ಡಿಡಿಯು ಕಾನ್ವೆಂಟ್ ಶಾಲೆಗೆ ಶೇ.97 ರಷ್ಟು ಫಲಿತಾಂಶ 

ಶಹಾಪೂರ,

2025-26ನೇ ಸಾಲಿನ 10ನೇ ತರಗತಿಯ ಫಲಿತಾಂಶವು ರಾಜ್ಯಾದ್ಯಂತ ಗುರುವಾರದಂದು ಪ್ರಕಟವಾಗಿದ್ದು, ಶಹಪುರ ತಾಲೂಕಿನ ಡಿಡಿಯು ಇಂಗ್ಲಿಷ್ ಮಾಧ್ಯಮ ಕಾನ್ವೆಂಟ್ ಶಾಲೆಯು ಶೇ.97 ರಷ್ಟು ಫಲಿತಾಂಶ ದಾಖಲು ಮಾಡಿದೆ. ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆ, 27 ವಿದ್ಯಾರ್ಥಿಗಳು ಪ್ರಥಮ ದರ್ಜೆ, 17 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಅಭಿಷೇಕ್ ತಂದೆ ದಯಾನಂದ ವಿದ್ಯಾರ್ಥಿಯು ಶಾಲೆಯಲ್ಲಿ ಶೇ 98.24(614)ರಷ್ಟು ಅತಿ ಹೆಚ್ಚು ಅಂಕ ಪಡೆದು ದಾಖಲು ಮಾಡಿದ್ದು,ಉಳಿದಂತೆ

ಅಭಿಷೇಕ ಡಿ. ಶೇ 96.96(606),

ಎಂಡಿ ಆಜಂ ಶೇ 95.36(596)

ಕಿರಣ್ ಕುಮಾರ್ ಶೇ 95.36(596)

ಗೌತಮಿ ಶೇ 93. 92(587)

ವಿನಯಕುಮಾರ ಶೇ 93.76(586)

ಲಕ್ಷ್ಮಣ ಶೇ 92.16(576)

ಬಸ್ಸಮ್ಮ ಶೇ 91.52(572)

ದೀಪಕ್ ಶೇ 91.04(567)

ಸುಮಿತ್ ನಾಯಕ ಶೇ 90.24(564)

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ ಯವರು ಸಂತಸ ವ್ಯಕ್ತಪಡಿಸಿದ್ದು ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ವಿದ್ಯಾ ಬಿ ಮೇಟಿ,ಸಂಸ್ಥೆಯ ಕಾರ್ಯದರ್ಶಿ ದೇವೇಂದ್ರಪ್ಪ ಮೇಟಿ,ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಮೇಟಿ ಹಾಗೂ ಮುಖ್ಯ ಗುರುಗಳು ಶಿಕ್ಷಕರು ಮಕ್ಕಳ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ. 

 

Leave a Reply

Your email address will not be published. Required fields are marked *