ವಡಗೇರಾ ಪಟ್ಟಣದ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ 

ವಡಗೇರಾ:

ಭೂ ಕೈಲಾಸ ಸುಕ್ಷೇತ್ರ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ಯ ವಡಗೇರಾ ಪಟ್ಟಣದ ನೂರಾರು ಪುರುಷ ಮತ್ತು ಮಹಿಳಾ ಭಕ್ತಾದಿಗಳು ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಣ್ಣ ನೀಲಳ್ಳಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 15ನೇ ವರ್ಷದ ಶ್ರೀಶೈಲ ಪಾದಯಾತ್ರೆ ಅಂಗವಾಗಿ ಪಟ್ಟಣದ ಶ್ರೀ ಅಂಬಾ ಮಹೇಶ್ವರಿ ಹಾಗೂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಭಾನುವಾರದಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರಿಗಳನ್ನು ಬೀಳ್ಕೊಡಲಾಯಿತು.ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಪಟ್ಟಣದ ಯುವ ಮುಖಂಡ ರೆಡ್ಡಿ ಯಮನೂರು ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಣ್ಣ ಇಟಗಿ, ಕರವೇ ಮುಖಂಡ ಶರಣು ಇಟಗಿ, ಸಂಗುಗೌಡ ಮಾಲಿ ಪಾಟೀಲ್, ರಿಷಿಕೇಶ್ ಕುಲಕರ್ಣಿ, ಸಿದ್ಲಿಂಗಪ್ಪ ಪಿಡ್ಡೆಗೌಡ, ದೇವು ಬುಸೇನಿ, ಸೈಯ್ಯದ್ ಮರಡಿ,ಭೀಮಶಪ್ಪ ಕೋಮಾರ, ಅಬ್ದುಲ್ ಚಿಗನೂರ, ಗಂಗಾಧರ್ ವಿಶ್ವಕರ್ಮ, ಶಿವು ಗೋನಾಲ್,ಯಲ್ಲಪ್ಪ ಶಿರವಾಳ, ದೇವು ಜಡಿ, ಶರಣು ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *