ಶಹಾಪೂರ,,
ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಗೋಗಿ ವಲಯದ ಸಂಘ ರಚನೆ ಮಾಡಲಾಗಿದ್ದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಡಗೇರಾ ತಾಲೂಕು ಅಧ್ಯಕ್ಷರಾದ ವಿರೇಶ ತಿಳಿಸಿದರು.ತಾಲೂಕಿನ ಭೀಮರಾಯನ ಗುಡಿಯ ಸಿದ್ದಾರೂಢ ಮಠದಲ್ಲಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ರಾಜ್ಯದಲ್ಲಿ 51000 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಮೂಲಸೌಕರ್ಯಗಳಿಲ್ಲದೆ ಬದುಕು ಬೀದಿಗೆ ಬಂದು ನಿಂತಿದೆ. ಅತಿ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಸೇವಾ ಭದ್ರತೆಗಳಿಲ್ಲದೆ ಅತಿಥಿ ಶಿಕ್ಷಕರು ನಾಲ್ಕೈದು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ. ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಶಹಾಪೂರ ಕಾಯ೯ದಶಿ೯ ಕಲ್ಯಾಣ ಶೆಟ್ಟಿ ಗೋಗಿ ಉಪಸ್ಥಿತರಿದ್ದರು.
ಪಾಂಡುರಂಗ ನಾಗನಟಗಿ ಗೌರವಾಧ್ಯಕ್ಷರು, ಶಿವರಾಜ ಅಮರನಾಥ ಚಂದಾಪುರ ಅಧ್ಯಕ್ಷರು, ಗೋವಿಂದರಾಜ ಪೂಜಾರಿ ಕಕ್ಕಸಗೇರಿ ಉಪಾಧ್ಯಕ್ಷರು, ಕಾರ್ಯದರ್ಶಿ ಶಿವಕುಮಾರ ದಿಗ್ಗಿತಾಂಡ,ಖಜಾಂಚಿ ಚೆನ್ನಬಸಪ್ಪ ಚಾಮನಾಳ, ಸಹ ಕಾರ್ಯದರ್ಶಿ ಬಸವರಾಜ ಭೀ.ಗುಡಿ, ರಾಘವೇಂದ್ರ ಹೊಸಕೇರಿ, ಸಂಚಾಲಕರಾಗಿ ಮಾರುತಿ ಗೋಗಿ ಸೇರಿದಂತೆ ಇತರ ಪದಾಧಿಕಾರಿಗಳಾಗಿ ಮಹೇಶ ಕಾಡಮಗೇರ, ರವಿಕುಮಾರ ರಬ್ಬನಹಳ್ಳಿ,ಸಂಘಟನಾ ಸಂಚಾಲಕರು ಕು. ಶ್ರೀದೇವಿ ಗಂಗನಾಳ, ಶರಣಪ್ಪ ಇನಾಮದಾರ ಹುಲ್ಕಲ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.