ಸಾರ್ವಜನಿಕ ಆಸ್ಪತ್ರೆಗೆ ಸಚಿವರ ಭೇಟಿ ಶಸ್ತ್ರಚಿಕಿತ್ಸಾ ಕೊಠಡಿ ವೀಕ್ಷಣೆ ವೈದ್ಯರ ಜೊತೆ ಚರ್ಚೆ 

ಶಹಾಪುರ : ನಗರದ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ವೈದ್ಯರ ಜೊತೆ ಆಸ್ಪತ್ರೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರು.

ಶಸ್ತ್ರಚಿಕಿತ್ಸೆಯ ನಂತರದ ವಾರ್ಡಿನಲ್ಲಿ ಡಾ.ಯಲ್ಲಪ್ಪ ಪಾಟೀಲ್ ರವರು ಮಾಡಿರುವ ಶಸ್ತ್ರ ಚಿಕಿತ್ಸೆಯ ರೋಗಿಯನ್ನು ವಿಚಾರಿಸುತ್ತಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ.

ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರುತ್ತಾರೆ. ಯಾವುದೇ ತೊಂದರೆಯಾಗದಂತೆ ರೋಗಿಗಳನ್ನು ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.ಶಸ್ತ್ರಚಿಕಿತ್ಸಾ ಕೊಠಡಿಗೆ ಭೇಟಿ ನೀಡಿದ ಸಚಿವರು ಶಸ್ತ್ರಚಕಿತ್ಸೆಗೆ ಒಳಪಟ್ಟಿದ್ದ ರೋಗಿಗಳನ್ನು ವಿಚಾರಿಸಿ ರೋಗಿಗಳಿಂದ ಆಸ್ಪತ್ರೆಯ ಸೌಲಭ್ಯಗಳನ್ನು ತಿಳಿದುಕೊಂಡರು. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಕಾಲ್ಬೆರಳಿನ ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೈಯುತ್ತಿರುವ ಡಾ.ಶರಣಗೌಡ ಹೊನ್ನಾಗೋಳ.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರಾದ ಡಾ.ಸ್ನೇಹಲತಾ ಅವರು ಶಸ್ತ್ರಚಿಕಿತ್ಸಾ ಕೇಂದ್ರದಲ್ಲಿ ನಿರತರಾಗಿದ್ದರು. ಅಂದು ತುರ್ತು ಚಿಕಿತ್ಸೆ ಸೇರಿದಂತೆ ಸುಮಾರು ಏಳು ಜನರಿಗೆ ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.ಡಾ.ಯಲ್ಲಪ್ಪ ನವರು ಶುಕ್ರವಾರದಂದು ಅಪೆಂಡೇಕ್ಸ್, ಹೈಡ್ರೋಸೀಲ್ ಸೇರಿದಂತೆ 15ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೈದಿದ್ದರು.

ಅಪೆಂಡೆಕ್ಸ ಶಸ್ತ್ರಚಿಕಿತ್ಸೆಯಲ್ಲಿ ನಿರತ ಆಡಳಿತ ವೈದ್ಯಾಧಿಕಾರ ಡಾ.ಯಲ್ಲಪ ಪಾಟೀಲ್

ಡಾ. ಶರಣಗೌಡ ರವರು ವಾರದ ಹಿಂದೆ ಬೆರಳು ಮೂಳೆ ಮುರಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಇವೆಲ್ಲವೂ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವುದನ್ನು ಸಚಿವರು ಗಮನಿಸಿದರು. ನಂತರ ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಇತರ ಸೌಲಭ್ಯಗಳ ಕೊರತೆ ಕಂಡುಬಂದರೆ ನನಗೆ ತಿಳಿಸಿರಿ ಎಂದು ವೈದ್ಯರಿಗೆ ಸಲಹೆ ನೀಡಿದರು.

ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಡಯಾಲಿಸಿಸ್ ರೋಗಿಯಿಂದ ಆನ್ಲೈನ್ ಹಣ ತೆಗೆದುಕೊಂಡ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆವಹಿಸುವಂತೆ ವೈದ್ಯರಿಗೆ ಸೂಚಿಸಿದರು.

ಹೈಡ್ರೋಸೀಲ್ ಶಸ್ತ್ರಚಿಕಿತ್ಸೆಯಲ್ಲಿ ನಿರತ ಆಡಳಿತ ವೈದ್ಯಾಧಿಕಾರ ಡಾ.ಯಲ್ಲಪ ಪಾಟೀಲ್.

ಡಿ ಗ್ರೂಪ್ ಸಿಬ್ಬಂದಿಯವರಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಒದಗಿಸಿಕೊಡುವಂತೆ ಸೂಚಿಸಿದರು.ರೋಗಿಗಳಲ್ಲಿ ಯಾವುದೇ ಹಣ ವಸೂಲಿ ಮಾಡಬಾರದೆಂದು ಎಚ್ಚರಿಸಿದ ಸಚಿವರು ಅಂತಹ ಘಟನೆ ನಡೆದರೆ ಆಸ್ಪತ್ರೆಯ ಆಡಳಿತಾಧಿಕಾರಿ ವೈದ್ಯರ ಗಮನಕ್ಕೆ ತನ್ನಿ. ಆಡಳಿತ ವೈದ್ಯಾಧಿಕಾರಿ ನಿರ್ಲಕ್ಷ ವಹಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಸ್ತ್ರೀ ಹೆರಿಗೆ ಶಸ್ತ್ರಚಿಕಿತ್ಸೆಯಲ್ಲಿ ನಿರತ‌ ಡಾ.ಸ್ನೇಹಲತಾ

ಡಾ. ರಮೇಶ್ ಗುತ್ತೇದಾರ್,ಡಾ.ಭೈರಮಡಗಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯವರು ಇದ್ದರು.