ ಮುಖ್ಯಗುರುಗಳು ಮತ್ತು ಸಹಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
Video Player
00:00
00:00
ಮೋಜುಮಸ್ತಿಯಿಂದ ಕಾಲಕಳೆಯುವ ಈ ದಿನಮಾನಗಳಲ್ಲಿ ನಾಡು,ನುಡಿ ಗುರುಹಿರಿಯರನ್ನು ಗೌರವಿಸುವ ಯುವಕರ ನಡೆ ಶ್ಲಾಘನೀಯ. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭೀಮನಗೌಡ ಪೋ. ಪಾಟೀಲ್ ಮಾತನಾಡಿ ಈ ಹೊಸ ವರ್ಷವು ತಮ್ಮ ಬಾಳಲ್ಲಿ ಸುಖ ಶಾಂತಿ ತರಲಿ ತಾಯಿ ಕನ್ನಡಾಂಬೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಹೇಳಿದರು ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಬಲವಂತ್ರಾಯ ಮೇಟಿ ಶರಣು ಬಡಿಗೇರ್ ಸಂಗನಗೌಡ ಮಾಲಿ ಪಾಟೀಲ್ ಭೀರು ಮೆಟಿ ಭಾಗಿಯಾಗಿದ್ದರು.