ಮಂಗಳೂರು ರಾಮಕೃಷ್ಣಾಶ್ರದ ಪೂಜ್ಯ ಶ್ರೀ ರಂಜನ್ ಸ್ವಾಮೀಜಿಯವರು ಬಂದಿದ್ದರಿಂದು ಕನಕದಾಸರ ಸನ್ನಿಧಿಗೆ : ಮುಕ್ಕಣ್ಣ ಕರಿಗಾರ : ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ

ಸಂತರು,ಶರಣರುಗಳಲ್ಲಿ ತಮ್ಮ ಆತ್ಮಚೈತನ್ಯದ ರಶ್ಮಿಗಳನ್ನು ಪಸರಿಸಿ ಪ್ರಭಾವವನ್ನುಂಟು ಮಾಡುತ್ತಿರುವ ಸಂತ ಕನಕದಾಸರ ಐಕ್ಯಮಂಟಪ ಕಾಗಿನೆಲೆಯತ್ತ ಇತ್ತೀಚಿನ ದಿನಗಳಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವಂತೆ ಕವಿಗಳು, ಸಂತರು,ಅನುಭಾವಿಗಳು ಆಗಮಿಸುತ್ತಿದ್ದಾರೆ.ಇಂದು ( 17.01.2026) ರಾಮಕೃಷ್ಣ ಆಶ್ರಮ ಮೈಸೂರಿನ ಪೂಜ್ಯ ಶ್ರೀ ರಂಜನ್ ಸ್ವಾಮೀಜಿಯವರು ಅನಿರೀಕ್ಷಿತವಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ,ಕನಕದಾಸರ ಐಕ್ಯಮಂಟಪದ ದರ್ಶನ ಮಾಡಿಸಲಾಯಿತು.ಕನಕದಾಸರ ಪಾದಗಳಿಗೆ ಪುಷ್ಪಗಳನ್ನು ಸಮರ್ಪಿಸಿ ವಂದಿಸಿದ ಪೂಜ್ಯ ಶ್ರೀ ರಂಜನ್ ಸ್ವಾಮಿಗಳವರಿಗೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಸಿದ ಪುಸ್ತಕಗಳನ್ನು ಸ್ವಾಮಿಗಳಿಗೆ ಗೌರವಪೂರ್ವಕವಾಗಿ ಸಮರ್ಪಿಸಲಾಯಿತು.


ಪ್ರಾಧಿಕಾರದ ಸಂಶೋಧಕರಾದ ಡಾ. ಜಗನ್ನಾಥ ಗೇನಣ್ಣನವರ್ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾಗಿನೆಲೆ ಮತ್ತು ಬಾಡ ಗ್ರಾಮಗಳ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.