ಶಹಾಪುರ,,

ಶಹಾಪುರ ಮತಕ್ಷೇತ್ರದ ಭೋವಿ ಕಾಡಮಗೇರಾ ಗ್ರಾಮದಲ್ಲಿ ಆಯೋಜನೆ ಮಾಡಿದ ಕಾಡಮಗೇರಾ ಪ್ರಿಮೀಯರ್ ಲೀಗ್–4 ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಯುವ ನಾಯಕ ಬಾಪೂಗೌಡ ದರ್ಶನಾಪುರ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಯುವಕರಲ್ಲಿ ಕ್ರೀಡಾಸ್ಫೂರ್ತಿ ಹೆಚ್ಚಿಸುವ ಈ ರೀತಿಯ ಪಂದ್ಯಾವಳಿಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಉತ್ತಮ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಕ್ರೀಡಾಪಟುಗಳು ಎರಡನ್ನು ಸ್ವೀಕರಿಸಬೇಕು. ಸೋಲೇ ಗೆಲುವಿನ ಮೆಟ್ಟಿಲು ಎಂದು ಹೇಳುತ್ತಾ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭೀಮನಗೌಡ ಗುರುವಿನ, ಜಕ್ಕಯ್ಯ ತೋಟದ, ಚನ್ನಪ್ಪಗೌಡ ಮಾಲಿಪಾಟೀಲ, ಶಾಂತಕುಮಾರ ಪಾಟೀಲ್, ಜೈರಾಮ್ ರಾಠೋಡ, ಗೋಪಾಲ ರಾಠೋಡ್, ನಂದಪ್ಪ ಕವಲ್ದಾರ, ಗುರುಪುತ್ರ ಕಂಬಾರ, ಬಂದೇನವಾಜ್ ಸಾಸನೂರ, ಪ್ರಸನ್ನ ನಾಯಕ, ಪರಶುರಾಮ ಪಾಟೀಲ್, ಪರಶುರಾಮ ಕೊಡಮನಹಳ್ಳಿ, ಸತೀಶ ತೋಟದ, ಕಾಶಿ ಗುತ್ತೇದಾರ, ಚಂದ್ರಶೇಖರ ಕುಂಬಾರ, ಶರಣು ಸೇರಿದಂತೆ ಕ್ರೀಡಾಪಟುಗಳು ಗ್ರಾಮದ ಮುಖಂಡರು, ಗ್ರಾಮಸ್ಥರು, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.