ಸಿಜೆಐ ಮೇಲೆ ಶೂ ಎಸೆತ : ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ಶಹಾಪುರ : ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆಐ ಬಿ.ಆರ್ ಗವಾಯಿಯವರಿಗೆ, ಸನಾತನ ಧರ್ಮ ಮತ್ತು ಕೋಮುವಾದಿ ಹಾಗೂ ಜಾತಿವಾದಿ ವಕೀಲ ಕಿಶೋರ ರಾಕೇಶ್ ಎಂಬ ವ್ಯಕ್ತಿ ಕೋರ್ಟ್ ಹಾಲಿನಲ್ಲಿ ಶೂ ಎಸೆದಿದ್ದನ್ನು ಖಂಡಿಸಿ ನಾಳೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಶಿವಪುತ್ರಪ್ಪ ಜವಳಿ ತಿಳಿಸಿದ್ದಾರೆ.ನಾಳೆ ಹಳೆ ಬಸ್ ನಿಲ್ದಾಣದ ಡಾ. ಬಿ.ಆರ್ ಅಂಬೇಡ್ಕರ ರವರ ಮೂರ್ತಿಯ ಸ್ಥಳದಿಂದ, ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಷ್ಟ್ರಪತಿಯವರಿಗೆ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಗುವುದು.ಆದ್ದರಿಂದ ದಲಿತ ಸಂಘಟನೆಯ ಮುಖಂಡರು, ಕಾರ್ಯಕರ್ತರು ಮತ್ತು ರಾಜಕೀಯ ಮುಖಂಡರು ಅಂಬೇಡ್ಕರ್ ಅಭಿಮಾನಿಗಳು, ಪ್ರಗತಿಪರರು, ಸಮ ಸಮಾಜದ ಚಿಂತಕರು, ಸಾಹಿತಿಗಳು,ನೌಕರ ವರ್ಗದವರು, ನಿವೃತ್ತ ನೌಕರರು,ವಕೀಲರು, ಗುತ್ತಿಗೆದಾರರು ಭಾಗವಹಿಸಬೇಕೆಂದು ಮನವಿ ಮಾಡಿದರು.