ಕನಕದಾಸರ ಸನ್ನಿಧಿಯಲ್ಲಿ ಮಸಬಿನಾಳ ಶಾಲಾ ಮಕ್ಕಳೊಂದಿಗೆ ಆಯುಕ್ತರು

ಕಾಗಿನೆಲೆ :   ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಶ್ರೀ ಶಿವಾನಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ನಿಮಿತ್ತವಾಗಿ ನಿನ್ನೆ ರಾತ್ರಿ ಪ್ರಾಧಿಕಾರದ ಯಾತ್ರಿ ನಿವಾಸದಲ್ಲಿ ತಂಗಿದ್ದರು.ಇಂದು ಬೆಳಿಗ್ಗೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಮುಂಚೆ ಕನಕದಾಸರ ಐಕ್ಯಮಂಟಪಕ್ಕೆ ಆಗಮಿಸಿ ಕನಕದಾಸರ ದರ್ಶನಾಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಕನಕದಾಸರ ಬಗ್ಗೆ ಸಂಭಾಷಿಸುತ್ತ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರದ ಮುಖಂಡ ಕರಿಗಾರ್ ಅವರು ರಚಿಸಿದ ‘ ಸಮಾಜ ಸುಧಾರಕ ಕನಕದಾಸ’ ಎನ್ನುವ  ಕಿರುಹೊತ್ತಗೆಯನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಬೈಚಬಾಳ ಅವರಿಗೆ ನೀಡಿದರು. ಪ್ರಾಧಿಕಾರದ ಸಿಬ್ಬಂದಿಯವರಾದ ಸಂಗಮೇಶ,ವಿಜಯ ಬ್ಯಾಡಗಿ, ಕುಮಾರಸ್ವಾಮಿ ಕುಲಕರ್ಣಿ, ಗಣೇಶ,ಜಗದೀಶ ಈ ಸಂದರ್ಭದಲ್ಲಿ ಇದ್ದರು