ಸರ್ಕಾರದ ನಿಯಮಗಳನ್ವಯ ಇಂದಿರಾ ಕ್ಯಾಂಟೀನಿನಲ್ಲಿ  ಊಟ ಕೊಡುತ್ತಿಲ್ಲ ಆರೋಪ

ಶಹಾಪೂರ,,

ತಾಲೂಕಿನ ಹೊಸ ಬಸ್ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನಿನಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮೇನು ಪ್ರಕಾರ ಉಪಹಾರ ಮತ್ತು ಊಟ ನೀಡುತ್ತಿಲ್ಲ ಎಂದು ಯಾದಗಿರಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾದ ಭೀಮರಾಯ ಪೂಜಾರಿ ಆ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿದ ಅವರು,ಇಂದಿರಾ ಕ್ಯಾಂಟೀನ್ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ ಸರ್ಕಾರದ ಗೈಡ್ಲೈನ್ ಮತ್ತು ಮೆನು ಚಾರ್ಟ್ ಪಾಲಿಸದೆ ತಮ್ಮ ಮನಸ್ಸಿಗೆ ಬಂದಂತೆ ಉಪಹಾರ ಕೊಡುತ್ತಿದ್ದಾರೆ. ಗುಣಮಟ್ಟದ ಉಪಹಾರ ಕೊಡುವಲ್ಲಿ ವಿಫಲವಾಗಿದ್ದಾರೆ. ಸಮಯ ಪಾಲನೆ ಮಾಡದೆ ಬೆ. 8:00 ಆರಂಬಿಸಿ 45 ನಿಮಿಷ ಉಪಹಾರ ಕೊಟ್ಟು  ಮುಚ್ಚುತ್ತಾರೆ.  ಉಪಹಾರದ ಚಾರ್ಟಿನಲ್ಲಿರುವ ಪ್ರಕಾರ ಸಾರ್ವಜನಿಕರಿಗೆ ಉಪಹಾರ ನೀಡುತ್ತಿಲ್ಲ.  ಆಹಾರ ಧಾನ್ಯಗಳಲ್ಲಿ ಸೊಪ್ಪು ಇರುವುದಿಲ್ಲ. ಉಣ್ಣುವಂತಹ ಬಡ ಜನಸಾಮಾನ್ಯರು ಹೊರಗಡೆ 40 ರಿಂದ 50 ರೂಪಾಯಿ ಒಂದು ಪ್ಲೇಟಿಗೆ ಹಣ ಕೊಟ್ಟು ಊಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರ ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿದೆ. ಆದರೆ ಇಲ್ಲಿಯೂ ಕೂಡ ಬಡ ಜನರಿಗೆ ಸರಿಯಾದ ರೀತಿಯಲ್ಲಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳು, ತಾಲೂಕ ದಂಡಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಳ ಎಚ್ಚೆತ್ತುಕೊಂಡು ತಾಲೂಕಿನ ಇಂದಿರಾ ಕ್ಯಾಂಟೀನ್ ಪರಿಶೀಲಿಸಬೇಕೆಂದು ಮನವಿ ಮಾಡಿದರು. ನಿರ್ಲಕ್ಷವಹಿಸಿದಲ್ಲಿ ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿದು ಹೋರಾಟ ಮಾಡಬೇಕಾಗುತ್ತದೆ ಎಂದರು.

Leave a Reply

Your email address will not be published. Required fields are marked *