ಶೈಕ್ಷಣಿಕವಾಗಿ ನೊಂದ ನೆಲಕ್ಕೆ ನೆಮ್ಮದಿ ತಂದ ನಾಯಕ : ಡಾ.ಭೀಮಣ್ಣ ಮೇಟಿ

       : ವಿಶೇಷ ಸುದ್ದಿ :

    ಸಗರನಾಡು ಶರಣರ-ಸೂಫಿ-ಸಂತರ ನಾಡು ಭಾವೈಕ್ಯತೆಯ ಬೀಡು ಈ ನಾಡು ನಿಜಾಮರ ಆಳ್ವಿಕೆಯಿಂದ ಹಲವು ರೀತಿಯ ಶೋಷಣೆಗೆ ಒಳಗಾಗಿ ಇಂದಿಗೂ ಅದರ ಕಪ್ಪುಚಾಯೆ ನಾಡಿನ ಜನತೆಯನ್ನು ದಾಸ್ಯದಿಂದ ಮುಕ್ತರಾಗಿ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಈ ನಾಡಿನ ಬಹುದೊಡ್ಡ ಸಮಸ್ಯೆ ಬಡತನ ಮತ್ತು ಅನಕ್ಷರತೆ ಈ ಸಮಸ್ಯೆ ಕೊನೆಯಾಗಬೇಕಾದರೆ ಇಲ್ಲಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೇಬೇಕು. ದುರಂತವೆಂದರೆ ಇಲ್ಲಿವರೆಗೂ ನಮ್ಮನ್ನು ಆಳಿದವರ ನಿರ್ಲಕ್ಷ್ಯದಿಂದ ಇಂದಿಗೂ ಸರ್ಕಾರಿ ಶಾಲೆಯಲ್ಲಿ ಅತಿಹೆಚ್ಚು ಶಿಕ್ಷಕರ ಕೊರತೆಯಿಂದ ನಮ್ಮ ನಾಡು ಬಳುಲುತ್ತಿದೆ. ಆಳುವವರ ಸ್ವಾರ್ಥಕ್ಕಾಗಿ ಅಭಿವೃದ್ಧಿಯಿಂದ ಕುಂಠಿತವಾಗಿದೆ. ಇದೆಲ್ಲವನ್ನೂ ಮನಗಂಡು ಕರುನಾಡಿನ ಸಾಮಾಜಿಕ ನ್ಯಾಯದ ಹರಿಕಾರ ಜೀತದಾಳುಗಳನ್ನು ಹೊಲದೊಡೆಯನನ್ನಾಗಿ, ಮಾಲಿಕರನ್ನಾಗಿ ಮಾಡಿದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ್ ಅರಸು ಅವರ ಹೆಸರಿನಲ್ಲಿ ಸಗರನಾಡಿನ ಕೇಂದ್ರ ಬಿಂದು ಶಹಾಪುರ ನಗರದಲ್ಲಿ ನಮ್ಮ ನಾಡಿನ ಜನತೆಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡಲೇಬೇಕು, ನಮ್ಮ ಜನತೆ ದಾಸ್ಯದಿಂದ ಮುಕ್ತರಾಗಿ ಬದುಕಬೇಕು. ಈ ಮೂಲಕ ಸರ್ವ ರಂಗಗಳು ಅಭಿವೃದ್ಧಿಯಾಗಲು ಶಿಕ್ಷಣವೇ ಮೂಲ ಮಂತ್ರ ಎಂದು ಮನಗಂಡು ಸಗರನಾಡಿನ ಶ್ರೇಯೋಭಿವೃದ್ಧಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಾಗ ಮಾಡಿದ ಶಿಕ್ಷಣ ಸೇವಾ ಪ್ರೇಮಿಗಳಾದ ಡಾ.ಭೀಮಣ್ಣ ಮೇಟಿಯವರು 2009 ರಲ್ಲಿ ಡಿ.ದೇವರಾಜ್ ಅರುಸು ಶಿಕ್ಷಣ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಇಂದಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಮ್ಮ ನಾಡಿನ ಸೌಭಾಗ್ಯ ಎಂದು ಹೇಳಿದರು.

    * ಅತಿಶಯೋಕ್ತಿಯಾಗುದಿಲ್ಲವೆಂದೆ ನಾನು ಭಾವಿಸುತ್ತೇನೆ.ಸಗರ ನಾಡಿನ ಕೇಂದ್ರ ಬಿಂದು ಶಹಾಪುರ ನಗರದಲ್ಲಿ ಕನ್ನಡ ಮಾಧ್ಯಮ ಇಂಗ್ಲಿಷ್ ಮಾದ್ಯಮ, ಸಿಬಿಎಸ್ಸಿ, ಶಾಲೆಗಳನ್ನು ಪ್ರಾರಂಭಿಸಿ ಸಂಪನ್ಮೂಲ ಶಿಕ್ಷಕರನ್ನು ನೇಮಕ ಮಾಡಿಕೊಂಡು ಬಡತನದಲ್ಲಿ ಇರುವ ಗ್ರಾಮೀಣ ಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ತಮ್ಮ ಸೇವೆಯನ್ನು ಈ ನಾಡಿನಲ್ಲಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

 ಸಗರ ನಾಡಿನಲ್ಲಿ ಅಕ್ಷರ ಕ್ರಾಂತಿಯ ಹರಿಕಾರ

ನಮ್ಮ ಸಗರ ನಾಡಿನಲ್ಲಿರುವ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಸದುದ್ದೇಶದಿಂದ ತಮ್ಮ ಸಂಸ್ಥೆಯ ಪ್ರತಿ ವಿಭಾಗದಲ್ಲಿ ಏನಿಲ್ಲವೆಂದರೂ ಕನಿಷ್ಠ 100 ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿಯೊಂದಿಗೆ ಶಿಕ್ಷಣ ನೀಡುತ್ತಿದ್ದಾರೆ. ಅವರು ತಮ್ಮ 6 ವಿಭಾಗಗಳಲ್ಲಿ ಇಂಗ್ಲಿಷ್ ಮಾಧ್ಯಮ ಹಾಗೂ CBSE ಶಾಲೆಗಳಲ್ಲಿ ಕೇವಲ ಕನಿಷ್ಠ ನೂರು ವಿದ್ಯಾರ್ಥಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಕನಿಷ್ಠ 600 ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ಉಚಿತ ಊಟ ವಸತಿಯೊಂದಿಗೆ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.

  * ಸಾಮಾನ್ಯವಾಗಿ ನಾವು ಇಂದು ಯಾದಗಿರಿ ಜಿಲ್ಲೆ ಹೊರತುಪಡಿಸಿ ಬೇರೆ ಕಡೆ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಣ ಪಡೆಯಬೇಕು ಎಂದರೆ ಕೇವಲ ಶಿಕ್ಷಣ ನೀಡುವುದಕ್ಕೆ ವಾರ್ಷಿಕವಾಗಿ ಕನಿಷ್ಠ 40 ರಿಂದ 50 ಸಾವಿರದವರೆಗೆ ಶುಲ್ಕ ನಿಗದಿ ಮಾಡುತ್ತಾರೆ. ಇಂತಹ ದುಬಾರಿ ವೆಚ್ಚ ನೀಡಿ ಗ್ರಾಮೀಣ ಬಡವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ ಎಂದುಕೊಂಡು ಪ್ರತಿವರ್ಷವೂ ಬಡ ಪ್ರತಿಭಾವಂತ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದುಕೊಂಡು ಹಲವಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಮಾಧ್ಯಮ ಹಾಗೂ CBSE ಶಿಕ್ಷಣ ನೀಡುತ್ತಿದ್ದಾರೆ. ಅಂದರೆ ಕನಿಷ್ಠ ತನ್ನ ಎಲ್ಲಾ 6 ವಿಭಾಗಗಳಲ್ಲಿ ಏನಿಲ್ಲವೆಂದರೂ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಅಂದರೆ ಕನಿಷ್ಠ 600 ವಿದ್ಯಾರ್ಥಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಪ್ರತಿ ವಿದ್ಯಾರ್ಥಿಗೆ ಕೇವಲ ಶಾಲಾ ಶುಲ್ಕವಾಗಿ ಕನಿಷ್ಠ 20,000 ಅಂದರೆ ವಾರ್ಷಿಕವಾಗಿ 1ಕೋಟಿಗೂ ಮಿಕ್ಕ ಹಣವನ್ನು ಅವರು ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ವೆಚ್ಚ ಮಾಡುತ್ತಿದ್ದಾರೆ ಎಂಬುದು ಅರಿತುಕೊಳ್ಳಬೇಕು.

   2012ರಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭ 

ಡಿ.ಡಿ.ಯು. ಶಿಕ್ಷಣ ಸೇವಾ ಸಂಸ್ಥೆಯು, ಶಾಲೆ ಪ್ರಾರಂಭಿಸಿ ಯಶಸ್ಸು ಪಡೆದ ನಂತರ ಡಾ.ಭೀಮಣ್ಣ ಮೇಟಿಜೀಯವರು ನಮ್ಮ ಭಾಗದ ಮಕ್ಕಳು ದೇಶದ, ನಾಡಿನ ಅತ್ಯುನ್ನತ ಹುದ್ದೆಗಳನ್ನು ಪಡೆಯಬೇಕೆಂಬ ಮಹದಾಸೆಯಿಂದ 2012ರಲ್ಲಿ ಡಿ.ದೇವರಾಜ್ ಅರುಸು ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜುನ್ನು ಶಹಾಪೂರ ನಗರದಲ್ಲಿ ಪ್ರಾರಂಭಿಸಿ ರಾಜ್ಯದ ವಿವಿಧ ಭಾಗಗಳಿಂದ ಸಂಪನ್ಮೂಲ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಇಲ್ಲಿನ ಮಕ್ಕಳಿಗೆ ಪಿಯುಸಿಯೊಂದಿಗೆ CET, NEET, IAS, KAS, IPS, JEE ಮುಂತಾದ ಸ್ಪರ್ಧಾತ್ಮಕ ತರಬೇತಿ ನೀಡುವುದರೊಂದಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಈ ಸಂಸ್ಥೆಯಲ್ಲಿ ಕಲಿತ ಹಲವು ಮಕ್ಕಳು ವೈಧ್ಯರು, ಇಂಜಿನಿಯರುಗಳಾಗಿ ನಾಡಿನ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಈ ಕಾಲೇಜಿನಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ನಾಡಿನಾದ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಸಂತೋಷದ ವಿಚಾರವಾಗಿದೆ. ಉನ್ನತ ಗುರಿಯೊಂದಿಗೆ ಉತ್ತಮ ಶಿಕ್ಷಣ ನೀಡಿದ ಈ ಸಂಸ್ಥೆ ತನ್ನ ಕಬಂಧ ಬಾಹುಗಳನ್ನು ಕಲ್ಯಾಣ ಕರ್ನಾಟಕದಾದ್ಯಂತ ಪಸರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಸಂಸ್ಥೆ ತನ್ನ ವಿಭಾಗಗಳನ್ನು ಕಲಬುರ್ಗಿ, ಯಾದಗಿರಿ, ವಡಿಗೇರ, ಸೇಡಂ, ಸೈದಾಪುರ,ದೋರನಹಳ್ಳಿಯಲ್ಲಿ ತನ್ನ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ತನ್ಮೂಲಕ ಸೃಜನಾತ್ಮಕ ಮೌಲಿಕ ಶಿಕ್ಷಣವನ್ನು ನೀಡುತ್ತಿದೆ. ಖಾಸಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವುದೆಂದರೆ ಅದು “ಬಡವರಿಗೆ ನಿಲುಕದ ಸ್ವರ್ಗ” ಎಂದೇ ಭಾವಿಸಿಕೊಂಡ ಜನಾಂಗಕ್ಕೆ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಶಿಕ್ಷಣ ನೀಡಿದರು. ಅವರು ಹಣ ಗಳಿಸಲೇಬೇಕು ಎಂದು ಅಂದುಕೊಂಡರೇ ಇವತ್ತು ಅವರು ನೀಡುತ್ತಿರುವ ಗುಣಮಟ್ಟದ ಶಿಕ್ಷಣಕ್ಕಾಗಿ ಅವರ ಸಂಸ್ಥೆಯಲ್ಲಿ ಇಂದು ಹಣವಂತರ ಮಕ್ಕಳೇ ತುಂಬಿರುತ್ತಿದ್ದರು ಆದರೆ ಹಣಕ್ಕೆ ಬೆಲೆ ಕೊಡದೆ ಅವರ ಮೂಲ ಉದ್ದೇಶ ಬಡವರಿಗೂ ಇಂಗ್ಲಿಷ್ ಮಾಧ್ಯಮ, CBSE ಹಾಗೂ ಪಿಯುಸಿ ಸೈನ್ಸ್ ಓದಿಸಬಹುದು ಎಂಬ ಭರವಸೆಯನ್ನು ಮೂಡಿಸಿದರು. ಆ ಕಾರಣದಿಂದ ಇಂದು ತನ್ನ ಸಂಸ್ಥೆಯ ಎಲ್ಲಾ ವಿಭಾಗಗಳಲ್ಲಿ ಗ್ರಾಮೀಣ ಬಡ ಮಕ್ಕಳು ಇಂದು ಹೆಮ್ಮೆಯಿಂದ ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಲಿಚ್ಚಿಸುವೆನು.ಇಂತಹ ಉನ್ನತ ಗುರಿಯೊಂದಿಗೆ ಉದಾತ್ತ ಚಿಂತನೆಗಳನ್ನು ಇಟ್ಟುಕೊಂಡು 2012ರಲ್ಲಿ ಪ್ರಾರಂಭಿಸಿದ ಡಿ.ದೇವರಾಜ ಅರಸು ಪದವಿ ಪೂರ್ವ ವಿಜ್ಞಾನ ಕಾಲೇಜು ತನ್ಮೂಲಕ ನಿಸ್ವಾರ್ಥ ಶೈಕ್ಷಣಿಕ ಸೇವೆಯ ಮೂಲಕ ಸರ್ವಾಂಗೀಣ ಅಭಿವೃದ್ಧಿಯಾಗಲು ಕಾರಣೀಭೂತವಾಗಿ ಇಂದು ದಶಮಾನೋತ್ಸವದ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ಕಾಲೇಜಿನ ಹೆಗ್ಗಳಿಕೆಯಾಗಿದೆ.

ಕೋವಿಡನಲ್ಲಿಯು ಶೈಕ್ಷಣಿಕ ಕ್ರಾಂತಿ 

ಕೋವೀಡನಿಂದ ಹಲವು ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನ ನಾವು ಕಂಡಿದ್ದೇವೆ. ಆದರೆ ಡಾ.ಭೀಮಣ್ಣ ಮೇಟಿಯವರು ತಮ್ಮ ಸಂಸ್ಥೆಗೆ ಎಷ್ಟೇ ನಷ್ಟವಾದರು ಪರವಾಗಿಲ್ಲ ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂಬ ಕವಿವಾಣಿಯಂತೆ ತನ್ನ ಕಷ್ಟವನ್ನು ಬದಿಗೊತ್ತಿ ಸಮಾಜದಲ್ಲಿರುವ ಬಡವರು, ನಿರ್ಗತಿಕರು, ಶೋಷಿತರು ಕೋವಿಡ್ ನಿಂದ ಆರ್ಥಿಕವಾಗಿ ಸಂಕಷ್ಟಕಿಡಾಗಿದ್ದಾರೆ ಎಂದು ಮನಗಂಡು ಈ ಜನತೆಗೆ ಆಸರೆಯಾಗಬೇಕು ಎಂಬ ಕಾರಣದಿಂದ ಅದೇ ವರ್ಷ ಪ್ರಾರಂಭಿಸಿದ ದೋರನಹಳ್ಳಿ ಡಿ.ಡಿ.ಯು. ಶಿಕ್ಷಣ ಸಂಸ್ಥೆಯಲ್ಲಿ 1ರಿಂದ 5ನೇ ತರಗತಿವರೆಗೆ ಹಾಗೂ ಪಿಯುಸಿ ಕಲಾ, ವಾಣಿಜ್ಯ ವಿಜ್ಞಾನ ವಿಭಾಗದಲ್ಲಿ 300 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಪ್ರವೇಶ ನೀಡಿದರು. ಈ ಮೂಲಕ ಗ್ರಾಮೀಣ ಮಕ್ಕಳು ಕೋವಿಡ್ ಕಾರಣದಿಂದ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಿರುವುದನ್ನು ಗಮನಿಸಿದರೆ ಡಾ.ಮೇಟಿಜೀಯವರಿಗೆ ಸಮಾಜದ ಮೇಲಿರುವ ಕಳಕಳಿಯನ್ನು ಅರಿಯಬಹುದು.

   ಡಿಡಿಯು ಶಿಕ್ಷಣ ಸಂಸ್ಥೆಯಿಂದ ಉದ್ಯೋಗ ಮೇಳ

ಡಿಡಿಯು ಶಿಕ್ಷಣ ಸೇವಾ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಅರ್ಹತೆಯುಳ್ಳ ಪ್ರತಿಭಾವಂತ ಸಂಪನ್ಮೂಲ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿ ಮೇಳವನ್ನು ಆಯೋಜಿಸಿ ಅತಿ ಹೆಚ್ಚು ಸ್ಥಳಿಯರಿಗೆ ಆಕರ್ಷಕ ವೇತನದೊಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಡಿಡಿಯು ಶಿಕ್ಷಣ ಸಂಸ್ಥೆ ಒಟ್ಟು ತನ್ನ ಎಲ್ಲಾ ವಿಭಾಗಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂತೃಪ್ತಿ ಇದೆ. ಇಂದು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಗಮನಿಸಿದಾಗ ಸ್ವಜಾತಿಯವರನ್ನೆ ಹೆಚ್ಚು ನೇಮಕಾತಿ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಡಿ.ಡಿ.ಯು. ಸಂಸ್ಥೆ ಇದರ ತತ್ವಿರುದ್ಧವಾಗಿ ಶೈಕ್ಷಣಿಕ ಅರ್ಹತೆಯೇ ಮಾನದಂಡವನ್ನಾಗಿಸಿಕೊಂಡು ಜಾತ್ಯಾತೀತವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹೆಗ್ಗಳಿಕೆ ಡಾ.ಮೇಟಿಜಿಯವರಿಗೆ ಸಲ್ಲುತ್ತದೆ.

   ಡಿಡಿಯೂ ಶಿಕ್ಷಣ ಸಂಸ್ಥೆ ಹಲವು ಶಿಕ್ಷಣ ಸಂಸ್ಥೆಗಳ  ಹುಟ್ಟಿಗೆ  ಪ್ರೇರಣೆಯಾಗಿದೆ 

* 2009 ರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವಂತಹ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ಸಕಲ ಸಂಪನ್ಮೂಲ ಶಿಕ್ಷಕರನ್ನು ಬಳಿಸಿಕೊಂಡು ಶಾಲೆ ಪ್ರಾರಂಭಿಸಿದರು. ಇದರಿಂದಾಗಿ ಹಲವಾರು ಜನರು ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಮತ್ತು ಶೋಷಿತ ವರ್ಗಗಳಲ್ಲಿಯೂ ಶಿಕ್ಷಣ ಸಂಸ್ಥೆ ಪ್ರಾರಂಭಿಸಬಹುದು ಎಂಬ ಭರವಸೆ ಮೂಡಿಸಿದರು. ತನ್ನಿಮಿತ್ತ 2009 ಈಚೆಗೆ ಡಿ.ಡಿ.ಯು. ಶಿಕ್ಷಣ ಸಂಸ್ಥೆಯಿಂದ ಪ್ರೇರಣೆಗೊಂಡು ಹಲವು ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿ ಹುಟ್ಟಿಕೊಂಡವು. ಹೀಗೆ ಶಿಕ್ಷಣವೇ ಸಮಾಜದ ಶಕ್ತಿ ಎಂದುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಆಶಯ ಹೊತ್ತು ಡಾ.ಭೀಮಣ್ಣ ಮೇಟಿಯವರು “ಬೆಳಕಿನಿಂದೆ ಇರುವ ಬತ್ತಿಯಂತೆ” ಕಾಯಕ ಮಾಡುತ್ತ ಸಮಾಜದಲ್ಲಿ ಕತ್ತಲು ಕಳೆದು ಬೆಳಕಿನ ಜ್ಯೋತಿ ಪ್ರಜ್ವಲಿಸಲಿ ಎಂಬ ಆಶಾಭಾವನೆಯಿಂದ ತನ್ನ ಸೇವೆ ನೀಡುತ್ತಿದ್ದಾರೆ.

      ನನ್ನ ಜನಾಂಗ ಅಲ್ಪಸುಖಕ್ಕಾಗಿ ಆಯುಷ್ಯ ಪೂರ್ತಿ ಬಲಿಯಾಗಬಾರದು ಮತ್ತು ಶಾಶ್ವತವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಒಂದೇ ಔಷಧಿ ಎಂದು ಮನಗಂಡು ಕಾಯಕ ಮಾಡುತ್ತಿರುವ ನಾಯಕನನ್ನು ಶೋಷಿತ ಸಮಾಜ ಗುರುತಿಸದಿದ್ದರೆ ಸಮಾಜವೇ ಅದರ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಾ ಇಂತಹ ಶೈಕ್ಷಣಿಕವಾಗೀ ನಿಸ್ವಾರ್ಥ ಸೇವೆಯನ್ನು ಉನ್ನತ ಗುರಿಯೊಂದಿಗೆ ಉದಾತ್ತ ಚಿಂತನೆಗಳನ್ನು ಇಟ್ಟುಕೊಂಡು 2012ರಲ್ಲಿ ಪ್ರಾರಂಭಿಸಿದ ಡಿ.ಡಿ.ಯು.ಪದವಿ ಪೂರ್ವ ವಿಜ್ಞಾನ ಕಾಲೇಜು ಇಂದು ದಶಮಾನೋತ್ಸವದ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಲ್ಲಿ ನೂರ್ಮಡಿ ಸಂತೋಷ ಉಂಟುಮಾಡಿದೆ.ಈ ಕಾಲೇಜನ್ನು ಕಟ್ಟಿ ಬೆಳೆಸಲು ಅವಿರತವಾಗಿ ಶ್ರಮಿಸಿದ ಸಂಸ್ಥೆಯ ಸಂಸ್ಥಾಪಕರಾದ ಡಾ.ಭೀಮಣ್ಣ ಮೇಟಿಯವರ ಆದಿಯಾಗಿ ಸಂಸ್ಥೆಯ ಆಡಳಿತ ಮಂಡಳಿಯವರಿಗೆ, ಪ್ರಾಂಶುಪಾಲರಿಗೆ,ಉಪನ್ಯಾಸಕರಿಗೆ,ಸರ್ವ ಸಿಬಂದಿ ವರ್ಗದವರಿಗೆ ನಾವು ಹೃದಯ ಪೂರ್ವಕವಾಗಿ ಕೃತಜ್ಞತೆಗಳು ಸಲ್ಲುತ್ತೇವೆ.

ಲೇಖನ : ಚಂದ್ರಶೇಖರ ಕರ್ನಾಳ
ಕನ್ನಡ ಉಪನ್ಯಾಸಕರು ಡಿ.ಡಿ.ಯು. ಸ್ವತಂತ್ರ ಪದವಿ ಪೂರ್ವ ಕಾಲೇಜು ಶಹಾಪುರ

About The Author