ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ತಿಮ್ಮಯ್ಯ ಪುರ‍್ಲೆ ಅರ್ಜಿ ಸಲ್ಲಿಕೆ

ಶಹಾಪುರ : ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೋರಿ ಶುಕ್ರವಾರ ಶಹಾಪುರದ ತಿಮ್ಮಯ್ಯ ಪುರ‍್ಲೆ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಧ್ಯಕ್ಷ ಜೆ.ಸಿ ಚಂದ್ರಶೇಖರ ಅವರಿಗೆ ಅರ್ಜಿ ಸಲ್ಲಿಸಿದರು.ತಿಮ್ಮಯ್ಯ ಪರ‍್ಲೆ  ಪದವಿ ಪೂರ್ವ ಕಾಲೇಜುಗಳ ರಾಜ್ಯ ಘಟಕದ ಅಧ್ಯಕ್ಷರಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಅಲ್ಲದೆ ಹಲವಾರು ವರ್ಷಗಳಿಂದ ಸಕ್ರೀಯ ರಾಜಕಾರಣಿಯಾಗಿ ಪ್ರಗತಿಪರ ಚಿಂತಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಮೇಶದ ದೊರೆ ಆಲ್ದಾಳ, ಇಸ್ಮಾಯಿಲ್ ಚಾಂದ, ಸಂಗಣ್ಣ ಮೊಟಗಿ, ಸಾಯಿಬಣ್ಣ ಕೆಂಗುರಿ, ಭಂಡಾರೆಪ್ಪ ನಾಟೇಕರ್, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸಮನಿ,ಬಾಷಾ ಪಟೇಲ್, ಅಜೀಮ್ ಜಮಾದಾರ ಉಪಸ್ಥಿತರಿದ್ದರು.