ಶಹಾಪುರ : ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆರವರ 56 ನೇ ಜನುಮದಿನದ ಪ್ರಯುಕ್ತ ನಮ್ಮ ಕರ್ನಾಟಕ ಸೇನೆವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕನ್ನಡ ನಾಡು ನುಡಿ ಜಲಕ್ಕಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಪಡುಕೋಟೆಯವರ ತತ್ವ ಆದರ್ಶಗಳು ಯುವಕರಿಗೆ ಮಾದರಿ. ಇನ್ನು ಹೆಚ್ಚಿನ ಹೋರಾಟ ಮಾಡುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು.ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಕಲಬುರ್ಗಿ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ರುಕ್ಮಯ್ಯ ಗುತ್ತೇದಾರ,ಗುರುನಾಥ ಸಾಹುಕಾರ್, ಶಹಾಪುರ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ್, ಯುವ ಘಟಕದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ದೇಸಾಯಿ, ಅಂಬರೀಷ್ ತೆಲಗುರ್, ರಾಜು ಸಿಂಗ್, ವಿಶ್ವರಾಧ್ಯ ನಾಯಿಕೋಡಿ,ಶರಣು ದೇವರಮನಿ,ಚಂದ್ರು ಹಲಗಿ, ದೇವು ದೊರನಹಳ್ಳಿ, ದೇವಿಂದ್ರರೆಡ್ಡಿ ಸಿಂಗನಹಳ್ಳಿ, ಜಗದೀಶ ಖಾನಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.