ಉದ್ಯೋಗ ಖಾತ್ರಿಯಲ್ಲಿ ಅಕ್ರಮವಿಲ್ಲದಿದ್ದರೂ ತನಿಖಾ ತಂಡ ರಚನೆ ಪರಿಶೀಲನೆ ಅವೈಜ್ಞಾನಿಕ

ಬಸವರಾಜ ಕರೇಗಾರ

ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಬಡಜನತೆಗೆ ದಿನ ಕೆಲಸಮಾಡುವವರಿಗೆ ಉದ್ಯೋಗ ಸೃಷ್ಟಿಸಿ ದಂತಹ ಯೋಜನೆ.100 ದಿನಗಳ ಕೆಲಸದಿಂದ ಒಂದು ಕುಟುಂಬ ನಿರ್ವಹಣೆ ಮಾಡುವಂತಹ ಯೋಜನೆ.ಎಲ್ಲದರಲ್ಲೂ ನೂರಕ್ಕೆ ನೂರರಷ್ಟು ಕೆಲಸ ನಿರ್ವಹಿಸಲು ಸಾಧ್ಯವಿಲ್ಲ.ಹಾಗೆಯೇ ಈ ಯೋಜನೆಗಳಲ್ಲಿಯೂ ಆಗಿರುತ್ತದೆ.ಅವುಗಳನ್ನೆ ದೊಡ್ಡದಾಗಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಮತ್ತು ಸರಕಾರ ರಚನೆ ಮಾಡಿ ಪರಿಶೀಲನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೆಲವು ಕಾಮಗಾರಿಗಳು ಒಂದು ವರ್ಷಗಳಷ್ಟು ಹಳೆಯದಾಗಿರುತ್ತದೆ. ಮಳೆಯಿಂದ ನಮ್ಮ ಹೊಲ ನಮ್ಮ ದಾರಿ ಕೃಷಿ ಹೊಂಡದಂತಹ ಕೃಷಿ ಕಾಮಗಾರಿಗಳು ಕೊಚ್ಚಿಕೊಂಡು ಹೋಗಿರುತ್ತವೆ.ಇಂತಹ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಲು ಸಾಧ್ಯವೇ ?.
ಕಾಮಗಾರಿ ಕೈಗೊಂಡು ಒಂದು ಅಥವಾ ಎರಡು ವರ್ಷದ ನಂತರ ಯಾರೊ ಜಿಲ್ಲಾ ಪಂಚಾಯಿತಿಗೆ ಅಥವಾ ಸರಕಾರಕ್ಕೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ತನಿಖೆ ಮಾಡಿ ಎಂದು ಪತ್ರ ಬರೆದರೆ ಸರಕಾರ ತನಿಖಾ ತಂಡ ರಚನೆ ಮಾಡಿ ಬೆಂಗಳೂರಿನಿಂದ ತಾಲೂಕು ಮಟ್ಟದ ಮತ್ತು ಜಿಲ್ಲಾಮಟ್ಟದ ತಂಡ ರಚನೆ ಮಾಡಿ ಪರಿಶೀಲನೆ ಮಾಡಲು ಕಳುಹಿಸುತ್ತಾರೆ.ಆಗ ಕಾಮಗಾರಿ ನಡೆದು ಒಂದೆರಡು ವರ್ಷವಾಗಿರುತ್ತದೆ. ಕಾಮಗಾರಿಗಳು ಹಾಗೆಯೇ ಇರಲು ಸಾಧ್ಯವೇ ?, ಯಾರು ಅಬ್ಜಕ್ಷನ್ ಮಾಡಿದರೂ ಎಂದ ಮಾತ್ರಕ್ಕೆ ಸರಕಾರ ಪರಿಶೀಲನೆಗೆ ಅವಕಾಶ ಕೊಡಬಾರದು. ಕೂಲಂಕುಶವಾಗಿ ಪರಿಶೀಲಿಸಬೇಕು.ಕೆಲವು ಕಾಮಗಾರಿಗಳು ಕೊಚ್ಚಿ ಹೋದರೆ, ನಮ್ಮ ಹೊಲ ನಮ್ಮ ದಾರಿ ಅಂತಹ ಕಾಮಗಾರಿಗಳು ಮಳೆಯಿಂದ ಮರಮ್ಮ ಕೊಚ್ಚಿ ಹೋಗಿರುತ್ತದೆ.ಆಗ ಏನು ಮಾಡಲು ಸಾಧ್ಯ. ಅಧಿಕಾರಿಗಳು ಕಾಮಗಾರಿ ನಡೆದಿಲ್ಲ ಎಂದು ಹೇಳಬೇಕೊ! ಬೋಗಸ್ ನಡೆಸಿದ್ದಾರೆ ಎಂದು ವರದಿ ಕೊಡಬೇಕು! ಎಂದು ಗೊತ್ತಾಗುವುದಿಲ್ಲ. ಯಾವ ರೀತಿಯ ವರದಿ ಕೊಡಬೇಕು. ಕಾಮಗಾರಿ ನಿರ್ಮಿಸಿದವರ ಬರಪರಿಸ್ಥಿತಿ ಹೇಗೆ! ಇದರಿಂದ ಅಧಿಕಾರಿಗಳನ್ನು ಅಮಾನತು ಶಿಕ್ಷೆಗೆ ಗುರಿ ಮಾಡುತ್ತಾರೆ.ಇದು ಯಾವ ನ್ಯಾಯ !, ಕಾಮಗಾರಿ ನಡೆಯುತ್ತಿದ್ದಾಗ ಪರೀಶೀಲನೆ ಮಾಡಿದಾಗ ಎಲ್ಲವೂ ಸರಿ ಇರುತ್ತದೆ.ಎರಡು ವರ್ಷದ ನಂತರ ಬಂದಾಗ ಕಾಮಗಾರಿ ಕಳಪೆಯಾಗಿದೆ! ಯಾರೋ ಅಬ್ಜಕ್ಷನ್ ಮಾಡಿದರು, ಆದರೆ ಕಾಮಗಾರಿ ನಡೆದಾಗ ಎಲ್ಲಿಗೆ ಹೋಗಿರುತ್ತಾರೊ ?,
ಕೇಂದ್ರ ಸರಕಾರದ ಉದ್ಯೋಗ ಖಾತ್ರಿ ಯೋಜನೆ ಎಂದರೇ ಬಡಜನತೆಗೆ ಅನುಕೂಲಕರವಾದ ಸಹಕಾರ, ಸಣ್ಣ ಕುಟುಂಬವನ್ನು ನಿರ್ವಹಿಸಿಕೊಂಡು ಹೋಗುಲು ಸಾಧ್ಯವಾದ ಯೋಜನೆ.ಈ ಯೋಜನೆಯಲ್ಲಿ ಅಕ್ರಮಗಳು ನಡೆಯಬಾರದು ಎಂದು ಸರಕಾರ ಹಲವಾರು ಬದಲಾವಣೆಗಳನ್ನು ತಂದಿದೆ.ಕೆಲಸದ ಸ್ಥಳದಲ್ಲಿ ಜಿಪಿಎಸ್ ಭಾವಚಿತ್ರದಿಂದಿಡಿದು ಎಲ್ಲಾ ಹಂತದಲ್ಲೂ ಕೂಲಂಕುಶವಾಗಿ ಪರಿಶೀಲಿಸಿದ ನಂತರ ಕೂಲಿಕಾರ್ಮಿಕರಿಗೆ ಬರುವ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.ಮುಂದಿನ ಆರ್ಥಿಕ ವರ್ಷದಿಂದ 309 ರೂ.ಏರಿಕೆ ಮಾಡಿದೆ.ಒಂದು ಕುಟುಂಬಕ್ಕೆ 100 ರಿಂದ 150 ದಿನಗಳವರೆಗೆ ಪ್ರತಿ ಕುಟುಂಬಕ್ಕೆ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ.
289 ರೂ. ದಂತೆ 100 ದಿನಗಳಿಗೆ 28000 ರೂಪಾಯಿ ಹಣ ಜಮಾ ಆಗುತ್ತದೆ.ಇದರಿಂದ ಬಡಜನರು ಕೂಲಿಕಾರ್ಮಿಕರು ಪಟ್ಟಣಗಳಿಗೆ ವಲಸೆ ಹೋಗುವುದು ತಪ್ಪಿದೆ.ಇದರಿಂದ ಬದುಕು ಸುಗಮವಾಗಿ ಸಾಗಿದೆ. ಕೃಷಿಯಂತಹ ಕೃಷಿಹೊಂಡದಂತಹ ಕಾಮಗಾರಿಗಳು ರೈತರಿಗೆ ಅನುಕೂಲವಾಗಿದೆ.ನೀರಾವರಿ ಪ್ರದೇಶಗಳಲ್ಲಿ ಕಾಲುವೆ ನೀರು ಬಾರದಿದ್ದಾಗ ಇಲ್ಲದಿದ್ದಾಗ ಕೃಷಿ ಹೊಂಡದಿಂದ ನಿಂತಿರುವ ನೀರನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ತಮ್ಮದಾಗಿಸಿಕೊಳ್ಳಬಹುದು.ರೈತರಿಗೆ ಅನುಕೂಲವಾಗಲಿ ಎಂದು ನಮ್ಮ ಹೊಲ ನಮ್ಮ ದಾರಿಯಂತಹ ಕಾಮಗಾರಿಗಳಿಂದ ಇಂದು ಜಮೀನುಗಳಿಗೆ ದಾರಿಯಿಲ್ಲದ ಸಂದರ್ಭಗಳಲ್ಲಿ ಇಂತಹ ಕಾಮಗಾರಿಗಳು ರೈತರಿಗೆ ಅನುಕೂಲವಾಗಿವೆ.

ಶಾಶ್ವತವಾಗಿ ಉಳಿಯುವ ಕಾಮಗಾರಿಗಳು

ಉದ್ಯೋಗ ಖಾತ್ರಿಯಲ್ಲಿ ಎರೆಹುಳು ಘಟಕ, ನೀರಿನ ತೊಟ್ಟಿ,  ತಡೆಗೋಡೆ,ಚೆಕ್ ಡ್ಯಾಂ, ಸಿಸಿ ರಸ್ತೆ ಗಳಂತಹ ಕಾಮಗಾರಿಗಳು ಶಾಶ್ವತ ಕಾಮಗಾರಿಗಳು.ಇಂತಹ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುವುದು ಕಡಿಮೆ.ಈ  ಕಾಮಗಾರಿಗಳಿಗೆ ಎಂತಹ ತಂಡ ರಚನೆಯಾದರೂ ಅಧಿಕಾರಿಗಳಿಗೆ ಅಧಿಕಾರಿ ವರ್ಗದವರಿಗೆ  ಯಾವ ಭಯವೂ ಇರುವುದಿಲ್ಲ. ಯಾಕೆಂದರೆ ಈ ಕಾಮಗಾರಿಗಳು ಐದರಿಂದ ಹತ್ತು ವರ್ಷಗಳ ಶಾಶ್ವತವಾಗಿರುತ್ತವೆ.
ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಯಾವುದೇ ಕಾಮಗಾರಿಗಳ ಬಗ್ಗೆ ಸಂಪೂರ್ಣವಾಗಿ ಯೋಚನೆ ಮಾಡಿ ಇಲ್ಲಸಲ್ಲದ ಆರೋಪವನ್ನು ಕೂಲಂಕುಶವಾಗಿ ಚರ್ಚಿಸಿದ ನಂತರವೇ ತನಿಖೆ ನಡೆಸಲು ಆದೇಶಿಸಬೇಕು.

About The Author