ಶಹಾಪುರ ಸಾರ್ವಜನಿಕ ಆಸ್ಪತ್ರೆ : ಮೇಲಾಧಿಕಾರಿಗಳ ಕೈಚಳಕ : ಜಿಲ್ಲಾ ಮಟ್ಟದ ಅಧಿಕಾರಿಗೆ ತಾಲೂಕು ಮಟ್ಟದ ಜವಾಬ್ದಾರಿ : ವರ್ಗಾಯಿಸುವಂತೆ ಆಗ್ರಹ

ಶಹಾಪುರ : ಶಹಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿ ಒಬ್ಬರನ್ನು ತಾಲೂಕು ಮಟ್ಟದ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಒಂದು ವರ್ಷ ಆಡಳಿತ ಪೂರೈಸಿದ್ದಾರೆ. ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಪದೋನ್ನತಿ( ಪ್ರಮೋಷನ್) ಹೊಂದಿದ ಅಧಿಕಾರಿಗಳನ್ನು ಮತ್ತೆ ತಾಲೂಕು ಮಟ್ಟದ ಅಧಿಕಾರಿಯಾಗಿ ಡಾ. ಪದ್ಮಾನಂದ ಗಾಯಕ್ವಾಡ್ ಕರ್ತವ್ಯ ನಿರ್ವಹಿಸುತ್ತಿರುವುದು ಹಾಸ್ಯಾಸ್ಪದ. ಮೇಲಾಧಿಕಾರಿಗಳ ಕೈಚಳಕದಿಂದಲೊ, ಸರಕಾರದ ನಿರ್ಲಕ್ಷವೊ ಎನ್ನುವುದು ತಿಳಿಯುತ್ತಿಲ್ಲ. ಮೇಲಾಧಿಕಾರಿಗಳ ಆದೇಶವಿದ್ದರೂ ಯಾದಗಿರಿ ಜಿಲ್ಲಾಮಟ್ಟದ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ನಮ್ಮ ಕರ್ನಾಟಕ ಸೇನೆಯ ಶಹಪುರ ತಾಲೂಕು ಸಂಚಾಲಕರಾದ ನಭೀ ಪಟೇಲ್ ಆರೋಪಿಸಿದ್ದಾರೆ.

ನಭೀ ಪಟೇಲ್ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಆಯುಕ್ತರು, ನಿರ್ದೇಶಕರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತ್ರ ಬರೆದಿದು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಹಾಪುರದ ಆಸ್ಪತ್ರೆಯಲ್ಲಿ ಪ್ರಭಾರಿಯಾಗಿ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪದ್ಮಾನಂದ ಗಾಯಕವಾಡ ಒಟ್ಟಾರೆ ನಾಲ್ಕು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಮಟ್ಟದ ಡಿ ಎಲ್ ಓ ಹುದ್ದೆ, ಪಿಎಚ್ ಸರ್ಟಿಫಯಿಂಗ್ ಆಫೀಸರ್, ನೋಡಲ್ ಅಧಿಕಾರಿ ಮತ್ತು ಶಹಾಪುರ ತಾಲೂಕು ಆಸ್ಪತ್ರೆ ಎಎಂಓ/ಸಿಎಂಓ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ ನಂಬಲರ್ಹವಾದ ವಿಷಯ.

ನಾಲ್ಕು ಹುದ್ದೆಗಳನ್ನು ಮೇಲಾಧಿಕಾರಿಗಳು ಹೇಗೆ ಕೊಟ್ಟರು ಎನ್ನುವುದೇ ಸಂಶಯಾಸ್ಪದ. ಸರ್ಕಾರದ ಸುತ್ತೋಲೆಗಳನ್ವಯ ಮತ್ತು ಆಯುಕ್ತರ ಝುಮ್ ಸಭೆಯಲ್ಲಿ ಮೇಲಾಧಿಕಾರಿಗಳು ಮೂಲಹುದ್ದೆಗೆ ತೆರಳುವಂತೆ ಸೂಚಿಸಿದರೂ ಕೂಡ ಡಾ. ಪದ್ಮಾನಂದ ಗಾಯಕ್ವಾಡ್ ಅವರನ್ನು ಮೂಲ ಹುದ್ದೆ ಡಿಎಲ್ಓ ಹುದ್ದೆಗೆ ವರ್ಗಾವಣೆ ಮಾಡಿಲ್ಲ.ಕಲಬುರ್ಗಿಯ ವಿಭಾಗೀಯ ಮಟ್ಟದ ಅಧಿಕಾರಿಯವರು ಕೂಡಲೇ ಡಾ.ಪದ್ಮಾನಂದ ಗಾಯಕವಾಡ ಅವರನ್ನು ವರ್ಗಾವಣೆ ಮಾಡುವಂತೆ ಮೌಖಿಕವಾಗಿ ತಿಳಿಸಿದ್ದರೂ ಡಿಎಚ್ಓ ಮಹೇಶ ಬಿರಾದಾರ ಕ್ಯಾರೇ ಎನ್ನದೆ ಮೌನವಹಿಸಿದ್ದಾರೆ.ಡಿಎಚ್ಓ ಮತ್ತು ಶಹಾಪುರ ಸಾರ್ವಜನಿಕ ಆಸ್ಪತ್ರೆಯ ಎಎಂಓ/ಸಿಎಂಓ ಅವರು ಶಹಾಪುರ ಆಸ್ಪತ್ರೆಗೆ ಬಂದ ಅನುದಾನವನ್ನು ಸುಳ್ಳು ದಾಖಲೆ ಬಿಲ್ಲುಗಳನ್ನು ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ.ಆದ್ದರಿಂದ ಡಾ. ಪದ್ಮಾನಂದ ಗಾಯಕ್ವಾಡ್ ಅವರನ್ನು ಎಎಂಓ/ಸಿಎಂಓ ಹುದ್ದೆಯಿಂದ ಡಿಹೆಚ್ಓ ಅವರು ವರ್ಗಾವಣೆ ಮಾಡುತ್ತಿಲ್ಲ ಎಂದು ನಭಿಪಟೇಲ್ ಆರೋಪಿಸಿದ್ದಾರೆ.

ಈಗಾಗಲೇ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದು ಡಾ.ಪದ್ಮಾನಂದ ಗಾಯಕ್ವಾಡ್ ಅವರು ಮೂಲಸ್ಥಾನಕ್ಕೆ ವರ್ಗಾವಣೆ ಮಾಡಿ, ಸರ್ಕಾರದ ಆದೇಶಗಳನ್ನು ಪಾಲನೆ ಮಾಡದ ಡಿಎಚ್ಓ ಮಹೇಶ ಬಿರಾದಾರ ಅವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.