ಜನವರಿ 26 ರಂದು ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಶ್ರೀಗಳಿಗೆ ನುಡಿನಮನ : ರಕ್ತದಾನ, ಆರೋಗ್ಯ ಶಿಬಿರ : ಡಾ.ಭೀಮಣ್ಣ ಮೇಟಿ

ಶಹಾಪುರ,,

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ ದಿನಾಚರಣೆ ಹಾಗೂ 77ನೇ ಗಣರಾಜ್ಯೋತ್ಸವ ಮತ್ತು ತಿಂಥಣಿ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದ ನಿಮಿತ್ತ ಕರ್ನಾಟಕ ಪ್ರದೇಶ ಕುರುಬ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ, ಕನಕ ನೌಕರರ ಸಂಘ ಮತ್ತು ಕನಕ ಗುತ್ತಿಗೆದಾರರ ಸಂಘದ ಸಹಯೋಗದಲ್ಲಿ ನಗರದ ಟೌನ್‌ಹಾಲ್ ದಲ್ಲಿ ಜನವರಿ 26 ರಂದು ಬೆ.10 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾಗಿನೆಲೆ ಗುರುಪೀಠದ ಧರ್ಮದರ್ಶಿ ಡಾ.ಭೀಮಣ್ಣ ಮೇಟಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಲಿಂಗೈಕ್ಯರಾದ ತಿಂಥಣಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಅವರಿಗೆ ನುಡಿನ ನಮನ ನಡೆಯಲಿದೆ. ಬಳಿಕ ಬೆಂಗಳೂರಿನ ಸಪ್ತಗಿರಿ ಹಾಗೂ ಸರಕಾರಿ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಯುವಕರಿಂದ ಬೃಹತ್ ರಕ್ತದಾನ ಶಿಬಿರ ಜರುಗಲಿವೆ ಎಂದರು.ಉಚಿತ ಆರೋಗ್ಯ ಶಿಬಿರದಲ್ಲಿ ಹೃದಯ ಸಂಬಂಧಿ ರೋಗಗಳು, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಕುರಿತು ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಬಿಪಿ, ಇಸಿಜಿ, 2ಡಿಎ ಸ್ಕ್ಯಾನಿಂಗ್ ಮಾಡಿಸಲಾಗುವುದು.ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸುವರು.ತಾಲೂಕು ಕುರುಬರ ಸಂಘದ ಯಲ್ಲಪ್ಪ ನರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ವಿವಿಧ ಸಮಾಜದ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ನಂತರ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ನುಡಿನಮನ ಕಾರ್ಯಕ್ರಮಗಳ ಬಿತ್ತಿಪತ್ರವನ್ನು ಕುರುಬ ಸಮಾಜದ ಮುಖಂಡರು ಬಿಡುಗಡೆಗೊಳಿಸಿದರು.

ಹಾಲುಮತ ಸಮಾಜದ ಹಿರಿಯರಾದ ಗಿರಿಯಪ್ಪಗೌಡ ಬಾಣತಿಹಾಳ, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಇನಾಮದಾರ, ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ರಾಜ್ಯ ನಿರ್ದೇಶಕರಾದ ಶಾಂತಗೌಡ ನಾಗನಟಗಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ರಾಮಪ್ಪ ಚಲವಾದಿ, ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಧರ್ಮಣ್ಣಗೌಡ ಹುಲ್ಕಲ್, ಕನಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಾಳಿಂಗರಾಯ ಮಂಡಗಳ್ಳಿ, ನಾನೇಗೌಡ ಶರಣಗೌಡ ಚಾಮನಾಳ, ಮಲ್ಲಿಕಾರ್ಜುನ ಮೇಟಿ,ಭೀಮನಗೌಡ ದರಿಯಾಪುರ, ಶರಬಣ್ಣ ರಸ್ತಾಪುರ, ಸಿದ್ದಪ್ಪ ಕನ್ಯಕೊಳೂರ, ದೇವೀಂದ್ರಪ್ಪ ನಾಶಿ, ಮಲ್ಲಿಕಾರ್ಜುನ ದೊರನಹಳ್ಳಿ, ಮಲ್ಲಪ್ಪ ಹಳಿಸಗರ, ಸಾಬಣ್ಣ ಚಟ್ನಳ್ಳಿ, ಬಲಭೀಮ ಮಡ್ನಾಳ, ಚಂದಪ್ಪ ಮಡ್ನಾಳ, ಶಾಂತು ಅರಳಹಳ್ಳಿ, ಬಾಬುರಾವ ತಿಪ್ಪನಹಳ್ಳಿ, ಚಂದ್ರಶೇಖರ ದರಿಯಾಪುರ, ಮುನಿಯಪ್ಪಗೌಡ ನಾಗನಟಗಿ, ನಿಂಗಣ್ಣ ನಾಗನಟಗಿ, ಮಾಳಪ್ಪ ಶೆಟ್ಟಿಕೇರಾ ಶರಣಗೌಡ ಪೊಲೀಸ್ ಪಾಟೀಲ್,ಭೀಮಣ್ಣಗೌಡ ಸೈದಾಪುರ, ನಿಂಗಣ್ಣ ಉಕ್ಕಿನಾಳ, ಮಲ್ಲಿಕಾರ್ಜುನ ಹೊತಪೇಠ, ನಿಂಗಣ್ಣ ಹೊತಪೇಠ, ಭೀಮಾಶಂಕರ ಹುಲ್ಕಲ್ ಸೇರಿದಂತೆ ಇತರರು ಇದ್ದರು.

ಉಚಿತ ಆರೋಗ್ಯ ಶಿಬಿರಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಶಿಬಿರದಲ್ಲಿ ಆಯ್ಕೆಯಾದ ರೋಗಿಗಳಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗುತ್ತದೆ.

ಡಾ.ಭೀಮಣ್ಣ ಮೇಟಿ ಕಾಗಿನೆಲೆ ಗುರುಪೀಠದ ಧರ್ಮದರ್ಶಿ

***********

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹುತಾತ್ಮ ದಿನಾಚರಣೆ ನಿಮಿತ್ತ ಪ್ರತಿ ವರ್ಷವೂ ರಕ್ತದಾನ,ಆರೋಗ್ಯ ಶಿಬಿರ ಆಯೋಜಿಸುತ್ತಿದ್ದೇವೆ.ಈ ವರ್ಷವು ಕೂಡ ರಕ್ತದಾನ,ಆರೋಗ್ಯ ಶಿಬಿರ ಆಯೋಜಿಸುತ್ತಿದ್ದೇವೆ ಹಾಗೂ ಲಿಂಗೈಕ್ಯ ತಿಂಥಣಿ ಕಾಗಿನೆಲೆ ಕನಕ ಪೀಠದ ಶ್ರೀಗಳಿಗೆ ನುಡಿನಮನ ನಡೆಯಲಿದೆ. ಕಾರ್ಯಕ್ರಮಗಳನ್ನು ವಿವಿಧ ಸಂಘಗಳಿಂದ ಆಯೋಜಿಸಲಾಗಿದೆ.

ಯಲ್ಲಪ್ಪ ನರಿ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕುರುಬ ಸಂಘ, ಶಹಾಪುರ.