ಸಚಿವರಾದ ಪ್ರಿಯಾಂಕ್ ಖರ್ಗೆರವರ 47 ನೆಯ ಹುಟ್ಟುಹಬ್ಬ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹೊಸತನದ ಸ್ಪರ್ಶನೀಡಿದ, ಉದಾರ ಹೃದಯ ಸ್ಪಂದನಶೀಲ ಸಚಿವರು ಪ್ರಿಯಾಂಕ್ ಖರ್ಗೆಯವರು

ಬಸವರಾಜ ಕರೇಗಾರ

ನವೆಂಬರ್ ೨೨, ಇಂದು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಗೌರವಾನ್ವಿತ ಪ್ರಿಯಾಂಕ್ ಖರ್ಗೆಯವರ 47 ನೆಯ ಹುಟ್ಟುಹಬ್ಬ.ಕರ್ನಾಟಕದ ಕೋಟ್ಯಾಂತರ ಗ್ರಾಮೀಣ ಬಡವರು,ದೀನ ದಲಿತರ ಬದುಕುಗಳ ಆಶಾಕಿರಣರಾಗಿರುವ ಪ್ರಿಯಾಂಕ್ ಖರ್ಗೆಯವರು ನೂರ್ಕಾಲ ಬಾಳಲಿ,ಅವರು ರಾಜಕೀಯಕ್ಷೇತ್ರದಲ್ಲಿ ಉನ್ನತ ಶಿಖರಕ್ಕೆ ಏರಲಿ ರಾಜ್ಯದಲ್ಲಿ ಉನ್ನತ ಮಟ್ಟದ ಸ್ಥಾನ ಸಿಗಲಿ ಎಂದು ಆಶಿಸೋಣ.

ಪ್ರಿಯಾಂಕ್ ಖರ್ಗೆ ಅವರ 47 ನೆಯ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ  ಅವರ ಉದಾರ ವ್ಯಕ್ತಿತ್ವ ,ಸ್ಪಂದನಶೀಲ ಹೃದಯದ ಅನುಭವ ಅಪಾರವಾದದ್ದು, ಶೋಷಿತರು ಬಡವರೆಂದರೆ ಅವರಿಗೆ ಎಲ್ಲಿಲ್ಲದ ಪ್ರಾಣ ದಿನದ ಎರಡು ಗಂಟೆಗಳ ಕಾಲ ತಮ್ಮ ಗೃಹ ಕಛೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ದಿನಂಪ್ರತಿ ಆಲಿಸುತ್ತಾರೆ.ಸ್ಥಳದಲ್ಲಿಯೆ ಸಮಸ್ಯೆಗಳನ್ನು ಪರಿಹರಿಸುತ್ತಾರೆ.ಪ್ರಿಯಾಂಕ್ ಖರ್ಗೆಯವರು ನೇರ ನಡೆನುಡಿಯ ಸಚಿವರು. ಜನಪರ ಕಾರ್ಯಯೋಜನೆಗಳು, ಕನಸು ಕಲ್ಪನೆಗಳನ್ನು ಸಾಕಾರಗೊಳಿಸಲು ಪರಿಶುದ್ಧಹೃದಯದಿಂದ,ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅಪರೂಪದ ಸಚಿವರು‌.

ಪ್ರಿಯಾಂಕ್ ಖರ್ಗೆಯವರ ಬಗ್ಗೆ ಅವರ ರಾಜಕೀಯ ವಿರೋಧಿಗಳು ಏನನ್ನೋ ಮಾತನಾಡಬಹುದು.ಆದರೆ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರೆ ಸಾಕ್ಷಿ.ವರ್ಗಾವಣೆಯಲ್ಲಂತೂ ಎಲ್ಲವನ್ನೂ ಪಾರದರ್ಶಕವಾಗಿ ನಡೆಸಿದ್ದಾರೆ. ಬಿಡಿಗಾಸನ್ನೂ ನಿರೀಕ್ಷಿಸದ ವ್ಯಕ್ತಿತ್ವ ಅವರದು.ಕೆಲವು ಸಮಸ್ಯೆಗಳನ್ನು ಫೋನಿನ ಮೂಲಕವೆ ಪರಿಹರಿಸಿದ್ದಾರೆ.

ನೂರಾರು ಜನ ನೊಂದ ಬೆಂದ ಅಧಿಕಾರಿಗಳು ಮತ್ತು ಜನರ ಬಾಳ ಭರವಸೆಯಾಗಿದ್ದಾರೆ ಪ್ರಿಯಾಂಕ್ ಖರ್ಗೆಯವರು. ಪ್ರಿಯಾಂಕ್ ಖರ್ಗೆಯವರಿಗೆ ಸದಾ ಒಳಿತಾಗಲಿ,ಅವರಿಗೆ ರಾಜಕೀಯ ಉನ್ನತಾಧಿಕಾರಗಳು ದೊರೆಯಲಿ ಎಂದು ಆಶಿಸೋಣ.