ಹಿರೆದಿನ್ನಿ : ಸಿಡಿಲಿನಿಂದ ತೆಂಗಿನ ಗಿಡ ಭಸ್ಮ

ರಾಯಚೂರು,,

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಿಂದಾಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹಿಂದುಗಡೆ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಗಿಡ ಭಸ್ಮವಾಗಿದೆ.

ಬೀರಲಿಂಗೇಶ್ವರ ದೇವಸ್ಥಾನ ಹಿಂದೆ ಇರುವ ಬೋವಿ ಸೀನಪ್ಪ ಮನೆ ಮುಂದೆ ಭಾರಿ ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ತೆಂಗಿನ ಗಿಡಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿತು. ಜನರು ನೋಡುತ್ತಿದ್ದಂತೆಯೆ ಗಿಡ ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಮನೆಗಳಿಗೆ, ಪ್ರಾಣಿಗಳಿಗೆ, ಮನುಷ್ಯರಿಗಾಗಲಿ ಹಾನಿಯಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *