ಯಾದಗಿರಿ ಪತ್ರಿಕಾ ಭವನದಲ್ಲಿ ಗಣರಾಜ್ಯೋತ್ಸವ ಆಚರಣೆ : ದೇಶ ಕಟ್ಟುವ ಕೆಲಸ ಮಾಡೋಣ : ಮಲ್ಲಪ್ಪ ಸಂಕೀನ್

ಯಾದಗಿರಿ,,

ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು, ದೇಶಕ್ಕೆ ಹಲವಾರು ಮಹಾನ್ ಪುರುಷರು ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.ಸಮಾಜದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ಅಮೋಘವಾಗಿದೆ. ಹೀಗಾಗಿ ನಾವು ಕೂಡ ನೋಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ್ಯತನ ಮಾಡಬಾರದು. ‌ಮೈ ಮರೆತರೆ ವ್ಯತಿರಿಕ್ತವಾದ ಪರಿಣಾಮ ಉಂಟಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೇವರಾಜ ವರ್ಕನಳ್ಳಿ, ಪತ್ರಕರ್ತರಾದ ನರಸಪ್ಪ ನಾರಾಯಣೋರ್, ಡಾ. ಭೀಮರಾಯ ಲಿಂಗೇರಿ, ಮಲ್ಲಿಕಾರ್ಜುನ ಆಶನಾಳ, ನಾಗರಾಜ ಮುಗದುಮ್, ನಾಗರಾಜ ಬೀರನೂರ, ಆಂಜನೇಯ ದೇವರಮನಿ, ಲಿಂಗೇಶ್ ಮರಕಲ್, ಭೀರಲಿಂಗಪ್ಪ ಕಿಲ್ಲನಕೇರಾ, ರಮೇಶ್, ಮಹೇಶ್, ಶಿವಾನಂದ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *