ಹೋತಪೇಟ ಗ್ರಾಮದಲ್ಲಿ ವಾಂತಿಭೇದಿ ಶಾಸಕರ ಭೇಟಿ : ವೈಯಕ್ತಿಕವಾಗಿ 25 ಸಾವಿರ ಧನ ಸಹಾಯ

ಶಹಾಪೂರ : ತಾಲೂಕಿನ ಹೋತಪೇಠ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೂರು ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಹಾಪುರ ತಾಲೂಕಿನ ಹೋತಪೇಠ ಗ್ರಾಮಕ್ಕೆ ಇಂದು ಸ್ಥಳೀಯ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಭೇಟಿ ನೀಡಿ.ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ತಲಾ ಇಪ್ಪತೈದು ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರು.ನಂತರ ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಮ್ ಕಾಮಗಾರಿ. ತೆರೆದ ಬಾವಿ,ನೀರಿನ ಟ್ಯಾಂಕರ್ ಪರಿಶೀಲಿಸಿದರು.

    * ಬಳಿಕ ಮಾತನಾಡಿದ ಶಾಸಕರು ಆದಷ್ಟು ಬೇಗ ಮೃತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ.ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು.ಈಗಾಗಲೇ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಎಂಜಿನಿಯರ್  ಅಮಾನತ್ತು ಮಾಡಲಾಗಿದೆ.ಪ್ರಭಾರಿ ಅಧಿಕಾರಿಗಳಿಗೆ ಆದಷ್ಟು ಬೇಗ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಲು ಸೂಚಿಸಿದರು.ಶಿವುಮಾಂತಪ್ಪ ಸಾಹು ಸೇರಿದಂತೆ ಇತರ ಮುಖಂಡರು ಇದ್ದರು.