ಎನ್,ಜಿ,ಓ ಕಾಲೋನಿ ಕಾಮಗಾರಿ ಕಳಪೆ ಮರಳು ಬಳಿಕೆ ನಿರ್ಮಿತ ಕೆಂದ್ರದ ಗುಣಮಟ್ಟದ ತನಿಖೆಗೆ ಆಗ್ರಹ

ಶಹಾಪುರ:ನಗರದ ಹೊರಹೊಲಯದ ಭೀ,ಗುಡಿ ರಸ್ತೆಯಲ್ಲಿ ಬರುವ ಸರ್ಕಾರಿ ನೌಕರರ ಗ್ರಹ ಮಂಡಳಿಯ ಭೀಮರಡ್ಡಿ ಬೈರಡ್ಡಿ ಕಾಲೋನಿಯಲ್ಲಿ ಕೈಗೊಂಡ ಕಾಮಗಾರಿಗೆ ಮಣ್ಣಿನ ಹುಂಡೆ ಇರುವ ಕಳಪೆ ಮಟ್ಟದ ಮರಳು ಬಳಿಕೆ ಮಾಡಲಾಗುತ್ತದೆ ಎಂದು ಸಿದ್ದಯ್ಯ ಹೀರೆಮಠ ಆರೋಪಿಸಿದ್ದಾರೆ.ಕಲ್ಯಾಣ ಕರ್ನಾಟಕ ಅಭಿವೃದ್ದಿ ಯೋಜನಡಿಯಲ್ಲಿ ೨೦೨೦-೨೧ರಲ್ಲಿ ಎಸ್‌ಸಿಪಿ ೧೦ ಲಕ್ಷ,ರೂ ಟಿಎಸ್‌ಪಿ ೧೦ ಲಕ್ಷ,ರೂ ಸಾಮಾನ್ಯ ೮೦ ಲಕ್ಷ,ರೂ ಒಟ್ಟು ೧ ಕೊಟಿ ರೂ,ಗಳ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಚರಂಡಿ ನಿರ್ಮಾಣಕ್ಕೆ ಮಣ್ಣು ಹುಂಡೆಗಳು ಕಾಣ ಸಿಗುವ ಮರಳನ್ನು ಬಳಕೆ ಮಾಡಲಾಗುತ್ತಿದೆ. ಕ್ರೀಯಾ ಯೊಜನೆಯಂತೆ ಕಾಮಗಾರಿ ನಡೆಯದೆ ಕಾಮಗಾರಿ ಗುಣಮಟ್ಟ ಕಳೆದುಕೊಳ್ಳುತ್ತಿದೆ ಮತ್ತು ನಗರದಲ್ಲಿ ಕಲ್ಯಾಣ ಕರ್ನಾಟಕ ಮ್ಯಾಕ್ರೋ ಯೋಜನೆಯಡಿಯಲ್ಲಿ ಅಂದಾಜು ೧ ಕೊಟಿ ೧೯ ಲಕ್ಷ,ರೂ ವೆಚ್ಚದಲ್ಲಿ ಹಲವಾರು ಬಡಾವಣೆಗಳಲ್ಲಿ ಚರಂಡಿ ಸಿಸಿ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದ್ದು ಅವುಗಳು ಸಂಪೂರ್ಣ ಹದಗೆಟ್ಟಿವೆ ಎಂದು ಆರೋಪಿಸಿದ ಅವರು ಕೊಟ್ಯಾಂತರ ಅನುಧಾನದಲ್ಲಿ ಅಭಿವೃದ್ದಿ ಕಾಮಗಾರಿಗಳು ಹಳ್ಳ ಹಿಡಿದುಕೊಂಡು ಕಳಪೆಯಾಗಿ ಗುಣಮಟ್ಟ ಕಳೆದುಕೊಂಡಿವೆ.

ಲೋಕಾಯುಕ್ತರು ಕೂಡಲೆ ಕಾಮಗಾರಿಗಳ ಗುಣಮಟ್ಟ ತನಿಖೆ ಮಾಡಬೇಕು. ಅಭಿವೃದ್ದಿ ಕಾಮಗಾರಿಗಳಲ್ಲಿ ನಿರ್ಲಕ್ಷ ವಹಿಸಿದ ಅನುಷ್ಠಾನದ ಏಜನ್ಸಿ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ೨೦೨೦-೨೧ನೇಯ ಕಲ್ಯಾಣ ಕರ್ನಾಟಕ ಅಭಿವೃದ್ದಿ ಅನುಧಾನ ಸಾಲಿನ ಸಗರದಲ್ಲಿ ಶಾಲಾ ಕಟ್ಟಡಕ್ಕೆ ೬೦ ಲಕ್ಷ,ರೂ ಅಲ್ದಾಳದಲ್ಲಿ ಶಾಲಾ ಕಟ್ಟಡಕ್ಕೆ ೮೦ ಲಕ್ಷ,ರೂ ಅಣಬಿ ಶಾಲಾ ಕಟ್ಟಡಗಳಿಗೆ ೧೮ ಲಕ್ಷ,ರೂ ಹೊಸಕೇರಾ ಅಂಗನವಾಡಿ ಕೆಂದ್ರ ಕಟ್ಟಡ ಕಾಮಗಾರಿಗೆ ೧೮ ಲಕ್ಷ,ರೂ ಗೋಗಿ ಅಂಗನವಾಡಿ ಕೇಂದ್ರಕ್ಕೆ ೧೮ ಲಕ್ಷ,ರೂ ದರಿಯಾಪುರ ಅಂಗನವಾಡಿ ಕೇಂದ್ರ ೧೮ ಲಕ್ಷ,ರೂ ರಸ್ತಾಪುರ ಅಂಗನವಾಡಿ ಕೇಂದ್ರಕ್ಕೆ ೧೮ ಲಕ್ಷ,ರೂ ಬೂದನೂರು ಆರೋಗ್ಯ ಉಪ ಕೇಂದ್ರ ಕಟ್ಟಡ ೨೦ ಲಕ್ಷ,ರೂ, ತಾಲುಕಿನ ಹಲವಾರು ಗ್ರಾಮಗಳಲ್ಲಿ ಕೊಟ್ಯಾಂತರ ಅನುಧಾನದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಅವುಗಳ ಗುಣಮಟ್ಟವನ್ನು ಕಾಪಾಡಬೇಕು ಎಂದು ಸಿದ್ದಯ್ಯ ಹೀರೆಮಠ ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

About The Author