ಡಿಡಿಯು ದಶಮಾನೋತ್ಸವ ಸಮಾರಂಭ : ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ : ಸತೀಶ ಜಾರಕಿಹೊಳಿ

ಶಹಾಪೂರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ. ಮೌಢ್ಯವನ್ನು ಬದಿಗೊತ್ತಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಬೇಕೆಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಧ್ಯಕ್ಷರಾದ ಸತೀಶ ಜಾರಹೋಳಿಯವರು ಪಾಲಕರಿಗೆ ಕರೆ ನೀಡಿದರು.ವಡಗೇರಾ ತಾಲೂಕಿನ ಡಿಡಿಯು ಕಾಲೇಜು ಶಿಕ್ಷಣದ ದಶಮಾನೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಉತ್ತಮವಾಗಿ ಬದುಕಬೇಕು. ಸಮಯ ಮತ್ತು ಶಿಕ್ಷಣ ನಮ್ಮ ಬದುಕಿನಲ್ಲಿ ಮರುಕಳಿಸುವುದಿಲ್ಲ.ಕಲ್ಯಾಣ ಕರ್ನಾಟಕದಲ್ಲಿ ಭೀಮಣ್ಣ ಮೇಟಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಶಿಕ್ಷಣಕ್ಕೆ ಅವರು ನೀಡಿದ ಮಹತ್ವ ಅಪಾರ. ಶಿಕ್ಷಣ ಇಂದಿನ ದಿನಗಳಲ್ಲಿ ವ್ಯಾಪಾರಿಕರಣವಾಗುತ್ತಿದೆ. ಆದರೆ ಭೀಮಣ್ಣ ಮೇಟಿ ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳಿಗೂ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ
ಎಂದು ಹೇಳಿದರು.

       ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಮಾತನಾಡುತ್ತಾ, ಮೌಢ್ಯತೆಯನ್ನು ಬದಿಗೊತ್ತಿ ಶಿಕ್ಷಣಕ್ಕೆ ಮಹತ್ವ ನೀಡಿ. ಭೀಮಣ್ಣ ಮೇಟಿಯವರು ಸಣ್ಣ ವಯಸ್ಸಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಸಣ್ಣ ವಿಷಯವಲ್ಲ. ಸಂಸ್ಥೆಯಲ್ಲಿ ಬಡ ಮಕ್ಕಳಿಗೂ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕಾಗಿ ತರಬೇತಿ ನೀಡುತ್ತಿದ್ದಾರೆ. ನಗರ ಗ್ರಾಮೀಣ ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಡಿಡಿ ಯು ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ ಎಂದು ಹೇಳಿದರು.

         ಉಪನ್ಯಾಸಕರಾಗಿ ಆಗಮಿಸಿದ ವಿಶ್ವರಾಧ್ಯ ಸತ್ಯಂಪೇಟೆಯವರು ಮಾತನಾಡುತ್ತಾ, ಅಜ್ಞಾನ ಮೌಡ್ಯತೆ ಅಂಧಕಾರ ಇವುಗಳಿಂದ ನಾವು ಹೊರ ಬರಬೇಕಿದೆ.ಭೂಮಿ ದುಂಡಾಗಿದೆ ಎಂದು ಸತ್ಯ ಹೇಳಿದ ಗೆಲಿಲಿಯೋವನ್ನು ಗಲ್ಲಿಗೇರಿಸಿದರು. ವೈಚಾರಿಕತೆಯ ಬಗ್ಗೆ ಮಾತನಾಡುವವರನ್ನು ದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗುತ್ತಿದೆ ಎಂದು ಕಳಗೊಳ ವ್ಯಕ್ತಪಡಿಸಿದರು.

        ಸಂಸ್ಥೆಯ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 2009 ರಲ್ಲಿ ಡಾ.ದೇವರಾಜ ಹೆಸರಿನಡಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು.2012ರಲ್ಲಿ ಕಾಲೇಜ ಶಿಕ್ಷಣ ಪ್ರಾರಂಭಿಸಿ ಇಂದಿಗೆ 10 ವರ್ಷಗಳು ಕಳೆದವು. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ನೀಟ್ ಇಂಜಿನಿಯರ್ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ.ಯಾದಗಿರಿ ದೋರನಹಳ್ಳಿ ಸೇಡಂ ಕಲಬುರ್ಗಿ ಸೈದಾಪುರ ವಡಗೇರಾ ಶಹಾಪುರದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲಕರವಾಗಲೆಂದು ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಿದೆವು.ದೋರನಹಳ್ಳಿಯಲ್ಲಿ ಎರಡುವರೆ ವರ್ಷ ಉಚಿತ ಶಿಕ್ಷಣ ಮತ್ತು ವಸತಿಯನ್ನು ನೀಡಲಾಗಿದೆ ಎಂದು ಹೇಳಿದರು.ವಿಜ್ಞಾನ ಕಲಾ ವಾಣಿಜ್ಯ ಸೇರಿದಂತೆ ಒಟ್ಟಾರೆಯಾಗಿ 18 ಸಂಸ್ಥೆಗಳಿದ್ದು 6000 ವಿದ್ಯಾರ್ಥಿಗಳು ಮತ್ತು ಪಿಯುಸಿಯಲ್ಲಿ 1200 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

     ಪೂಜ್ಯರಾದ ರೇವಣ ಸಿದ್ದೇಶ್ವರ ಶಾಂತಮಯ ಅಗತೀರ್ಥ ಮಠದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಆರಂಭದಲ್ಲಿ ಸತೀಶ ಜಾರಕಿಹೊಳಿಯವರಿಗೆ ಸಂಸ್ಥಾಪಕರಾದ ಭೀಮಣ್ಣ ಭೇಟಿ ಬೆಳ್ಳಿ ಗಧೆ ನೀಡಿ ಸನ್ಮಾನಿಸಿದರು. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳು ಮತ್ತು ನೀಟ್ ನ ಇಂಜಿನಿಯರಿಂಗ್ ವೈದ್ಯಕೀಯ ಕ್ಷೇತ್ರಕ್ಕೆ ಆಯ್ಕೆಯಾದ ಮಕ್ಕಳಿಗೆ ಹಾಗೂ ಕೃಷಿ ಸಮಾಜ ಸೇವೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಡಾ. ಭೀಮಣ್ಣ ಮೇಟಿ ಮತ್ತು ಶ್ರೀಮತಿ ವಿಧ್ಯಾ ಬಿ ಮೇಟಿ ದಂಪತಿಗಳಿಗೆ ಸನ್ಮಾನಿಸಲಾಯಿತು.

ನಿಖಿತ್ ಮೌರ್ಯ ಮಾತನಾಡುತ್ತಾ, ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಶಿಕ್ಷಣ ಕಲಿಯಲು ತೊಂದರೆಪಟ್ಟ ದಿನಗಳನ್ನು ಹೇಳುತ್ತಾ ಬಿಆರ್ ಅಂಬೇಡ್ಕರ್ ಅವರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ಉನ್ನತ ಹುದ್ದೆಗಳನ್ನು ಗುರಿಯಾಗಿಸಿಕೊಂಡು ವ್ಯಾಸಂಗ ಮಾಡಿ ಎಂದು ಮಕ್ಕಳಿಗೆ ಕರೆ ನೀಡಿದರು. ಯಾವ ಸಂದರ್ಭದಲ್ಲಿಯೂ ಮಕ್ಕಳಲ್ಲಿ ಕೀಳರಿಮೆ ಬರಬಾರದು. ಜಾತಿ ಮತ ಪಂಥಗಳ ವ್ಯವಸ್ಥೆಯನ್ನು ಧಿಕ್ಕರಿಸಿ ಎಂದು ಹೇಳಿದರು.

ಚೆನ್ನರೆಡ್ಡಿ ತುನ್ನೂರು, ಶ್ರೀನಿವಾಸರೆಡ್ಡಿ ಕಂದಕೂರ ,ಬಸ್ಸುರೆಡ್ಡಿ, ನಿಖೀತ್ ಮೌರ್ಯ ಹನುಮೆಗೌಡ ಮರಕಲ್ ,ಹಣಮೆಗೌಡ ಬೀರನ್ಕಲ್, ಮೌಲಾಲಿ ಅನಪೂರ ಮರೆಪ್ಪ ಬಿರಾಳ ಮಲ್ಲಿಕಾರ್ಜುನ ಕರಕಳ್ಳಿ ಮೌನೇಶ್ ಪೂಜಾರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ದೇವೆಂದ್ರಪ್ಪ ಮೇಟಿ ಕಾರ್ಯದರ್ಶಿ,ಸಂಸ್ಥೆಯ ಮುಖ್ಯೊಪಾಧ್ಯರು ಶಿಕ್ಷಕರು ಶಾಲಾ ಮಕ್ಕಳು ಸೇರಿದಂತೆ ಹಲವು ಗ್ರಾಮಗಳಿಂದ ಅಪಾರ ಜನಸ್ತೋಮ ಸೇರಿತ್ತು

About The Author