ಶಹಾಪುರ : ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಬಣದ ವತಿಯಿಂದ ರಾಜ್ಯ ಸಂಸ್ಥಾಪಕ ಸಂಯೋಜಕರಾದ ವಿ.ನಾಗರಾಜ ರವರ ಆದೇಶದ ಮೇರೆಗೆ ತಾಲೂಕು ವಿದ್ಯಾರ್ಥಿ ಘಟಕವನ್ನು ರಚಿಸಲಾಯಿತು ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಂಯೋಜಕರಾದ ರಾಯಪ್ಪ ಸಾಲಿಮನಿ ತಿಳಿಸಿದರು. ತಾಲೂಕು ವಿದ್ಯಾರ್ಥಿ ಘಟಕದ ಸಂಯೋಜಕರಾಗಿ ಅಂಬ್ಲಪ್ಪ ರಸ್ತಾಪೂರ,ನಗರ ಘಟಕದ ಸಂಯೋಜಕರಾಗಿ ಗೌತಮ ಮುಂಡಾಸ ಹಳಿಸಗರ, ಸಾಮಾಜಿಕ ಜಾಲತಾಣತ ತಾಲೂಕು ಸಂಯೋಜಕರಾಗಿ ದೇವರಾಜ್ ಹೊಸ್ಮನಿ ರವರನ್ನು ಆಯ್ಕೆ ಮಾಡಲಾಯಿತು ಎಂದರು.ಅದೇ ರೀತಿಯಾಗಿ ಜೆಕೆ ತಿಪ್ಪನಹಳ್ಳಿ, ಪ್ರವಿಣಕುಮಾರ ಹತ್ತಿಗೂಡುರು, ರಾಘವೇಂದ್ರ ಹಂಚಿನಾಳ, ಮರಿಲಿಂಗಪ್ಪ ಮದರಕಲ್, ಚಂದ್ರು ರಸ್ತಾಪೂರ, ಶರಣು ಕೆಂಭಾವಿ, ಮಲ್ಲು ಯಡ್ರಾಮಿ, ಸುದೀಪ್ಪ ಮದರಕಲ್, ಸಾಗರ ರಸ್ತಾಪೂರ,ಮಹೇಶ ಹಂಚಿನಾಳ, ಶರಬಣ್ಣ ರಸ್ತಾಪುರ, ಮರಿರಾಜ ಗುತ್ತಿಪೇಠ, ಸುನೀಲ್ ತಳವಾರ, ಅರ್ಜುನ್ ಹಳಿಸಗರ, ಸಾಯಿಕುಮಾರ ತಳವಾರ, ಅಯ್ಯಪ್ಪ ತಳವಾರ, ಹಣಮಂತ ಹೊಸ್ಮನಿ, ನಾಗರಾಜ ತಳವಾರ, ಗೌತಮ ಹಳಿಸಗರ, ಬಸವರಾಜ ರಸ್ತಾಪೂರ, ನಾಗರಾಜ ಹೊಸ್ಮನಿ, ರಾಕೇಶ್ ರಸ್ತಾಪೂರ, ವಿಜಯ ಆರಭೊಳ ಈ ಎಲ್ಲರನ್ನೂ ದಲಿತ ಸಂಘರ್ಷ ಸಮಿತಿ ಸಂಯೋಜಕ ಬಣದ ವಿವಿಧ ಸಮಿತಿಗಳ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಯೋಜಕರಾದ ಚಂದ್ರಶೇಖರ ಹತ್ತಿಗುಡುರು, ಅಂಬ್ರಪ್ಪ ಜೆಗ್ರಿ, ಮಾನಪ್ಪ ಜೆಗ್ರಿ, ಪರಶುರಾಮ ರೊಜಾ, ಚಂದ್ರಶೇಖರ ಹುಲಿಮನಿ, ವಿಶ್ವ ಬೀರನೂರ, ಜಿಲ್ಲಾ ವಿದ್ಯಾರ್ಥಿ ಸಂಯೊಜಕರಾದ ಶರಣು ಉಕ್ಕಿನಾಳ ಇದ್ದರು. ಲಕ್ಷ್ಮಣ ಹಳಿಸಗರ ನಿರೂಪಿಸಿದರು, ಶರಣು ಉಕ್ಕಿನಾಳ ಸ್ವಾಗತಿಸಿದರು, ಪರಶುರಾಮ ರೋಜಾ ವಂದಿಸಿದರು.