Raichur : (ಗಬ್ಬೂರು, ಅಕ್ಟೋಬರ್ 05,2025) ವಿಶ್ವನಿಯಾಮಕ ಗಬ್ಬೂರಿನ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಅಕ್ಟೋಬರ್ 05 ರವಿವಾರದಂದು 115 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರನ ಆಶ್ರಯವನ್ನರಸಿ ರಾಜ್ಯ,ಹೊರರಾಜ್ಯಗಳಿಂದ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.
ಮಹಾಶೈವ ಧರ್ಮಪೀಠದ ಬಗ್ಗೆ ಅತ್ಯಂತ ಶ್ರದ್ಧೆ,ನಿಷ್ಠೆಗಳನ್ನುಳ್ಳ ವಿಜಯಪುರದ ಪ್ರಸಿದ್ಧ ರೆಡಿಯಾಲಾಜಿಸ್ಟ್ ಡಾಕ್ಟರ್ ವಿಶಾಲ್ ನಿಂಬಾಳ ಅವರು ಆಧ್ಯಾತ್ಮಿಕ ಅಭೀಪ್ಸೆಯೊಂದಿಗೆ ಅವರ ಜೂನಿಯರ್ ವೈದ್ಯರಾದ ಡಾಕ್ಟರ್ ನವೀನ್ ಅವರನ್ನು ಕರೆದುಕೊಂಡು ಬಂದಿದ್ದರು.ಡಾಕ್ಟರ್ ವಿಶಾಲ್ ನಿಂಬಾಳ ಅವರು ಆಧ್ಯಾತ್ಮಿಕ ಪಥದಲ್ಲಿ ನಡೆಯುತ್ತಿರುವ ಅಪರೂಪದ ವೈದ್ಯರು.ಯೋಗಸಾಧನೆಯಲ್ಲಿ ಮುಂದುವರೆದಿರುವ ಡಾಕ್ಟರ್ ವಿಶಾಲ್ ನಿಂಬಾಳ ಅವರು ಸೂಕ್ಷ್ಮಯಾನದ ಬಗ್ಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ ಮಾರ್ಗದರ್ಶನ ಪಡೆಯಲು ಬಂದಿದ್ದರು.ಮಹಾಶೈವ ಧರ್ಮಪೀಠವು ಭಕ್ತರ ಲೌಕಿಕ ಸಂಕಷ್ಟ ಪರಿಹರಿಸುವ ಕ್ಷೇತ್ರವಾಗಿರುವಂತೆ ಮೋಕ್ಷಾಪೇಕ್ಷಿಗಳ ಸಿದ್ಧಿಸ್ಥಳವೂ ಹೌದು.
ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಶ್ರೇಯಸ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಸನ್ಮಾನಿಸಿದರು.
ವಿಜಯಪುರದ ಡಾಕ್ಟರ್ ವಿಶಾಲ್ ನಿಂಬಾಳ,
ನವೀನ್,ಬೆಂಗಳೂರಿನ ಶ್ರೀಮತಿ ಸುರಭಿ,ರಿಯಲ್ ಎಸ್ಟೇಟ್ ಉದ್ಯಮಿ ಮುರುಳಿ ಹಾಗೂ ಹೈದರಾಬಾದಿನ ಇಂಜಿನಿಯರ್ ಗೌಸ್ ಮಹ್ಮದ್ ಅವರುಗಳನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ, ಆಶೀರ್ವದಿಸಿದರು.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ, ಈರಪ್ಪ ಹಿಂದುಪುರ,ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಪ್ರಭು ಕರಿಗಾರ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್, ಅನಿಲಕುಮಾರ ಹಾಸಗೊಂಡ ಕಲ್ಬುರ್ಗಿ,ಯಲ್ಲಪ್ಪ ಕರಿಗಾರ,ಪತ್ರಕರ್ತ ರಮೇಶ ಖಾನಾಪುರ,ರಂಗನಾಥ ಮಸೀದಪುರ, ಎಸ್.ಆರ್,ರವಿಕುಮಾರ್ ಇಂಜಿನಿಯರ್ ಬೆಂಗಳೂರು, ಮಲ್ಲಿಕಾರ್ಜುನ ಬಂಟಗುಂಟಿ,ಬೂದೆಪ್ಪ ಬಳ್ಳಾರಿ, ಬೂದಿಬಸವ ಶಾಂತಪ್ಪ ಕರಿಗಾರ, ರಾಮಕೃಷ್ಣ ಯಾದವ್,ವೆಂಕಟೇಶ, ತಿಪ್ಪಯ್ಯ ಭೋವಿ,ಶಿವಕುಮಾರ್ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.