ಶಹಾಪುರ : ದೊರನಹಳ್ಳಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ನಿಜಗುಣ ದೊರನಹಳ್ಳಿ ನೇತೃತ್ವದಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮದು ಬಂಗಾರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ದೋರನಹಳ್ಳಿ ಗ್ರಾಮವು ಹೋಬಳಿ ಕೇಂದ್ರ ವಾಗಿದ್ದು ದೋರನಹಳ್ಳಿ ಗ್ರಾಮದಲ್ಲಿ ಐದು ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢ ಶಾಲೆ ಇದ್ದು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಇದೆ. ಸುತ್ತಮುತ್ತಲಿನ ಗ್ರಾಮಗಳಾದ ಗುಂಡಳ್ಳಿ, ತಾಂಡ, ಇಬ್ರಾಹಿಂಪುರ, ಹಬ್ಬಳ್ಳಿ,ಹುರಸಗುಂಡಗಿ, ಬಿದರಾಣಿ ಸೇರಿದಂತೆ ವಿವಿದ ಗ್ರಾಮಗಳಿಂದ ಮಕ್ಕಳು ದೋರನಹಳ್ಳಿ ಪ್ರೌಢ ಶಾಲೆಗೆ ಬರುತ್ತಿದ್ದು ಶೈಕ್ಷಣಿಕವಾಗಿ ತುಂಬಾ ತೊಂದರೆಯಾಗುತ್ತಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಸಚಿವರು,ಶಾಸಕರು,ಸಂಸದರು ಈಗಾಗಲೇ ಮನವಿ ಪತ್ರವನ್ನು ಕೊಟ್ಟಿದ್ದು ಕೂಡಲೇ ನಮ್ಮ ಮನವಿಗಳಿಗೆ ಸ್ಪಂದಿಸಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವಂತೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅದ್ಯಕ್ಷ ಸಾಯಿಬಣ್ಣ ಕೆಂಗುರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರು ಮತ್ತು ಪ್ರದೇಶ ಕಾಂಗ್ರೆಸ್ ಪ ಪಂ ವಿಭಾಗದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಮೇಶ ದೊರಿ, ಕಾಂಗ್ರೆಸ್ ರಾಜ್ಯ ಹಿಂದುಳಿದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಭಂಡಾರಿ ನಾಟೇಕರ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ವಿಭಾಗದ ಕಾರ್ಯದರ್ಶೀ ತಾಯಪ್ಪ ಯಾದವ್ ಉಪಸ್ಥಿತರಿದ್ದರು.